ಕುರುಬರಿಗೆ ನಿಗಮ ಮಂಡಳಿಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕು : ಬಿಎಮ್ ಪಾಟೀಲ್

ರಾಯಚೂರು : ಸಿದ್ದರಾಮಯ್ಯನವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂಬುದು ಕುರುಬರ ಆಶಯವಾಗಿತ್ತು.ರಾಜ್ಯದಲ್ಲಿನ ಶೇ.90ರಷ್ಟು ಹಾಲುಮತ ಸಮಾಜದವರು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿದ್ದಾರೆ.ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿ ಯನ್ನಾಗಿ ಮಾಡಿದ್ದಾರೆ ಎಂದು ಕರ್ನಾಟಕ ಪ್ರದೇಶ ಯುವ ಕುರುಬ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಿಎಮ್ ಪಾಟೀಲ್ ಹೇಳಿದರು. ರಾಯಚೂರಿನಲ್ಲಿ ಜಿಲ್ಲಾ ಯುವ ಕುರುಬರ ಸಂಘದ ಜಿಲ್ಲಾಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ರಾಜ್ಯದಲ್ಲಿ ನಿಗಮ ಮಂಡಳಿಗಳಲ್ಲಿ ಕುರುಬರಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕು.
 ಹೈದರಾಬಾದ್ ಕರ್ನಾಟಕದ ಬಳ್ಳಾರಿಯಲ್ಲಿ ರಾಜ್ಯದ ಕೇಂದ್ರ ಕಚೇರಿಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ತಿಳಿಸಿದರು.ಸಿದ್ದರಾಮಯ್ಯನವರ ನಂತರ ಸಮಾಜದ ಪ್ರಭಾವಿ ನಾಯಕರು ಬರುವುದು ಕಷ್ಟ. ಬಿಜೆಪಿಯಲ್ಲಿ ಈಶ್ವರಪ್ಪನವರಿಗೆ ಸಿಎಂ ಆಗುವ ಯೋಗ ಬಂದಿತ್ತು.ರಾಯಣ್ಣ ಬ್ರಿಗೇಡ್ ಸಂಘಟನೆಯಿಂದ ಅತ್ಯಂತ ಮಂಚೂಣಿಯಲ್ಲಿದ್ದ ಈಶ್ವರಪ್ಪನವರು ತಾವೆ ಕಡೆಗಣಿಸಿದರು ಎಂದರು.ಈ ಭಾಗದ ಸಿಂಧನೂರಿನಲ್ಲಿ ಕೆ. ಕರಿಯಪ್ಪನವರು ಶಾಸಕರಾಗಬೇಕಿತ್ತು. ಈ ಭಾಗದಲ್ಲಿ ಕುರುಬರು ಶಾಸಕರಾಗಬೇಕು. ನಾವೆಲ್ಲರೂ ಮುಂದಿನ ದಿನಗಳಲ್ಲಿ ಅದಕ್ಕಾಗಿ ಶ್ರಮಿಸೋಣ ಎಂದು ಸಮಾಜದ ಮುಖಂಡರಿಗೆ ಕರೆ ನೀಡಿದರು.
ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ  ಬಿ.ಎಮ್. ಪಾಟೀಲ್ ಅವರ ನೇತೃತ್ವದಲ್ಲಿ ರಾಯಚೂರು ಜಿಲ್ಲೆಯ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾಧ್ಯಕ್ಷರಾಗಿ ಕೆ.ರಮೇಶ ಮೂಡಲದಿನ್ನಿ, ಜಿಲ್ಲಾ ಉಪಾಧ್ಯಕ್ಷರಾಗಿ ಸಾಬಣ್ಣ ಗಟ್ಟುಬಿಚ್ಚಾಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನರಸಣ್ಣ ಶಾಸ್ತ್ರಿ, ಜಿಲ್ಲಾ ಗೌರವಾಧ್ಯಕ್ಷರಾಗಿ ಜಂಬಣ್ಣ ರವರನ್ನು  ಆಯ್ಕೆಮಾಡಲಾಯಿತು.
   ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಅಧ್ಯಕ್ಷರು ಶ್ರೀಮತಿ ಟಿ. ಜೆ.ಮಂಜುಳಾಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಕೆ.ಬಸವಂತಪ್ಪ, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ನೀಲಕಂಠ ಬೇವಿನ್, ಡಿ.ಜಿ.ಕೇಶವ್ ಸಮಾಜದ ಹಿರಿಯರು, ವೇಣುಗೋಪಾಲ, ನಾಗರಾಜ್ ಮಡ್ಡಿಪೇಟೆ, ಹನುಮಂತಪ್ಪ ತಾಲೂಕಾಧ್ಯಕ್ಷರು, ಸಂಗಮೇಶ್ ಭಂಡಾರಿ,ರಾಮನಗೌಡ ಮರ್ಚಾಟಾಳ್, ಸತ್ಯನಾರಾಯಣ ವಲ್ಕಂದಿನ್ನಿ, ಜಂಬಣ್ಣ ಮಂದಕಲ್, ರಾಹುಲ್ ಕಲಂಗೇರಾ, ಗುರುಪ್ರತಾಪ್, ಎಲ್.ಕೆ.ಗೌಡ, ನಾಗರಾಜ್, ದೇವದುರ್ಗ, ಸಿರವಾರ, ಮಾನ್ವಿ ತಾಲೂಕಾಧ್ಯಕ್ಷರು ಸೇರಿದಂತೆ ನೂರಾರು  ಯುವಕರು  ಉಪಸ್ಥಿತರಿದ್ದರು.