ಶಿಕ್ಷಕರು ದೇಶ ನಿರ್ಮಾಣದ ನಿರ್ಮಾತೃಗಳು : ಪಿಬಿ ಗಾಯತ್ರಿ

YADGIRI ವಡಗೇರಾ : ಶಿಕ್ಷಕರು ದೇಶ ನಿರ್ಮಾಣದ ನಿರ್ಮಾತ್ರುಗಳು ಎಂದು ಕಸ್ತೂರಿ  ಬಾ.ಬಾಲಕಿಯರ ವಸತಿ ನಿಲಯದ ಮುಖ್ಯ ಶಿಕ್ಷಕಿ ಪಿಬಿ. ಗಾಯತ್ರಿ ಹೇಳಿದರು. ಪಟ್ಟಣದ ಕಸ್ತೂರಿ ಬಾ ಬಾಲಕಿಯರ ವಸತಿ ನಿಲಯದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಸರ್ವಪಲ್ಲಿ ರಾಧಾಕೃಷ್ಣರವರು ಜನ್ಮದಿನದಂದು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಣೆ ಮಾಡಲಾಗುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ಹಾರೈಕೆ ಮಾಡುವುದರ ಜೊತೆಗೆ ಒಳ್ಳೆಯ ಶಿಕ್ಷಣ ಸಂಸ್ಕೃತಿ ಕಲಿಸಿಕೊಡುವುದರ ಜೊತೆಗೆ  ತನ್ನ ಶಿಷ್ಯ ಸಮಾಜದಲ್ಲಿ ಒಬ್ಬ ಉನ್ನತ ವ್ಯಕ್ತಿಯಾಗಿ ನೋಡಲು ಬಯಸುತ್ತಾರೆ.
” ಕೃಷ್ಣ ಜನ್ಮಾಷ್ಟಮಿ  ಶ್ರೀ ಕೃಷ್ಣನ ವೇಷದಲ್ಲಿ  ಶೌರ್ಯ ಸಗರ ಶಹಪುರ ”
 ಹರ ಮುನಿದರೂ ಗುರು ಕಾಯುವನು ಎಂಬ ಗಾದೆಯಂತೆ   ಶಿಕ್ಷಕರು ನಿಸ್ವಾರ್ಥ ಸೇವೆ ಸಲ್ಲಿಸಿ ಇನ್ನೊಬ್ಬರ ಬಾಳಿಗೆ ಬೆಳಕಾಗಿ ನಿಲ್ಲುತ್ತಾರೆ. ಶಿಕ್ಷಕರು ದೇಶದ ನಿರ್ಮಾತ್ರಗಳು. ವಿದ್ಯಾರ್ಥಿಗಳು ಗುರುಹಿರಿಯರನ್ನು ಗೌರವಿಸಿ. ಗುರು-ಶಿಷ್ಯರ ಸಂಬಂಧ ಪವಿತ್ರವಾದದ್ದು ಎಂದು ಹೇಳಿದರು.
“ಕೃಷ್ಣ ಜನ್ಮಾಷ್ಟಮಿ  ಶ್ರೀ ಕೃಷ್ಣನ ವೇಷದಲ್ಲಿ  ಬಾಬಜಿ ಕ್ಯಾತ್ನಾಳ ”
 ವಸತಿ ನಿಲಯ ಪಾಲಕಿ ಚಂದ್ರಕಲಾ,ಸಂಗೀತಾ ಶಾಂತಾ ಎನ್ ಜಡಿ, ದಿಲ್ ಶಾದ್,
ಸುನಿಲ್ ವಿಶ್ವಕರ್ಮ,ಪವಿತ್ರ ಸಿಬ್ಬಂದಿ ವರ್ಗ  ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *