ವಕೀಲರ ಸಂಘದ ಬೈಲಾಗೆ ಬದ್ದರಾಗಿ-ಶಾಂತಗೌಡ

ಶಹಾಪುರ:ಯಾವುದೆ ಸಂಘ ಸಂಸ್ಥೆಗಳ ನೂತನ ಆಡಳಿತ ಮಂಡಳಿ ಆಯ್ಕೆಗೆ ಮಾನದಂಡಗಳನ್ನು ಅಳವಡಿಸಿದ್ದು,ಅವುಗಳ ಪ್ರಕಾರ ಸರ್ಕಾರ ನೊಂದಣಿ ಮಾಡಲಾಗುತ್ತಿದೆ. ಸಂಘದ ನೀತಿ ಕಾನೂನು ಬೈಲಾ ನಿಯಮಗಳಿಗೆ ಬದ್ದರಾಗಬೇಕು ಎಂದು ಶಹಾಪುರ ತಾಲುಕು ವಕೀಲರ ಸಂಘದ ಅಧ್ಯಕ್ಷರಾದ ಶಾಂತಗೌಡ ಪಾಟೀಲ್ ತಿಳಿಸಿದರು. ಅವರು ತಾಲುಕಾ ವಕೀಲರ ಸಂಘದ ಕಾರ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಈ ವಿಷಯ ಪ್ರಸ್ತಾಪ ಮಾಡಿದರು.

ಸಂಘದ ನಿಯಮಗಳನ್ನು ಗಾಳಿಗೆ ತೂರಿಕೊಂಡು. ಕಳೆದ ಹತ್ತಾರು ವರ್ಷಗಳಿಂದ ತಾಲುಕಾ ವಕೀಲರ ಸಂಘದ ಚುನಾವಣೆಗಳು ಕೇವಲ ಒಂದು ವರ್ಷಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ. ಈ ಕುರಿತು ಯಾವುದೆ ಬೈಲ್ ದಲ್ಲಿ ಉಲ್ಲೇಖವಿಲ್ಲ. ಇಂದಿಗೂ ನಾನೇ ಅವಧಿ ಪೂರ್ಣ ಅಧ್ಯಕ್ಷನಾಗಿರುತ್ತೇನೆ. ಎಲ್ಲಿಯೂ ಅವಧಿ ಮುಗಿದ ಕುರಿತು ನಿಯಮಗಳಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದರು. ಇತ್ತಿಚೆಗೆ ಹಿರಿಯ ವಕೀಲರು ಪತ್ರಿಕಾಗೋಷ್ಟಿ ಮಾಡಿ ಅವಧಿ ಮುಗಿದರೂ ಚುನಾವಣೆ ಮಾಡಿಲ್ಲವೆಂದು ಕಾಟಾಚಾರದ ಮಾತುಗಳಿಂದ ಹೇಳಿಕೆ ನೀಡುತ್ತಿದ್ದು, ಅತ್ಯಂತ ಖೇಧಕರ ಸಂಗತಿಯಾಗಿದೆ. ಇನ್ನೂ ಬೈಲಾ ಅವಧಿ ಪ್ರಕಾರ ಆಡಳಿತ ಅಧಿಕಾರವಿದ್ದರೂ ತಪ್ಪು ಸಂದೇಶ ನೀಡುತ್ತಿರುವದು ಸರಿಯಲ್ಲವೆಂದರು. ಚುನಾವಣೆ ಸೇರಿದಂತೆ ಇತರೆ ಅನೂಕೂಲಗಳಿಗೆ ಬೈಲಾ ನೀಯಮಗಳ ಅನ್ವಯ ಪಾಲನೆ ಎಂದು ಹೇಳುವ ಆಕ್ಷೇಪಿತ ಸದಸ್ಯರು ಇಂದು ಬೈಲಾ ನಿಯಮವಳ ಪ್ರಕಾರ ಅಧಿಕಾರ ಮಾಡಲು ಸಹಕಾರ ನೀಡಿ ಎಂದರು.

ಆರು ಜನ ಆಡಳಿತ ಮಂಡಳಿ ಪೈಕಿ ಈಗ ಎರಡು ಜನರು ಹಾಜರ

ತಾಲುಕಾ ವಕೀಲರ ಸಂಘದ ಚುನಾವಣೆ ನಡೆದ ೬ ಜನರನ್ನು ಚುನಾವಣೆ ಮುಖಾಂತರ ಆಯ್ಕೆ ಮಾಡಿದ ಸರ್ವ ಸದಸ್ಯರು ಇಂದು ಒಂದು ವರ್ಷದ ಅವಧಿ ಪೂರ್ಣವೆಂದು ಅಘೋಷಿತ ನಿಯಮ ಸೃಷ್ಟಿಸುತ್ತಿದ್ದಾರೆ. ವಕೀಲರ ಸಂಘದ ನಡುವಳಿಕೆ ಅನ್ವಯ ಪುನಃ ಚುನಾವಣೆಗೆ ಬನ್ನಿ ಎಂದು ಹಲವಾರು ಜನ ವಕೀಲರು ಪಟ್ಟು ಹಿಡಿದಿದ್ದು. ಬೈಲಾ ನಿಯಮಗಳ ಪಾಲನೆ ಮಾಡಿ ಎಂದು ಹಾಲಿ ಅಧ್ಯಕ್ಷ ಶಾಂತಗೌಡರು ಪ್ರತಿಕ್ರೀಯೆ ವ್ಯಕ್ತಪಡಿಸಿದರು. ಆಡಳಿತ ಮಂಡಳಿಯ ೬ ಜನರ ಪೈಕಿ ನಾಲ್ಕು ಜನ ಆಡಳಿತ ತಟಸ್ಥಗೊಂಡಿದ್ದು ಎಂದು ಅವರು ಹೊರಗುಳಿದಿದ್ದಾರೆ. ಪ್ರಸ್ತುತ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಮಾತ್ರ ಬೈಲಾ ನಿಯಮವಳಿಯಂತೆ ಪ್ರಬುದ್ದರಾಗಿದ್ದು ತಾಲುಕಾ ವಕೀಲರ ಸಂಘದಲ್ಲಿ ಬಿರುಗಾಳಿ ಎದ್ದಿದೆ.ಈ ಸಮಯದಲ್ಲಿ ಕಾರ್ಯದರ್ಶಿ ಎಮ್ಎಸ್ ಸಜ್ಜನ ಹಾಜರಿದ್ದರು.

ವಕೀಲರ ಆಡಳಿತ ಮಂಡಳಿ ನಿಸ್ಕ್ರೀಯ

ಇತ್ತಿಚೆಗೆ ನಡೆದ ತಾಲುಕಾ ವಕೀಲರ ಸಂಘದ ಚುನಾವಣೆ ಒಂದು ವರ್ಷದ ಅವಧಿಗೆ ಮಾತ್ರ ಸೀಮಿತವಾಗಿದ್ದು ಕಳೆದ 31 ಮಾರ್ಚ 2022ರಂದು ಆಡಳಿತ ಮಂಡಳಿ ಅವಧಿ ಮುಗಿದಿದೆ.ಅಧಿಕಾರ ಮುಗಿದರೂ ಇಂದಿನವರೆಗೂ ಆಡಳಿತ ಮಂಡಳಿ ಕೇವಲ ಕಾಟಾಚಾರಕ್ಕೆ ಮಾತ್ರ ಮುಂದುವರೆದಿದೆ.ಆಡಳಿತ ಮಂಡಳಿ ನಿಸ್ಕ್ರೀಯಗೊಂಡ ಹಿನ್ನಲೆಯಲ್ಲಿ ನಾವುಗಳು ತಟಸ್ಥಗೊಂಡಿದ್ದೇವೆ ಎಂದು ಉಪಾಧ್ಯಕ್ಷರಾದ ಹಯ್ಯಾಳಪ್ಪ ಹೊಸಮನಿ ಜಂಟಿ ಕಾರ್ಯದರ್ಶಿಗಳಾದ ಭೀಮನಗೌಡ ಪಾಟೀಲ್ ಶರಣರಾಜ ಮುದನೂರ ಪತ್ರಿಕಾ ಪ್ರಕಟಣೆ ಮುಖಾಂತರ ತಿಳಿಸಿದ್ದಾರೆ.

About The Author