ಶಹಾಪುರದ 21ನೇ ವಾರ್ಡಿನಲ್ಲಿ ಚರಂಡಿಗಳಿಲ್ಲದೆ ಎಲ್ಲೆಂದರಲ್ಲಿ ಹರಿಯುತ್ತಿರುವ ಕೊಳಚೆ ನೀರು

yadgiri ಶಹಾಪುರ : ಕಳೆದ ಹತ್ತು ವರ್ಷಗಳಿಂದ ನಗರದ ರಾಖಂಗೇರಾದ 21ನೇ ವಾರ್ಡಿನ ಇಂಡಸ್ಟ್ರಿಯಲ್ ಏರಿಯಾದ ಸಮೀಪದ ಹಲವು ಕಡೆ ಒಳಚರಂಡಿಗಳಿಂದೆ ಜನರು ಬಳಕೆಯ ನೀರು ಎಲ್ಲೆಂದರಲ್ಲಿಯೆ ಹರಿಯುತ್ತಿವೆ.ಹೊಸ ಸುಬೇದಾರ್ ಆಸ್ಪತ್ರೆ ಹಿಂದುಗಡೆ ರಸ್ತೆ ,ಬಾಬಾ ಹೋಟೆಲ್ ಪಕ್ಕದಲ್ಲಿನ ರಸ್ತೆ ಸೇರಿದಂತೆ ಹಲವು ರಸ್ತೆಗಳ ಇಕ್ಕೆಲಗಳಲ್ಲಿ ಚರಂಡಿಗಳನ್ನು ನಿರ್ಮಿಸಿಲ್ಲ. ಆದರೆ ಸಿಸಿ ರಸ್ತೆಗಳನ್ನು ನಿರ್ಮಾಣ ಮಾಡಿದ್ದಾರೆ. ಕೆಲವು ಕಡೆ ಅಲ್ಲಿನ ಜನರ ಮನಸ್ಸ್ತಾಪದಿಂದ ಸಿಸಿ ರಸ್ತೆಯನ್ನು ಮಾಡದೆ ಹಾಗೆಯೇ ಬಿಡಲಾಗಿದೆ.
ಪಕ್ಕದಲ್ಲಿನ ಮನೆಯವರ ಬಳಕೆಯ ನೀರನ್ನು ಪಕ್ಕದಲ್ಲಿ ಇರುವ ನಿವೇಶನದಲ್ಲಿ ಬಿಡುತ್ತಿರುವುದರಿಂದ ಅಲ್ಲಿಯೆ ಸಂಗ್ರಹಣೆಯಾದ ಕೊಳಚೆ ನೀರು ಚರಂಡಿ ನೀರಾಗಿ ಚರಂಡಿಗಳಾಗಿ ಮಾರ್ಪಟ್ಟಿವೆ. ಚುನಾವಣೆ ಮುಗಿದರೂ ಇದರ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸಿಲ್ಲ. ಕೆಲವು ಕಡೆ ಹೋಟೆಲ್ ಗಳಿಂದ ಬಳಕೆಯಾದ ನೀರು ಮನೆ ಮುಂದೆ ನಿಂತು ಹೋಗಿವೆ. ಇಲ್ಲಿನ ನಗರಸಭೆ ಸದಸ್ಯರು ಜನ ಪ್ರತಿನಿಧಿಗಳು ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕಿದೆ.
*****
ನಾವು 10 ವರ್ಷಗಳಿಂದ ಇದೇ ವಾರ್ಡಿನಲ್ಲಿ ವಾಸವಿದ್ದು, ನಾವು ಬಳಕೆ ಮಾಡುವ ನೀರು ಬೇರೆಯವರ ನಿವೇಶನಕ್ಕೆ ಹೋಗುತ್ತಿವೆ.ಅಲ್ಲಿ ಸಂಗ್ರಹಣೆ ಗೊಳ್ಳುತ್ತಿವೆ. ಅಲ್ಲಿಯೇ ವಾಸವಿದ್ದರೂ ಕೂಡ ಆ ನೀರಿನ ವಾಸನೆಯಿಂದ ಜೀವನ ಸಾಗಿಸಬೇಕಿದೆ.ಆ ನಿವೇಶನಗಳಲ್ಲಿ ಮನೆ ನಿರ್ಮಿಸಿದರೆ ನಾವು ಬಳಕೆ ಮಾಡುವ ನೀರನ್ನು ಯಾವ ಕಡೆ ಬಿಡಬೇಕು ಎನ್ನುವುದು ತೋಚುತ್ತಿಲ್ಲ.
ಬಸವರಾಜ ಶಹಾಪುರ
ವಾರ್ಡ್ ನಿವಾಸಿ 

About The Author