ಬೆಟ್ಟದ ಮಂದಾಕಿನಿ ತೀರ್ಥದ ಹನುಮಾನ ದೇವಸ್ಥಾನ ವಿವೇಕಾನಂದ ಬಳಗದ ಆಶ್ರಯದಲ್ಲಿ ಪವಮಾನ ಹೋಮ ಕಾರ್ಯಕ್ರಮ

“ಶಹಾಪುರ ಬೆಟ್ಟದ ಮಂದಾಕಿನಿ ತೀರ್ಥದ ಹನುಮಾನ ದೇವಸ್ಥಾನದಲ್ಲಿ ಸ್ವಾಮಿವಿವೇಕಾನಂದ ಬಳಗದ ಆಶ್ರಯದಲ್ಲಿ ಪವಮಾನ ಹೋಮ ಜರಗಿತು. ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು”

ಶಹಾಪುರ: ಐತಿಹಾಸಿಕ ಪೌರಾಣಿಕ ಪ್ರಸಿದ್ಧವಾದ ಶ್ರೀ ಮಹಿಪತಿದಾಸರು ತಪೋಗೈದ ಮಂದಾಕಿನಿ ತೀರ್ಥವಿರುವ ಬೆಟ್ಟದ ಪರಿಸರದಲ್ಲಿರುವ ಶ್ರೀ ಹನುಮಾನ ದೇವಸ್ಥಾನದಲ್ಲಿ, ಶ್ರಾವಣ ಮಾಸದ ನಿಮಿತ್ಯ ಸ್ವಾಮಿ ವಿವೇಕಾನಂದ ಬಳಗದ ವತಿಯಿಂದ ಪವಮಾನ ಹೋಮ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿತು.

ಪಂಡಿತರಾದ ರಾಮಾಚಾರ್ಯ ಪಾಲ್ಮೂರ ಅವರು, ಪವಮಾನ ಹೋಮ ನೆರವೇರಿಸಿ ಭಕ್ತರನ್ನು ಉದ್ದೇಶಿಸಿ, ಶ್ರೇಷ್ಠ ದಾರ್ಶನಿಕರಿಂದ ಪ್ರತಿಷ್ಠಾಪಿತ ಹನುಮಂತ ದೇವರ ಸೇವೆ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಬುದ್ಧಿ,ಬಲ,ಕೀರ್ತಿ,ಯಶಸ್ಸು,ಕರುಣಿಸುವ ಹನುಮಂತ ದೇವರ ಸೇವೆ ಕಳೆದ ಮೂರು ವರ್ಷಗಳಿಂದಲೂ ಬೆಟ್ಟ ಹತ್ತಿ ಬಂದು, ಹನುಮಂತ ದೇವರಿಗೆ ಪೂಜೆ, ಅಭಿಷೇಕ, ತೀರ್ಥ, ಪ್ರಸಾದ ವ್ಯವಸ್ಥೆ ನಿರಂತರವಾಗಿ ನಡೆಸಿಕೊಂಡು ಬಂದಿದ್ದಿರಿ, ಸರ್ವರ ಇಷ್ಟಾರ್ಥ ನೆರವೇರಲಿ, ಗುರು ಕಾರುಣ್ಯ ಸರ್ವರ ಮೇಲಿರಲಿ ಎಂದರು.ಸಮಸ್ತ ಮಂದಾಕಿನಿಯ ಸದ್ಭಕ್ತರು ಹಾಗೂ ಹಿರಿಯರು, ಯುವಕರು ಪಾಲ್ಗೊಂಡಿದ್ದರು.