ಶ್ವೇತಾ ಅಶ್ವಿನ ಸಮಾಜಮುಖಿ ಕೆಲಸಕ್ಕೆ ಸಾರ್ವಜನಿಕರಿಂದ ಅಭಿನಂದನೆ

ವಡಗೇರಾ : ಸಮಾಜ ಸೇವಕಿ.ಶಿಕ್ಷಣ ಪ್ರೇಮಿ. ಮತ್ತು ಜೈ ಕರುನಾಡು ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ  ಶ್ವೇತಾ ಅಶ್ವಿನ ನಾಗಶೆಟ್ಟಿಹಳ್ಳಿ. ಸಂಜಯನಗರದ ಸುತ್ತಮುತ್ತಲಿನ ಬಡ ಜನರಿಗೆ ಅನುಕೂಲವಾಗಲಿ ಎಂದು  ಉಚಿತ ಜನಸೇವಾ ಕೇಂದ್ರವನ್ನು ತೆರೆದಿದ್ದಾರೆ.  ಈ ಕೇಂದ್ರದಲ್ಲಿ ಎಲ್ಲವನ್ನು ಉಚಿತವಾಗಿ  ಮಾಡಿಕೊಡುತ್ತಾರೆ ಇಲ್ಲಿ ದೊರಕುವ ಸೌಲಭ್ಯಗಳು ರೇಷನ್ ಕಾರ್ಡ್  ಆಧಾರ್ ಕಾರ್ಡ್ .ಇ ಶ್ರಮ್ ಕಾರ್ಡ್. ಪ್ಯಾನ್ ಕಾರ್ಡ್ . ಜಾತಿ ಆದಾಯ ಪ್ರಮಾಣ ಪತ್ರ. ಹೆಲ್ತ್ ಕಾರ್ಡ ಪ್ರಿಂಟ್ ಔಟ್. ಝರಾಕ್ಸ್, ಲ್ಯಾಮಿನೇಷನ್ ಹಾಗೂ ಇನ್ನಿತರ  ಅನೇಕ ಸೌಲಭ್ಯಗಳು ಸೇವೆಯನ್ನು ಉಚಿತವಾಗಿ ಒದಗಿಸುತಿದ್ದಾರೆ.

ಇವರು ಯಾವುದೆ   ಅಧಿಕಾರ ಒಂದಿಲ್ಲವಾದರು‌ ಅಧಿಕಾರದ ಆಸೆಗೆ ಬೀಳದೆ ಸ್ವಂತ ಖರ್ಚಿನಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.  ಈ ತರದ  ಜನಸೇವಾ ಕೇಂದ್ರವನ್ನು ಕಲ್ಯಾಣ ಕರ್ನಾಟಕ ಭಾಗದ ಯಾವುದಾದರೂ ಒಂದು ಹಿಂದುಳಿದ ತಾಲೂಕನ್ನು ಆಯ್ಕೆ ಮಾಡಿಕೊಂಡು ಅಲ್ಲಿಯೂ ಕೂಡ ಉಚಿತ  ಜನ ಸೇವಾ ಕೇಂದ್ರವನ್ನು ಆರಂಭಿಸುವ ಚಿಂತನೆಯಲ್ಲಿ ಇದ್ದೇನೆ ಎಂದು ಸಮಾಜ ಸೇವಕಿ ಶ್ವೇತಾ ರವರು ಹೇಳಿದರು.

ಶಿಕ್ಷಣ ಕ್ಷೇತ್ರಕ್ಕೂ ಕೂಡ  ಇವರು ಅಪಾರ ಕೊಡುಗೆ ನೀಡಿದ್ದಾರೆ ಮಕ್ಕಳಿಗೆ ಪಠ್ಯಪುಸ್ತಕ ಬ್ಯಾಗ್ ಹಾಗೂ
ಇನ್ನಿತರ ಸಲಕರಣೆಗಳನ್ನು ಕೂಡ ಪ್ರತಿ ವರ್ಷವೂ ನೀಡುತ್ತಾ ಬಂದಿದ್ದಾರೆ. ತಾವು ವಾಸವಿರುವ  ಬಡಾವಣೆಯಲ್ಲಿ ಏನೇ ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬಂದರೆ ಅವುಗಳನ್ನು ಸ್ವತಃ ದುಡ್ಡಿನಿಂದ ಮಾಡಿಸಿಕೊಟ್ಟ ಉಧಾರಣೆಗಳು  ಇವೆ. ಅನಾಥರು ನಿರ್ಗತಿಕರಿಗೂ ಕೂಡ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿ ಹಸಿದವರಿಗೆ ಅನ್ನ ನೀಡುವ ಮೂಲಕ ಬಡವರ ಪಾಲಿಗೆ ಬೆಳಕಾಗಿದ್ದಾರೆ. ಇವರ ಕಾರ್ಯಕ್ಕೆ ಶ್ರೀಮತಿ ರಾಧಿಕಾ ಕುಮಾರಸ್ವಾಮಿ ಯವರ ಸಹೋದರರಾದ ರವಿರಾಜ ಮಂಜು ಜೈ ಕರುನಾಡು ವೇದಿಕೆ ರಾಜ್ಯಾಧ್ಯಕ್ಷರಾದ  ಸತೀಶ್ ವಿಶ್ವನಾಥ ಶ್ವೇತಾ  ಪತಿಯವರಾದ ಅಶ್ವಿನ್ ಸಮಾಜ ಸೇವಕರಾದ ಮಾಳಿಂಗರಾಯ ಕಂದಳ್ಳಿ  ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಶ್ವೇತಾ ಅಶ್ವಿನ್ ರವರು ಇನ್ನಷ್ಟು ಹೆಚ್ಚಿನ ರೀತಿಯ ಸಮಾಜ ಸೇವೆಯಲ್ಲಿ ತೊಡಗಲಿ ಎಂದು ಅವರಿಗೆ  ಶುಭ ಹಾರೈಸಿದ್ದಾರೆ.

About The Author