ಹಳಪೇಟೆಯಲ್ಲಿ ಯಜ್ಞೋಪವೀತಧಾರಣ ಕಾರ್ಯಕ್ರಮ

ಶಹಾಪುರ: ಶ್ರಾವಣ ಮಾಸದಲ್ಲಿ ಬರುವ ಎಲ್ಲ ವಿಶೇಷವಾದ ದಿನಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಬೇಕು, ಇದರಲ್ಲಿ ಯಜ್ಞೋಪವೀತಧಾರಣ ಕಾರ್ಯಕ್ರಮವು ಅತ್ಯಂತ ಮಹತ್ವದ್ದಾಗಿದ್ದು, ಪ್ರತಿಯೊಬ್ಬರು ಸಂಧ್ಯಾವAದನೆ ಹಾಗೂ ಶ್ರೀ ಗಾಯತ್ರಿ ಮಂತ್ರ ಹಾಗೂ ಭಗವಂತನ ಸ್ಮರಣೆ ಮಾಡುವುದು ಬಹುಮುಖ್ಯವಾಗಿದೆ ಎಂದು  ಅರ್ಚಕ ವಿಠ್ಠಲಚಾರ್ಯ ಪ್ರತಿನಿಧಿ ತಿಳಿಸಿದರು.
                ನಗರದ ಹಳಪೇಟೆಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಯಜುರ್ವೇದೀಯ ಯಜ್ಞೋಪವೀತಧಾರಣ ಕಾರ್ಯಕ್ರಮ ಜರುಗಿದ ಸಂದರ್ಭದಲ್ಲಿ ವಿಶೇಷ ಪೂಜೆ, ಹೋಮಹವನ ನೆರವೇರಿಸಿದರು.
         ಈ ಸಂದರ್ಭದಲ್ಲಿ ಕೋನೇರಾಚಾರ್ಯ ಸಗರ, ವಾಸುದೇವಾಚಾರ್ಯ ಸಗರ, ಮಧ್ವಚಾರ್ಯ ಕಕ್ಕೇರಿ, ಭೀಮಸೇನರಾವ ಶಿರವಾಳ, ಶ್ರೀನಿವಾಸರಾವ ದೇಸಾಯಿ, ಗಣಪತಿ ಹೆಗಡೆ, ಶ್ಯಾಮಚಾರ್ಯ, ಸತ್ಯನಾರಾಯಣರಾವ ದೇಸಾಯಿ,  ಶ್ರೀನಿವಾಸಾಚಾರ್ಯ ಸಗರ, ಮುರಳಿಧರ ಸುಂಬಡ, ನರಸಿಂಹ, ಸೇರಿದಂತೆ ಇತರರು ಇದ್ದರು.

About The Author