ವಾಂತಿ ಭೇದಿ ಪ್ರಕರಣಗಳಿಂದ ಜನರು ಭಯಭೀತರಾಗಿದ್ದು  ಮುಂಜಾಗ್ರತೆ ಕ್ರಮಕ್ಕೆ  ಅಬ್ದುಲ್ ಚಿಗನೂರ   ಒತ್ತಾಯ

 Yadgiri ವಡಗೇರಾ : ತಾಲೂಕಿನಾದ್ಯಂತ ಸಾರ್ವಜನಿಕರಿಗೆ ಅಶುದ್ಧ  ಕುಡಿಯುವ ನೀರೆ ಗತಿಯಾಗಿದೆ. ಕೃಷ್ಣ ಭಿಮಾ ನದಿ ದಡದಲ್ಲಿರುವ ಹಲವಾರು ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರಿ ಕೊರತೆ ಇದೆ.ತಾಲೂಕಿನ  ಸುಮಾರು ಕಡೆ ನೀರಿನ ಶುದ್ಧೀಕರಣ ಘಟಕಗಳು ಕೆಟ್ಟು ನಿಂತಿವೆ. ಅವುಗಳ ದುರಸ್ತಿಗೆ ಅಧಿಕಾರಿಗಳು ಮುಂದಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ತಾಲೂಕು ಅಧ್ಯಕ್ಷ ಅಬ್ದುಲ್ ಚಿಗನೂರ ಆರೋಪಿಸಿದ್ದಾರೆ.
       ಜಿಲ್ಲೆಯಾದ್ಯಂತ ವಾಂತಿಭೇದಿ ಪ್ರಕರಣದಿಂದ ಹಲವಾರು ಜನರು ಮೃತಪಟ್ಟಿದ್ದಾರೆ.  ಕೆಲವರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ಮಾಡುತ್ತಿದ್ದಾರೆ.ಇದರಿಂದ ತಾಲೂಕಿನ  ಜನರು ಆತಂಕಗೊಂಡಿದ್ದಾರೆ.ಗ್ರಾಮಗಳಲ್ಲಿ ಕುಡಿಯುವ ನೀರಿನ ಪೈಪುಗಳು ಒಡೆದು ಅವುಗಳಲ್ಲಿ ಚರಂಡಿ ನೀರು ಮಿಶ್ರಣವಾಗಿ ಬರುತ್ತಿವೆ.ಈ ನೀರು ಕುಡಿಯುವುದರಿಂದ ಜನರಿಗೆ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿವೆ.ಜಿಲ್ಲಾ ಪಂಚಾಯಿತಿ  ಮುಂಜಾಗ್ರತೆ ಕ್ರಮವಾಗಿ ಎಲ್ಲಾ ಕಡೆ ನೀರು ಸಂಗ್ರಹ ಘಟಕಗಳನ್ನು ಸ್ವಚ್ಛಗೊಳಿಸಿ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವುದರ ಜೊತೆಗೆ ಗ್ರಾಮೀಣ ಭಾಗದಲ್ಲಿ ಕೆಟ್ಟು ನಿಂತಿರುವ ಕೊಳವೆ ಬಾವಿಗಳು ಹಾಗೂ  ನೀರಿನ ಶುದ್ಧೀಕರಣ ಘಟಕಗಳನ್ನು ದುರಸ್ತಿಗೊಳಿಸಬೇಕು. ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

About The Author