ಶ್ರದ್ಧಾ ಭಕ್ತಿಯಿಂದ ಶ್ರೀ ಗುಡ್ಡದ ಮೌನೇಶ್ವರ ಜಾತ್ರೆ | ಧರ್ಮ ಮಾರ್ಗ ಮತ್ತು ದೇವರು ದೇಶದ ಜೀವಾಳ

ಶಹಾಪುರ: ಭಾರತ ಧರ್ಮ ಪ್ರಧಾನವಾಗಿದ್ದು, ಧರ್ಮ ಮತ್ತು ದೇವರು ಈ ದೇಶದ ಜೀವಾಳವಾಗಿದ್ದು, ಧರ್ಮ ಮಾರ್ಗದಲ್ಲಿ ಮುನ್ನಡೆದವರನ್ನು ಭಗವಂತ ಸದಾಕಾಲ ಸಂರಕ್ಷಿಸುತ್ತಾನೆ ಎಂದು ವಿಶ್ವಕರ್ಮ ಏಕದಂಡಗಿ ಮಠದ ಪೂಜ್ಯರಾದ ಶ್ರೀ ಅಜೇಂದ್ರ ಸ್ವಾಮಿಗಳು ತಿಳಿಸಿದರು.

ನಗರದ ಬೆಟ್ಟದ ಪರಿಸರದಲ್ಲಿರುವ ಗುಡ್ಡದ ಮೌನೇಶ್ವರ ಪಲ್ಲಕ್ಕಿ ಜಾತ್ರೆ ಎರಡು ದಿನಗಳವರೆಗೆ ನಡೆದು, ಹಳಪೇಟೆಯ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ಆಯೋಜಿಸಿದ್ದ ಸಮಾರೋಪ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪೂಜ್ಯರು, ನೀ ನಡೆದು ಪಾದವನಿಟ್ಟ ನೆಲವೇ ಸುಕ್ಷೇತ್ರ, ಜಲವೇ ಪಾವನ ತೀರ್ಥ ಎಂಬAತೆ ,ಬೇಡಿದ ಭಕ್ತರ ಸರ್ವ ಇಷ್ಟಾರ್ಥಗಳನ್ನು ಪೂರ್ತಿಗೊಳಿಸುವ ತಾಣ ಗುಡ್ಡದ ಮೌನೇಶ್ವರರು. ದಿವ್ಯಜ್ಯೋತಿಯಾಗಿ ನಂಬಿದ ಭಕ್ತರ ಆರಾಧ್ಯರಾಗಿದ್ದು, ನಿರಂತರ ನಡೆಯುತ್ತಿರುವ ಭಕ್ತರ ಸೇವೆ ಉತ್ತಮ ಸಮಾಜ ನಿರ್ಮಾಣಕ್ಕೆ ಮೇಲ್ಪಂಕ್ತಿ ಎಂದರು.

ಇದೇ ಸಂದರ್ಭದಲ್ಲಿ ನಗರದ ಹಳೆಪೇಟೆಯ ಕಾಳಿಕಾ ದೇವಸ್ಥಾನದಿಂದ ಪಲ್ಲಕ್ಕಿ ಮೆರವಣಿಗೆ ಗುಡ್ಡದ ಮೌನೇಶ್ವರ ದೇವಸ್ಥಾನದವರೆಗೂ ನಡೆಯಿತು.ಗುಡ್ಡದ ಮೌನೇಶ್ವರ ದೇವಸ್ಥಾನ ಕಮಿಟಿಯ ಅಧ್ಯಕ್ಷ ಹನುಮಂತ್ರಾಯಗೌಡ ಮಾಲಿಪಾಟೀಲ, ಅರ್ಚಕರಾದ ನಾರಾಯಣ ಪತ್ತಾರ, ಚಂದ್ರಶೇಖರ ಪತ್ತಾರ ಕನ್ಯೆಕೊಳೂರು, ದೇವೇಂದ್ರಪ್ಪ ಕನ್ಯಕೋಳೂರು, ಸಂತೋಷ ಪತ್ತಾರ, ಶ್ರೀಕಾಂತ ಕಂಬಾರ, ಅಂಬರೀಶ ಬಿಜಾಪುರ, ಶರಬಣ್ಣ, ಬಸವರಾಜ ಸೈದಾಪುರ, ಅನೀಲಬಡಿಗೇರ,ರವಿಸಿಂಗ್, ಶ್ರೀಧರ, ವೀರೇಶ ಬಡಿಗೇರ, ದೇವುಬಡಿಗೇರ ,ಮಹೇಶ, ರಾಘವೇಂದ್ರ ಪತ್ತಾರ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು, ವಿಶೇಷ ಸೇವೆಗೈದ ಗಂಗಾಮತಸ್ಥರು ಮತ್ತು ವಿಶ್ವಕರ್ಮ ಸಮಾಜ  ಬಂಧುಗಳು ಇದ್ದರು.

About The Author