ಚಂದ್ರಿಕೆ
ನಗು ಮೊಗದ ಚಂದ್ರಿಕಿ
ನೀ ಶ್ರೀರಾಮನಂತಹ ಜಾನಕಿ
ಆಗಸದ ತಂಪು ಶಶಿಯನು ಕಂಡು
ಗರಿ ಬಿಚ್ಚಿ ಕುಣಿದ ನವಿಲಿನಂತಾಕಿ
ಹಂಸದ ಬಣ್
ನೋಡಿ ಕುಕ್ಕಿವೆ ಕಣ್ಣ
ಮನಸು ಸಿಹಿ ಸೇಬು ಹಣ್ಣ
ನಿನ್ನಲಿವೆ ಬಂಗಾರದ ಗುಣ
ದಂತದ ಮೈಯವಳು
ಕಾಮನಬಿಲ್ಲನ್ನು ಕಣ್ಣಲ್ಲಿ ತೀಡಿದವಳು
ನಗುವಿನ ಸಿಹಿ ಸಕ್ಕರೆ ನೀಡಿದವಳು
ಮಿಲನ ಮಹೋತ್ಸವದೀ ಮಿಂದವಳು
ಕಣ್ಣಿಗೆ ಹಚ್ಚಿಹಳು ಕಾಡಿಗೆ
ಹೇಳಿದ ಮೇಲೆ ಮನೆ ಬಾಡಿಗೆ
ಜೋರು ಮಾಡಿದಳು ಕಾಲ್ನಡಿಗೆ
ತಳ್ಳಿಹಳು ವಿರಹದ ಗೊಂಡಾರಣ್ಯವೆಂಬ ಕಾಡಿಗೆ
ಕವಿಮನ ಮೌನೇಶ ಪೂಜಾರಿ