ಗುಡುಗು ಸಹಿತ ಸುರಿದ  ಮಳೆಗೆ ನೆಲಕಚ್ಚಿದ ಭತ್ತ

ಶಹಾಪುರ; ರಾತ್ರಿಯಿಡಿ ಗುಡುಗು ಸಹಿತ ಸುರಿದ  ಮಳೆಗೆ  ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ನೆಲಕಚ್ಚಿದೆ. ಬೆಳೆಗಳು ಮಣ್ಣು ಪಾಲಾಗಿವೆ. ಜೋಳ, ಭತ್ತ, ಸಜ್ಜಿ  ಬೆಳೆಗಳು ನಾಶವಾಗಿವೆ.ಈ  ವರ್ಷ ಭತ್ತದ ಬೆಳೆ ಚೆನ್ನಾಗಿತ್ತು. ಆದರೆ ಅಕಾಲಿಕ ಮಳೆ ಅವಾಂತರಕ್ಕೆ ರೈತರ ಬದುಕು ಸರ್ವನಾಶವಾಗಿದ್ದು ನೆಲಕಚ್ಚಿದ ಬೆಳೆ ನೋಡಿ ಅನ್ನದಾತರು ಕಣ್ಣಿರು ಸುರಿಸುತ್ತಿದ್ದಾರೆ. ಕಷ್ಟ ಪಟ್ಟು ಬೆಳೆದ ಬೆಳೆ ರಾತ್ರಿ ಸುರಿದ ಗಾಳಿ ಮಳೆಗೆ ನೆಲಕಚ್ಚಿದೆ.
  ಗುರುವಾರ ರಾತ್ರಿ ಸುರಿದ ಅಕಾಲಿಕ ಮಳೆಗೆ ರೈತರ ಬದುಕೆ ಕುಸಿಯುವಂತಾಗಿದೆ. ರೈತರು ಸಾಕಷ್ಟು ಸಾಲ ಮಾಡಿ ಗೊಬ್ಬರ ಔಷಧ ಸಿಂಪಡಣೆ ಮಾಡಿರುತ್ತಾರೆ.ಆದರೆ ಮಳೆ ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಕಸಿದುಕೊಂಡಿದೆ. ನೆಲಕಚ್ಚಿದ ಬೆಳೆಗೆ ಪರಿಹಾರ ಒದಗಿಸಬೇಕು ಎಂದು ರೈತ ಮಲ್ಲಪ್ಪ ಹೊತಪೇಠ  ಕಣ್ಣಿರು  ಹಾಕಿದ್ದಾರೆ. ಕೂಡಲೇ ತಾಲೂಕ ಕೃಷಿ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿ ರೈತರಿಗೆ ಪರಿಹಾರ ಒದಗಿಸಿ ಕೊಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಕಷ್ಟಪಟ್ಟು ಬೆಳೆದ ಬೆಳೆಗಳು ಮಳೆಗೆ ನೆಲಕಚ್ಚಿದ್ದು ಆಘಾತ ಉಂಟಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ ಹೀಗೆ ವ್ಯರ್ಥವಾಗಿದ್ದು ನಮ್ಮ ಶ್ರಮ ವ್ಯರ್ಥವಾಗಿದೆ,ಕೂಡಲೆ ಪರಿಹಾರ ಒದಗಿಸಬೇಕು.
ಬಾಬು ದಾಮುನಾಯಕ ರಾಠೋಡ
                                                                                                                    ರೈತ 

About The Author