ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸಲಿ : ಎಸ್ ಎಸ್ ಬಿರದಾರ

Yadgiri ಶಹಾಪುರ : ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸಲು ರಸ ಪ್ರಶ್ನೆ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಎಸ್ ಎಸ್ ಬಿರದಾರ ಹೇಳಿದರು.ಸೇವಾ ಸಂಸ್ಥೆಯ ದ್ವೀತಿಯ ವಾರ್ಷಿಕೋತ್ಸವದ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶರಣು ಬಿರದಾರ ಈ ಯುಗ ಅತಿ ವೇಗದ ಸ್ಪರ್ಧಾತ್ಮಕ ಯುಗವಾಗಿದ್ದು ವಿದ್ಯಾರ್ಥಿಗಳಾದ ತಾವು ಸರಿಯಾದ ಸಮಯ ಅವಕಾಶ ಬಳಕೆ ಮಾಡಿಕೊಂಡು ನಿಮ್ಮ ಭವಿಷ್ಯ ರೂಪಿಸಿಕೊಂಡು ತಂದೆ- ತಾಯಿ, ಗುರುಗಳ ಕನಸು ನನಸಾಗಿಸಬೇಕು ಎಂದು ಕರೆ ನೀಡಿದರು.

ಅತಿಥಿಗಳಾದ ಮಡಿವಾಳಪ್ಪ ಪಾಟೀಲ ಮಾತನಾಡಿ  ಸೇವಾ ಸಂಸ್ಥೆ ಇಂತಹ ಒಂದು ಕಾರ್ಯಕ್ರಮ ಆಯೋಜಿಸಿದ್ದು ನಿಜಕ್ಕೂ ಶ್ಲಾಘನೀಯ. ಸ್ಪರ್ಧಾಳುಗಳಿಗೆ ಹಾಗೂ ಸಂಸ್ಥೆಗೆ ಶುಭ ಕೋರಿದರು.

ಸಂಸ್ಥಾಪಕ ಅಧ್ಯಕ್ಷ ಭೀ ಎನ್ ಪಾಟೀಲ್ ಪ್ರಾಸ್ತಾವಿಕ ಮಾತಾಡಿದರು.ದೇವು ದರಿಯಪೂರ ರಸ ಪ್ರಶ್ನೆ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು, ಚೆನ್ನಪ್ಪ ಭಾಗ್ಲಿ ನಿರೂಪಿಸಿದರು, ದೇವು ಹಳ್ಳೀ ಸ್ವಾಗತ ಕೋರಿದರು, ಭಿಮು ಶಾರದಹಳ್ಳಿ, ಮೌನೇಶ ಕೊಲ್ಲೂರು ಇದ್ದರು ಸಂಸ್ಥೆಯ ಸದಸ್ಯರಿದ್ದು, 45 ತಂಡಗಳು ಭಾಗವಹಿಸಿದ್ದವು. 150ಕ್ಕೂ ಹೆಚ್ಚೂ ವಿಧ್ಯಾರ್ಥಿಗಳು ವೀಕ್ಷಣೆಯಲ್ಲಿದ್ದರು.