yadgiri ವಡಗೇರಾ: ಬಾಗಲಕೋಟ ಜಿಲ್ಲೆಯ ಸಾಮಾಜಿಕ ಹಾಗೂ ರೈತ ಪರ ಹೋರಾಟಗಾರ ಯಲ್ಲಪ್ಪ ಹೆಗಡೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದನ್ನು ವಡಗೇರಾ ತಾಲೂಕು ಕುರುಬ ಸಮಾಜದ ಯುವ ಮುಖಂಡರಾದ ಮರಿಲಿಂಗಪ್ಪ ಸಾಹು ಕುಮನೂರ ಖಂಡಿಸಿದ್ದಾರೆ.
ಯಲ್ಲಪ್ಪನವರು ವಕೀಲ ವೃತ್ತಿಯ ಜೊತೆಗೆ ಜಿಲ್ಲೆಯಲ್ಲಿ ಸಮಾಜ ಸೇವೆ ಹಾಗೂ ಕನ್ನಡ ನಾಡ ನುಡಿ ಜಲ ರಕ್ಷಣೆಗಾಗಿ ಹೋರಾಟ ಮಾಡುತ್ತಿದ್ದರು. ಅಲ್ಲಿನ ಸಕ್ಕರೆ ಕಾರ್ಖಾನೆಗಳು ರೈತರಿಗೆ ಸರಿಯಾಗಿ ಕಬ್ಬಿನ ಬಿಲ್ ನೀಡದಿರುವ ಕಾರ್ಖಾನೆಗಳ ವಿರುದ್ಧ ಸತತ ಹೋರಾಟ ಮಾಡಿ ರೈತರಿಗೆ ನ್ಯಾಯ ಒದಗಿಸಿ ಕೊಟ್ಟಿದ್ದರು.
ಕಳೆದ ಬಾರಿ ಬಿಳಗಿ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಕೆಲವರು ಸಹಿಸದೆ ಇದನ್ನೇ ಗುರಿಯಾಗಿಸಿಕೊಂಡು ರಾಜಕೀಯ ಮುಖಂಡರೊಬ್ಬರ ಪ್ರಚೋದನೆಯಿಂದ ಇವರ ಮೇಲೆ ತುಂಬಾ ಗಂಭೀರವಾಗಿ ಹಲ್ಲೇ ಮಾಡಿದ್ದಾರೆ. ಸರಕಾರ ಮಧ್ಯಪ್ರವೇಶಿಸಿ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಲ್ಲೆಗೊಳಗಾದ ಯಲ್ಲಪ್ಪನವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.
Post Views: 104