ಶಹಾಪುರ : ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಚಾಲನೆ

ಶಹಾಪುರ : ಇಂದು ಬಿ ಜೆ ಪಿ ಶಹಾಪುರ ನಗರ ಮಂಡಲ ವತಿಯಿಂದ ” ನನ್ನ ಮಣ್ಣು ನನ್ನ ದೇಶ” ಅಭಿಯಾನವನ್ನು ನಗರದ  ಸಿದ್ದೇಶ್ವರ ಬೆಟ್ಟದಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಶಹಾಪುರ ಐತಿಹಾಸಿಕ ಕೋಟೆಯ ಮಹಾದ್ವಾರದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ನಗರ‌ ಮಂಡಲ‌ ಅಧ್ಯಕ್ಷರಾದ ದೇವಿಂದ್ರಪ್ಪ ಕೋನೇರ, ಬಿ ಜೆ ಪಿ‌ ಹಿರಿಯ ಮುಖಂಡರಾದ ಶಿವರಾಜ ದೇಶಮುಖ, ರಾಘವೇಂದ್ರ ಯಕ್ಷಂತಿ, ರಾಜು ಪಂಚಭಾವಿ, ಸಿದ್ದಯ್ಯ ಸ್ವಾಮಿ ಹಿರೇಮಠ, ವೆಂಕಟೇಶ ತುಳೇರ, ಪ್ರಭು ದೇವಿನಗರ, ಶಿವು ಸಗರ, ಧರ್ಮಣ್ಣ ಉತ್ತತ್ತಿ, ಮಂಜುನಾಥ ಅಲಬಾನೂರ್, ಬನ್ನಪ್ಪ ಸುರಪೂರಕರ್, ವಿಶ್ವನಾಥ ಗೊಡಗಾಂವ್, ಕಲ್ಲಪ್ಪ ಮ್ಯಾಳಗಿ, ಅಶೋಕ ಕಾಂಬಳೆ, ಪರಶುರಾಮ ಹಳಿಸಗರ, ವೆಂಕಪ್ಪ ಸೈದಾಪೂರ, ಬಸವರಾಜ ನಾಲವಾರ, ಮಲ್ಲಿಕಾರ್ಜುನ ಬೋನೆರ, ವೆಂಕಟೇಶ ಮೂಲಿಮನಿ, ಹಾಗೂ ಹಣಮಂತ ಕಟ್ಟಿಮನಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.