ಗಮನಸೆಳೆದ ಡೊಳ್ಳು ಕುಣಿತ ಶ್ರೀ ವಗ್ಗ ರಾಯಣ್ಣ ಮುತ್ಯಾನ ಜಾತ್ರೆ ಸಂಪನ್ನ

ಶಹಾಪುರದ ಹಳಪೇಟೆಯಲ್ಲಿ ವಗ್ಗರಾಯಣ್ಣ ಮುತ್ಯಾನ ಪಲ್ಲಕ್ಕಿ ಮೆರವಣಿಗೆಯಲ್ಲಿ ಪೂಜಾರಿಗಳು ಆಳು ಆಡುವುದು ವಿಶೇಷವಾಗಿತ್ತು.

*****

ಶಹಾಪುರ : ಕುರುಬ ಸಮಾಜದ ಆರಾಧ್ಯ ದೈವ ಶ್ರೀ ವಗ್ಗರಾಯಣ್ಣ ಮುತ್ಯಾನ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿ ಸಂಪನ್ನಗೊಂಡಿತು, ಸೋಮವಾರ ಬೆಳಗ್ಗೆ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ನಗರದಲ್ಲಿ ನಡೆಯಿತು, ಹಳಪೇಟೆಯಲ್ಲಿ ಪೂಜಾರಿಗಳು ಆಳು ಆಡುವುದು ಭಕ್ತಿಯ ಸಂಭ್ರಮಕ್ಕೆ ಕಾರಣವಾಗಿತ್ತು, ಡೊಳ್ಳು ಕುಣಿತ, ಜೈಕಾರ, ವಿವಿಧ ಆಟಗಳು ಸೇರದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು, ಅಪಾರ ಸಂಖ್ಯೆಯ ಭಕ್ತರು ದಾರಿಯಲ್ಲಿ ಪಲ್ಲಕ್ಕಿಗೆ ನೀರು ನೀಡಿ, ನೈವೇದ್ಯ ಅರ್ಪಿಸಿದರು. ಶ್ರಾವಣ ಮಾಸದಲ್ಲಿನ ಉತ್ಸವಗಳಲ್ಲಿ ಶ್ರೀ ವಗ್ಗರಾಯಣ್ಣ ಮುತ್ಯಾನ ಉತ್ಸವ ಧಾರ್ಮಿಕ ಪರಂಪರೆಗೆ ಸಾಕ್ಷಿಯಾಗಿದೆ.