ಸರಕಾರ ಯಾದಗಿರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ ಅವರಿಗೆ ಗದ್ದುಗೆ ಸನ್ಮಾನ

ಶಹಾಪುರ:ಶಹಾಪುರ ತಾಲ್ಲೂಕಿನ ವಿವಿಧ ಇಲಾಖೆಗಳ ವೀಕ್ಷಣೆಗೆ ಆಗಮಿಸಿದ ಕರ್ನಾಟಕ ಸರ್ಕಾರ ಯಾದಗಿರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ ಪ್ರಸಿದ್ಧ ದಾಸೋಹ ಕ್ಷೇತ್ರ ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆ 101 ನೇ ವರ್ಷದ ಹೊಸ್ತಿಲಲ್ಲಿ ಕಾಲಿಡುತ್ತಿರುವ ನಿಮಿತ್ತವಾಗಿ ದರ್ಶನಕ್ಕೆ ಆಗಮಿಸಿದಾಗ ಸಂಸ್ಥಾನ ಗದ್ದುಗೆ ವಂಶಸ್ಥರು ಹಾಗೂ ಕರವೇ ಉತ್ತರ ಕರ್ನಾಟಕ ಅದ್ಯಕ್ಷರಾದ ಶರಣು ಬಿ ಗದ್ದುಗೆ ಅವರು ಶಾಲು ಹೊದಿಸಿ ಗೌರವಿಸಿದರು.ಈ ಹಿಂದೆ ಯಾದಗಿರಿ ಜಿಲ್ಲೆಗೆ ಜಿಲ್ಲಾಧಿಕಾರಿಗಳಾಗಿ ಆಗಿ ಸೇವೆ ಸಲ್ಲಿಸಿದ್ದರು.ಯಾದಗಿರಿ ಸಹಾಯಕ ಆಯುಕ್ತರಾದ ಡಾ ಹಂಪಣ್ಣ ಸಜ್ಜನ್,ಶಹಾಪುರ ತಹಶಿಲ್ದಾರರಾದ ಉಮಾಕಾಂತ ಉಳ್ಳೆ,ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *