ಹರಿಪ್ರಸಾದರವರೆ ಚುನಾವಣೆ ಎದುರಿಸಿ ಗೆದ್ದು ತೋರಿಸಿ : ಸಾಬಣ್ಣ ಎಂ ಪೂಜಾರಿ ಕೊಲ್ಲೂರು ವಾಗ್ದಾಳಿ

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿರುವ ಮಾನ್ಯ ಶ್ರೀ ಬಿ. ಕೆ ಹರಿಪ್ರಸಾದ್ ಅವರೇ ತಾವು ಒಮ್ಮೆಯಾದರು ಚುನಾವಣೆಗೆ ಸ್ಪರ್ಧೆ ಮಾಡಿ ಚುನಾಯಿತ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದೀರಾ? ಸಾಬಣ್ಣ ಎಂ ಪೂಜಾರಿ  ಕೊಲ್ಲೂರು ವಾಗ್ದಾಳಿ ನಡೆಸಿದರು.

2 ಭಾರಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಹಲವು ಭಾರಿ ಮಂತ್ರಿಯಾಗಿ, 8 ಭಾರಿ ಶಾಸಕರಾಗಿ 14 ಭಾರಿ ರಾಜ್ಯ ಬಜೆಟ್ ಮಂಡಿಸಿರುವ ಸದಾ ಬಡವರ ಏಳಿಗೆಗಾಗಿ ಶ್ರಮಿಸುತ್ತಿರುವ ಜನಪ್ರಿಯ ಮುಖ್ಯಮಂತ್ರಿ ನಮ್ಮೆಲ್ಲರ ಹೆಮ್ಮೆಯ ನಾಯಕ   ಸಿದ್ದರಾಮಯ್ಯನವರ ವಿರುದ್ಧ ಮಾತನಾಡುವುದಕ್ಕೆ ಅವರಿಗೆ ಪ್ರಶ್ನೆ ಮಾಡೋದಕ್ಕೆ ತಾವು ಯಾರು? ತಮಗೆ ಯಾವ ನೈತಿಕತೆ ಇದೇ ಹೇಳಿ ಮಾನ್ಯ ಶ್ರೀ ಬಿ. ಕೆ. ಹರಿಪ್ರಸಾದ್ ಅವರೇ? ಇದಕ್ಕೆ ಉತ್ತರಿಸಿ ಎಂದು ಹರಿಹಾಯ್ದರು.