ಶಹಾಪುರ ಖಾಸಗಿ ಶಾಲೆಗಳ ಒಕ್ಕೂಟದ ಸಮಾರಂಭ | ನಿರಂತರ ಶ್ರಮ ಶ್ರದ್ಧೆಯಿಂದ ಮೌಲ್ಯಯುಕ್ತ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ : ಶರಣಬಸಪ್ಪಗೌಡ ದರ್ಶನಾಪುರ

 

ಶಹಾಪುರ ತಾಲೂಕಾ ಖಾಸಗಿ ಶಾಲೆಗಳ ಒಕ್ಕೂಟದಿಂದ ೨ನೇ ಸಮ್ಮೇಳನದ ಹಾಗೂ ಉತ್ತಮ ಶಿಕ್ಷಕರ ಪ್ರಶಸ್ತಿ ಸಮಾರಂಭ ಕಾರ್ಯಕ್ರಮಕ್ಕೆ ಶಾಸಕ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರವರು ಚಾಲನೆ ನೀಡಿದರು.

*******

yadgiri ಶಹಾಪುರ: ನಿರಂತರ ಪರಿಶ್ರಮ ಶ್ರದ್ಧೆಯಿಂದ ಬೋಧನೆ ಮಾಡುವ ಮೂಲಕ, ಮೌಲ್ಯಯುಕ್ತ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಗುರುತರ ಹೊಣೆಗಾರಿಕೆ ಶಿಕ್ಷಕ ವೃಂದದವರಲ್ಲಿದ್ದು, ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಮುನ್ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳ ಪ್ರಯತ್ನ ಸಾರ್ಥಕವಾಗಿದೆ ಎಂದು ಸಣ್ಣ ಕೈಗಾರಿಕೆ ಸಾರ್ವಜನಿಕ ಉದ್ಯಮ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು. ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಸಭಾಂಗಣದಲ್ಲಿ ನಡೆದ ಖಾಸಗಿಶಾಲೆಗಳ ೨ ನೇ ಸಮ್ಮೇಳನ ಹಾಗೂ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ವೈಶಿಷ್ಟತೆಯನ್ನು ಹೊಂದಿದ್ದು. ಉನ್ನತ ಶಿಕ್ಷಣದ ಅಭಿವೃದ್ದಿಯಲ್ಲಿ ಖಾಸಗಿ ಸಂಸ್ಥೆಗಳ ಪಾತ್ರ ಬಹುಮುಖ್ಯವಾಗಿದೆ, ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಉತ್ತಮ ಶಿಕ್ಷಣವನ್ನು ನೀಡುವ ಕೆಲಸ ಮಾಡುತ್ತಿವೆ, ಈ ಭಾಗದಲ್ಲಿ ೩೭೧ ಜೆ ಕಲಂನಿoದಾಗಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಆನೆ ಬಲ ಬಂದ0ತಾಗಿದೆ. ಶಿಕ್ಷಣದಲ್ಲಿ ಕಲ್ಯಾಣ ಕರ್ನಾಟಕದ ೭ ಜಿಲ್ಲೆಗಳು ಕೊನೆಯ ಭಾಗದಲ್ಲಿವೆ. ಆರ್‌ಟಿಇ ಅವಶ್ಯಕತೆ ಬಹಳ ಇದ್ದು ಒಳ್ಳೆಯ ಶಾಲೆಗಳಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಿತ್ತು, ಇದರ ಪುನರಾರಂಭವಾಗಬೇಕಿದೆ ಎಂದ ತಿಳಿಸಿದರು.

ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉತ್ತಮ ಶಿಕ್ಷಕರಿಗೆ ಗೌರವಿಸಲಾಯಿತು

ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉತ್ತಮ ಶಿಕ್ಷಕಿಯರಿಗೆ ಗೌರವಿಸಲಾಯಿತು

********

     ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು

ತಾಲೂಕ ಖಾಸಗಿ ಶಾಲೆಗಳ ಒಕ್ಕೂಟದ ಆರ್.ಚನ್ನಬಸ್ಸು ವನದುರ್ಗ ವಕೀಲರು ಅಧ್ಯಕ್ಷತೆ ವಹಿಸಿ ಮಾತನಾಡಿ ಖಾಸಗಿ ಶಾಲೆಗಳ ಮುಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ಶಾಲೆಗಳ ಮನ್ನಣೆ ನವೀಕರಣ ಸೇರಿದಂತೆ ಇನ್ನಿತರ ಕೆಲಸಗಳಿಗೆ ಸರಳೀಕರಣ ಮಾಡಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಶಿಬಾ ಜಿಲಿಯನ್ ಮಾತನಾಡಿ, ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಲಿ, ಈ ಭಾಗದ ವಿದ್ಯಾರ್ಥಿಗಳು ಎಲ್ಲಾ ರಂಗದಲ್ಲೂ  ಮುಂದೆಬರಲು ಶಿಕ್ಷಕರು, ಸಂಸ್ಥೆಗಳು, ಕಾಳಜಿವಹಿಸಲಿ ಎಂದರು.

ಖಾಸಗಿ ಶಾಲೆಗಳ ಶಿಕ್ಷಕರಿಗೆ ವಿಷಯವಾರು ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಕಾರ್ಯಗಾರಗಳನ್ನು ಮಾಡವ ಅವಶ್ಯಕತೆಯಿದೆನ ಈ ನಿಟ್ಟಿನಲ್ಲಿ ಸಹಕಾರ ನೀಡೋಣ ಎಂದರು.

    ಈ ಸಂದರ್ಭದಲ್ಲಿ ಕೃಷಿಮಹಾವಿದ್ಯಾಲಯದ ಡೀನ್.ಡಾ.ಪಿ.ಹೆಚ್.ಕುಚನೂರ, ಶರಣಗೌಡ ಪಾಟೀಲ್, ವಿ.ಸತ್ಯಂರೆಡ್ಡಿ, ಲೀನಾ ಪ್ರೇಮಾನಂದA, ಪ್ರದೀಪ ಪುರ್ಲೆ,ಶರಣಗೌಡ ಮುನಮುಟಿಗಿ, ನಾಸಿರುದ್ದೀನ್ ಲಲ್ಲೋಟಿ, ಜಯಪ್ರಕಾಶ ಚೌದ್ರಿ, ತಿಪ್ಪಣ್ಣ ಕ್ಯಾತನಾಳ, ಶ್ರೀಕಾಂತ ಜೈನ್, ಅವಿನಾಶ ಶಿನ್ನೂರು, ಅಮೃತಲಾಲ ಜೈನ್, ಡಾ.ದೇವಿಂದ್ರಪ್ಪ ಹಡಪದ, ಶಿವನಗೌಡ ಮಾ.ಪಾಟೀಲ, ಇಸ್ಮಾಯಿಲ್ ಸೌದಾಗರ, ಕಲೀಲಾ ಉನ್ನಿಸ್,ಭೀಮಣ್ಣಗೌಡ ಬಿರಾದಾರ, ಭೀಮನಗೌಡ ಪಾಟೀಲ, ಸದಾಶಿವಯ್ಯ ಆದೋನಿ,ಲೋಕೇಶ, ಸಂಗಣ್ಣ ದೊರೆ, ಹಣಮಂತ್ರಾಯ ಸಾಹು, ಹೊನ್ನಪ್ಪ ಗಂಗನಾಳ, ಮಹಿಬೂಬ,ಅಶೋಕ ಘನಾತೆ, ಲೋಕೇಶ ಬಾಬು, ಗುರುರಾಜಗೋಗಿ, ಕರೀಂ ಸಾಬ್, ಮಲ್ಲಿಕಾರ್ಜುನ ಪಾಟೀಲ, ರಾಮು ಸಗರ, ರಮೇಶ ಟಕ್ಕಳಕಿ,ಶಿವಶಂಕರ,ಚೆನ್ನಯ್ಯ, ಸೇರಿದಂತೆ ಖಾಸಗಿ ಶಾಲೆ ಒಕ್ಕೂಟದ ಪದಾಧಿಕಾರಿಗಳು, ಶಿಕ್ಷಕರು ಇದ್ದರು. ಮಲ್ಲಯ್ಯ ಹಿರೇಮಠ ತಂಡದವರು ಸಂಗೀತ ಕಾರ್ಯಕ್ರಮ, ಶಾರದಾ ವಿದ್ಯಾನಿಕೇತನ ಮತ್ತು ಸ್ವಾಮಿವಿವೇಕಾನಂದ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ದೋರನಹಳ್ಳಿಯ ರಾಜೀವಗಾಂಧಿ ಶಾಲೆಯ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಿದರು.

 

About The Author