ವಂದೇ ಭಾರತ್ ರೈಲು ಯಾದಗಿರಿಯಲ್ಲಿ ನಿಲ್ಲಿಸಲು ಭೀಮರಾಯ ಜಂಗಳಿ ಮನವಿ

Yadgiri ವಡಗೇರಾ : ಹೈದ್ರಾಬಾದ್ ನಿಂದ ಬೆಂಗಳೂರಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಬಿಜೆಪಿಯ ಯಾದಗಿರಿ ಜಿಲ್ಲೆಯ ಪ್ರಶಿಕ್ಷಣ  ಪ್ರಕೋಷ್ಟದ ಜಿಲ್ಲಾ ಸಂಚಾಲಕರಾದ ಭೀಮರಾಯ ಜಂಗಳಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಗುಂತಕಲ್ ವಿಭಾಗದಲ್ಲಿ ಅತಿ ಹೆಚ್ಚು ಜನಸಂದಣೆಯಿಂದ ಕೂಡಿದ ಯಾದಗಿರಿ ರೈಲ್ವೆ ನಿಲ್ದಾಣದಿಂದ ಬೇರೆ ಕಡೆ ಸಂಚರಿಸುವುದು ಅತಿ ಹೆಚ್ಚು ಜನರಿದ್ದಾರೆ. ಸರಕಾರಕ್ಕೂ ಕೂಡ ಆದಾಯ ದಾಯಕವಾದ ನಿಲ್ದಾಣವಾಗಿದೆ. ಕೇಂದ್ರ ಸಚಿವರು ಮತ್ತು ಲೋಕಸಭಾ ಸದಸ್ಯರು ಇದರ ಬಗ್ಗೆ ಗಮನಹರಿಸಬೇಕಿದೆ. ವಂದೇ ಭಾರತ್ ರೈಲುಸೇಡಂ, ರಾಯಚೂರು, ಗುಂತಕಲ್ ಜಂಕ್ಷನ್ ಗಳಿಗೆ ನಿಲುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಗೊತ್ತಾಗಿದ್ದು, ಯಾದಗಿರಿ ನಿಲ್ದಾಣಕ್ಕೆ ನಿಲುಗಡೆ ಮಾಡುವಂತೆ ಆಗ್ರಹಿಸಿದರು.