ಆರೋಗ್ಯ ಮೇಳಗಳು ಹಳ್ಳಿಯ ಜನರಿಗೆ ಅನುಕೂಲ:ಡಾ.ಭಗವಂತ ಅನ್ವರ

ಶಹಾಪುರ::ಆರೋಗ್ಯ ಮೇಳಗಳು ಹಳ್ಳಿಯ ಜನರಿಗೆ ಅನುಕೂಲ ಎಂದು ಜಿಲ್ಲಾ ಕುಷ್ಟರೋಗ ನಿರ್ಮುಲನಾ ಅಧಿಕಾರಿ ಡಾ, ಭಗವಂತ ಅನ್ವರ ಕರೆ ನೀಡಿದರು.ಶಹಾಪುರ ತಾಲುಕಾ ಮಟ್ಟದ ಆರೋಗ್ಯ ಮೇಳದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದರು.ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಂದು ಜೀವಿಗೂ ನಾನಾರೋಗ ಬಾದೆಗಳು ಉಂಟಾಗುವ ಸಹಜದ ಸಂಗತಿಯಾಗಿದ್ದು, ಅವುಗಳನ್ನು ನಿಗ್ರಹಿಸಕೊಳ್ಳುವದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ನಗರದ ಜೀವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ತಾಲುಕು ಆರೋಗ್ಯ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು.ಆರೋಗ್ಯ ಇಲಾಖೆ ನೂರಾರು ಯೋಜನೆಗಳನ್ನು ಜಾರಿಗೊಳಿಸಿ ಅವುಗಳನ್ನು ಅನುಷ್ಟಾನಗೊಳಿಸಿದರೂ ಇನ್ನೂ ಜನರು ಜಾಗೃ ತವಾಗಬೇಕಿದೆ ಎಂದರು. ತಾಲುಕಾ ಮಟ್ಟದಲ್ಲಿ ಇಂತಹ ಆರೋಗ್ಯ ಮೇಳಗಳು ಜರುಗುವದರಿಂದ ಪ್ರತಿಯೊಬ್ಬರಲ್ಲಿ ಆರೋಗ್ಯ ಕುರಿತು ಮನವರಿಕೆ ಮಾಡಕೊಂಡು ತಮ್ಮ ಕುಟುಂಬ ಪರಿವಾರದೊಂದಿಗೆ ಆಗಮಿಸಿ ಆರೋಗ್ಯ ರಕ್ಷಣೆಗೆ ಮುಂದಾಗಬೇಕಿದೆ.ಹೆಚ್ಚಾಗಿ ಹಳ್ಳಿಯ ಜನರು ಆಗಮಿಸಿದ್ದು ಆರೋಗ್ಯ ಕುರಿತು ಹೆಚ್ಚು ಅರಿತುಕೊಳ್ಳಬೇಕು ಎಂದರು.
   ಆಯುಷ್ಮಾನ ಭಾರತ ಕರ್ನಾಟಕದಡಿಯಲ್ಲಿ ಒಂದು ಲಕ್ಷದಿಂದ ಐದು ಲಕ್ಷದವರೆಗೂ ಉಚಿತ ಚಿಕಿತ್ಸೆ ಸೌಲಭ್ಯ ನೀಡಲಾಗಿದೆ. ಈ ಕುರಿತು ಸರ್ವರು ಆಯುಷ್ಮಾನ ಭಾರತದಡಿಯಲ್ಲಿ ಕಡ್ಡಾಯವಾಗಿ ನೊಂದಣಿ ಮಾಡಿಕೊಳ್ಳಬೇಕು ಎಂದರು. ಪ್ರತಿಯೊಬ್ಬರು ಆಧಾರ ಕಾರ್ಡ ಮತ್ತು ರೇಷನ ಕಾರ್ಡ ಹೊಂದಿರಬೇಕು ಎಂದರು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಸರ್ಕಾರ ಮತ್ತು ಸಾರ್ವಜನಿಕರ ಮಧ್ಯದಲ್ಲಿ ಸೇತುವೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ನಿಮ್ಮ ಮನೆಗಳಿಗೆ ಧಾವಿಸಿದಲ್ಲಿ ಆರೋಗ್ಯ ಮತ್ತು ಇತರೆ ವಿಷಯಗಳ ಕುರಿತು ಚರ್ಚಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದರು.ಅಲ್ಲದೆ ಆರೋಗ್ಯ ಆಪ್ ಪ್ರತಿಯೊಬ್ಬರು ಡೌನ್ ಲೋಡ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
 ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷರಾದ ಕಮಲಾಬಾಯಿ ಚಂದ್ರಶೇಖರ ಲಿಂಗದಳ್ಳಿ ಉಧ್ಘಾಟಿಸಿದರು. ಮುಖ್ಯ ಅಥಿತಿಗಳಾಗಿ ನಗರಸಭೆ ಪೌರಾಯುಕ್ತರಾದ ಓಂಕಾರ ಪೂಜಾರಿ, ವೈದ್ಯಾಧಿಕಾರಿಗಳಾದ ಯಲ್ಲಪ್ಪ ಪಾಟೀಲ್. ವೆಂಕಟೇಶ ಬೈರಾಮಡಗಿ.  ಜಗದೀಶ ಉಪ್ಪಿನ,ಅರುಣಕುಮಾರ, ರತ್ನಾ,ಬಸವರಾಜ,ಜಮುನಾ,ಹನುಮಂತ್ರಡ್ಡಿ.ಭೀಮನಗೌಡ ಶರಣು ಹೊಸಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ತಾಲುಕಾ ವೈಧಾಧಿಕಾರಿ ರಮೇಶ ಗುತ್ತೆದಾರ ವಹಿಸಿ ಸರ್ವರನ್ನು ಸ್ವಾಗತಿಸಿದರು.ಆರೋಗ್ಯ ಸಹಾಯಕರಾದ ಮಲ್ಲೇಶಿ ಕುರುಕುಂದಿ ಕಾರ್ಯಕ್ರಮ ನಿರೂಪಿಸಿದರು. ಸಂಗಣ್ಣ ನುಚ್ಚಿನ, ಮಲ್ಲಪ್ಪ ಕಾಂಬಳೆ.ತಾ,ಪ, ಸಹಾಯಕ ನಿರ್ಧೆಶರಕರಾದ ಬೀಮನಗೌಡ ಬಿರೆದಾರ. ಸೇರಿದಂತೆ ಇತರರು ಇದ್ದರು.

About The Author