ಗಬ್ಬೂರು ವಿಶ್ವೇಶ್ವರನ ಅನುಗ್ರಹ ತೀವ್ರ ಅಸ್ವಸ್ಥತೆಯಿಂದ ನಡೆಯಲು ಬಾರದ  ಶಾಂತಮ್ಮ ನಡೆದಾಡಿದಳು

“ವಿಶ್ವೇಶ್ವರನ ಅನುಗ್ರಹ ತೀವ್ರ ಅಸ್ವಸ್ಥತೆಯಿಂದ ನಡೆಯಲು ಬಾರದ  ಶಾಂತಮ್ಮ ನಡೆದಾಡಿದಳು”

ರಾಯಚೂರು : ಮಹಾಶೈವಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಸೆಪ್ಟೆಂಬರ್ 10 ರ ಆದಿತ್ಯವಾರದಂದು 61 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ವಿಶ್ವೇಶ್ವರ ಶಿವನ ಸನ್ನಿಧಿಯನ್ನರಿಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.

ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಮುಂದೆ ಭಕ್ತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸುತ್ತಿರುವುದು.

         ವೈದ್ಯರಲ್ಲಿ ತೋರಿಸಿಕೊಂಡು ಗುಣಮುಖಳಾಗದೆ ತೀವ್ರ ಅಸ್ವಸ್ಥತೆಯಿಂದ ಬಳಲುತ್ತ ನಡೆಯಲು ಬಾರದ ಖಾನಾಪುರದ ಮಹಿಳೆ ಶಾಂತಮ್ಮ ನಡೆಯುತ್ತ ಬಂದಿದ್ದು ಇಂದಿನ ‘ಶಿವೋಪಶಮನ ಕಾರ್ಯ’ ದ ವಿಶೇಷವಾಗಿತ್ತು.ಖಾನಾಪುರ ಗ್ರಾಮದ ಶಾಂತಮ್ಮ ಎನ್ನುವ ಮಹಿಳೆಯು ವೈದ್ಯರಲ್ಲಿ ತೋರಿಸಿ,ನಾನಾ ತರಹದ ಚಿಕಿತ್ಸೆ ಮಾಡಿಸಿಕೊಂಡು ಗುಣಮುಖಳಾಗದೆ ಅಗಸ್ಟ್ 20 ರಂದು ಮಹಾಶೈವ ಧರ್ಮಪೀಠದಲ್ಲಿ ನಡೆದ 58 ನೆಯ ಶಿವೋಪಶಮನ ಕಾರ್ಯಕ್ಕೆ ಶಿವಾಭಯವನ್ನು ಬೇಡಿ ಬಂದಿದ್ದರು.
ಮಹಾಶೈವ ಪೀಠದಲ್ಲಿ ದಾಸೋಹ ಸ್ವೀಕರಿಸುತ್ತಿರುವ  ಭಕ್ತರು
ನಡೆಯಲಾರದಷ್ಟು ತೀವ್ರ ನಿಶಕ್ತಿಯಿಂದ ಬಳಲುತ್ತಿದ್ದ ಶಾಂತಮ್ಮನನ್ನು ಆದಿನ ಹೊತ್ತುಕೊಂಡು ಬಂದಿದ್ದರು. ತೀವ್ರ ನಿಶಕ್ತಿಯಿಂದ ಬಳಲಿ ಖುರ್ಚಿಗಾನಿಸಿ ಕುಳಿತಿದ್ದ ಶಾಂತಮ್ಮನ ಬಳಿ ಪೀಠಾಧ್ಯಕ್ಷರೇ ಸ್ವತಃ ಹೋಗಿ ಆರೋಗ್ಯವಿಚಾರಿಸಿ  ವಿಶ್ವೇಶ್ವರ ಶಿವನಲ್ಲಿ ಆಕೆಯ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದರು.ಇಂದು ಶಾಂತಮ್ಮ ತನ್ನ ತಂದೆ ಮತ್ತು ಸಹೋದರಿಯ ನೆರವಿನಿಂದ ಮಹಾಶೈವಧರ್ಮಪೀಠದ ದ್ವಾರದಿಂದ ನಡೆಯುತ್ತ ಬಂದಳು.ಭವರೋಗವೈದ್ಯ ವಿಶ್ವೇಶ್ವರ ಶಿವನ‌ಲೆಯಿಂದ ಮಹಾಶೈವ ಧರ್ಮಪೀಠದಲ್ಲಿ ಇಂತಹ ಪವಾಡಸದೃಶ ಘಟನೆಗಳು ಘಟಿಸುವುದು ಸಾಮಾನ್ಯವಾಗಿದೆ.
           ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ಮೂಲ ಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಮಹಾಶೈವ ಧರ್ಮಪೀಠದ ದಾಸೋಹಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ,ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರಾದ ಉದಯಕುಮಾರ ಪಂಚಾಳ, ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಉಮೇಶ ಸಾಹುಕಾರ ಅರಷಣಗಿ, ಶಿವಯ್ಯಸ್ವಾಮಿ ಮಠಪತಿ,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ,ಮೃತ್ಯುಂಜಯ ಯಾದವ್, ಸಿದ್ರಾಮಯ್ಯ ಸ್ವಾಮಿ ಹಳ್ಳಿ, ಯಲ್ಲಪ್ಪ ಕರಿಗಾರ, ತಾತಪ್ಪ ಚಿಕ್ಕನಳ್ಳಿ,ಪತ್ರಕರ್ತರಾದ ಏಳುಬಾವೆಪ್ಪಗೌಡ,ಬಸವರಾಜ ಬ್ಯಾಗವಾಟ,ಬೆಟ್ಟಪ್ಪ,ತಿಪ್ಪಯ್ಯ ಭೋವಿ  ,ಅಕ್ರಂಪಾಶಾ,ಶಿವಕುಮಾರ ವಾಸ್ತರ್,ಹಾಗೂ ಮಹಾಶೈವ ಧರ್ಮಪೀಠದ ಪ್ರಸಾರ ವ್ಯವಸ್ಥಾಪಕ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

About The Author