ಸಂಘದ ರಾಜ್ಯ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಗಳಿಂದ ಮಾನ್ಯ ಆರೋಗ್ಯ ಸಚಿವರ ಹಾಗೂ ಅಧಿಕಾಗಳ ಬೇಟಿ

ಪತ್ರಿಕಾ ಹೇಳಿಕೆ:ಶ್ರೀಕಾಂತ್ ಸ್ವಾಮಿ (ರಾಜ್ಯ ಪ್ರಧಾನ ಕಾರ್ಯದರ್ಶಿ)
ವಿಶ್ವರಾಧ್ಯ ಎಚ್. ವೈ.(ರಾಜ್ಯ ಅಧ್ಯಕ್ಷರು)  

ದಿ. 20-04-2022 ಬೆಂಗಳೂರಿನಲ್ಲಿ ಮಾನ್ಯ ಆರೋಗ್ಯ ಸಚಿವರಾದ ಡಾ॥ ಕೆ. ಸುಧಾಕರ್ ರವರನ್ನು ಸಂಘದ ವತಿಯಿಂದ ಭೇಟಿಯಾಗಿದ್ದು, ಮಾನ್ಯರೊಂದಿಗೆ ದಿ. 24-02-2022ರ ಸಭೆಯಲ್ಲಿ ಚರ್ಚಿಸಿದ ಅಂಶಗಳು ಅನುಷ್ಠಾನ ಆಗದೇ ಇರುವ ಬಗ್ಗೆ ವಿವರಿಸಲಾಯಿತು. ಅದಕ್ಕೆ  ಸ್ಪಂದಿಸಿದ ಮಾನ್ಯ ಸಚಿವರು ಖುದ್ದಾಗಿ ಅಭಿಯಾನ ನಿರ್ದೇಶಕರಿಗೆ ಈ ವಿಷಯವಾಗಿ ಕೂಡಲೇ ಆದ್ಯತೆ ಮೇರೆಗೆ ಕ್ರಮವಹಿಸಲು ಸಂಘದ ಮನವಿ ಪತ್ರದ ಮೇಲೆ ಲಿಖಿತವಾಗಿ ಸೂಚಿಸಿದರು.ಇದೇ ಸಂದರ್ಭದಲ್ಲಿ ಮಾನ್ಯರಿಗೆ ಹಿಂದಿನ ವರ್ಷದಂತೆ ಈ ವರ್ಷವೂ ಭಾರತೀಯ ಕ್ಯಾಲೆಂಡರ್ ಹಾಗೂ ಡೈರಿ ಅನ್ನು ಸಂಘದಿಂದ ಬಿಡುಗಡೆ ಮಾಡಿರುವ ಬಗ್ಗೆ ತಿಳಿಸಿ ಪ್ರತಿಯನ್ನು ಸಾಂಕೇತಿಕವಾಗಿ ನೀಡಲಾಯಿತು.ಅದರಂತೆ ದಿನದರ್ಶಿಕೆಯನ್ನು ಆರೋಗ್ಯ ಇಲಾಖೆಯ ಮಾನ್ಯ ಆಯುಕ್ತರಾದ ಶ್ರೀ. ಡಿ.ರಂದೀಪ್,  IAS ರವರಿಗೂ ಸಹ ಸಂಘದ ವತಿಯಿಂದ ನೀಡಲಾಯಿತು.

ಅದಲ್ಲದೆ ದಿ. 18-04-2022 ರಂದು ಆರೋಗ್ಯ ಇಲಾಖೆ  ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ಅನಿಲ್ ಕುಮಾರ್ ಟೀ. ಕೆ IAS ರವರನ್ನು ಸಂಘದ ವತಿಯಿಂದ ಖುದ್ದಾಗಿ ಭೇಟಿ ಮಾಡಿ ದಿ. 24-04-2022 ರಂದು ಮಾನ್ಯ ಆರೋಗ್ಯ ಸಚಿವರೊಂದಿಗೆ ಸಭೆಯಲ್ಲಿ ಚರ್ಚಿಸಿದ ಅಂಶಗಳ ಅನುಷ್ಠಾನದ ಬಗ್ಗೆ ತಿಳಿಸಿ ಆದ್ಯತೆ ಮೇರೆಗೆ ಆದೇಶಗಳನ್ನು ಹೊರಡಿಸಲು ಸಂಘದ ವತಿಯಿಂದ ಒತ್ತಾಯಿಸಲಾಯಿತು ಮತ್ತು ಅಧೀನ ಅಧಿಕಾರಿಗಳ ವಿಳಂಬ ನೀತಿಯನ್ನು ಸಹ ಮಾನ್ಯರ ಗಮನಕ್ಕೆ ತರಲಾಯಿತು.ನಮ್ಮ ಮನವಿಗೆ ಸ್ಪಂದಿಸಿದ ಮಾನ್ಯರು ಈ ಮಾಹೆ ಒಳಗಾಗಿ ಚರ್ಚಿಸಿದ ಅಂಶಗಳ ವಿಷಯಗಳ ಬಗ್ಗೆ ಆದೇಶಗಳನ್ನು ಹೊರಡಿಸಲು ಸೂಚಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಘದ ಭಾರತೀಯ ಕ್ಯಾಲೆಂಡರನ್ನು ಮತ್ತು ಡೈರಿಯನ್ನು ಮಾನ್ಯರಿಗೆ ಸಂಘದ ವತಿಯಿಂದ ನೀಡಲಾಯಿತು.

ಅದರಂತೆ ಅದೇ ದಿನದಂದು ಮಾನ್ಯ ಮುಖ್ಯ ಆಡಳಿತ ಅಧಿಕಾರಿಗಳು, ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಇವರನ್ನು ಬೇಟಿ ಮಾಡಿ ಮಾನ್ಯ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಿದಂತೆ ಅಂತಿಮ ಆದೇಶಗಳನ್ನು ಹೋರಡಿಸಲು ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಕೊರಲಾಯಿತು.ಸರ್ಕಾರದ ಹಂತದಲ್ಲಿ ಮಾನ್ಯ ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ ಅಂಶಗಳ ಬಗ್ಗೆ ಹಂತ ಹಂತವಾಗಿ ಆದ್ಯತೆ ಮೇರೆಗೆ ಆದೇಶಗಳನ್ನು ಹೊರಡಿಸುವುದಾಗಿ ಸ್ಪಷ್ಟ ಭರವಸೆ ನೀಡಿರುತ್ತಾರೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

About The Author