ಗಮನ ಸೆಳೆದ ಕೃಷ್ಣನ ವೇಷಧಾರಿ ಚಿಣ್ಣರು : ಜ್ಞಾನಗಂಗೋತ್ರಿ ಶಾಲೆಯಲ್ಲಿ ಸಂಭ್ರಮದ ಗೋಕುಲಾಷ್ಟಮಿ

ಶಹಾಪುರ ನಗರದ ಜ್ಞಾನಗಂಗೋತ್ರಿ.ಹಿ.ಪ್ರಾಥಮಿಕ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿ0ದ ಆಚರಿಸಲಾಯಿತು.

ಶಹಾಪುರ: ಕೃಷ್ಣನ ಬಾಲಲೀಲೆ ಕಣ್ತುಂಬಿ ಕೊಳ್ಳುವುದೇ ಸಂತಸದ ಕ್ಷಣಗಳು, ಪಾಲಕರಿಗಂತು ರಾಧೆಯರ ವೇಷ, ಕೃಷ್ಣನ ವೇಷಧರಿಸಿದ ನೂರಾರು ಮಕ್ಕಳ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೋಡುವ ಸೌಭಾಗ್ಯ ಸ್ಥಳೀಯ ಹಳೆಪೇಟೆಯ ಜ್ಞಾನಗಂಗೋತ್ರಿ ಶಾಲೆಯಆವಣದಲ್ಲಿ ಕಂಡುಬ0ದಿತು.

ಶ್ರೀಕೃಷ್ಣ ಜನ್ಮಾಷ್ಟಮಿ ಶ್ರೀಕೃಷ್ಣನ ವೇಷದಲ್ಲಿ ಹೃತಿಕ್ ಶೇಖರ್  

ಶ್ರೀ ಕೃಷ್ಣನ ಜನ್ಮದಿನ ಆಚರಿಸಿದ ಸಂದರ್ಭದಲ್ಲಿ ಹಾಲು,ಮೊಸರು ಗಡಿಗೆ ಒಡೆಯುವುದು, ಮಕ್ಕಳ ಕೋಲಾಟ, ಸಾಮೂಹಿಕ ನೃತ್ಯಗಳು ಜರುಗಿದವು.

ಕಾರ್ಯಕ್ರಮದಲ್ಲಿ ಹಿರಿಯರಾದ ತಿರುಮಲಾಚಾರ್ಯಭಕ್ರಿ, ವಿಠ್ಠಲಾಚಾರ್ಯ ಪ್ರತಿನಿಧಿ, ಸಂಸ್ಥೆಯ ಅಧ್ಯಕ್ಷ ಮುರಳಿಧರ ಕುಲಕರ್ಣಿ, ಶರಣು ಕೋನೇರ, ಸೋಮುಕಟ್ಟಿಮನಿ, ನಾಗಪ್ಪ ವಗ್ಗನವರು,ಚಂದ್ರಶೇಖರ, ಹೊನ್ನಪ್ಪ ವಗ್ಗನವರ ಸೇರಿದಂತೆ ಪಾಲಕರು, ಶಿಕ್ಷಕ ಸಿಬ್ಬಂಧಿ, ಬಡಾವಣೆಯ ಪ್ರಮುಖರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ವಿತರಿಸಲಾಯಿತು, ಡೊಳ್ಳುವಾದ್ಯ, ಗೋಪಾಲಕರು, ಗಮನಸೆಳೆದರು.

About The Author