ವಿಶ್ವೇಶ್ವರ ಶಿವನ‌ ಲೀಲೆ, ಸೊಂಟವಿಲ್ಲದ ಬಾಲಕ ನಡೆಯಲಾರಂಭಿಸಿದ !

 

ಗಬ್ಬೂರು ಅಗಸ್ಟ್ 27 ( ರಾಯಚೂರು ) : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಅಗಸ್ಟ್ 27 ರ ಆದಿತ್ಯವಾರದಂದು 59 ನೆಯ ‘ ಶಿವೋಪಶಮನ ಕಾರ್ಯ ‘ ನಡೆಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಶಿವಾನುಗ್ರಹವನ್ನು ಕರುಣಿಸಿದರು.

ಸೊಂಟದ ಸಮಸ್ಯೆಯಿಂದ ನಡೆದಾಡಲು ಬಾರದೆ ಇದ್ದ ಬಾಲಕನೊಬ್ಬ ಇಂದು ನಡೆಯುತ್ತ ಬಂದಿದ್ದು 59 ನೆಯ ‘ ಶಿವೋಪಶಮನ ಕಾರ್ಯ’ ದಲ್ಲಿ ಭಕ್ತರು ಕಣ್ತುಂಬಿಕೊಂಡ ವಿಶ್ವೇಶ್ವರ ಶಿವನ ಲೀಲಾದ್ಭುತ ದೃಶ್ಯವಾಗಿತ್ತು.ಗಬ್ಬೂರಿನ ಜಡೆಯ್ಯಸ್ವಾಮಿಯವರ ಮಗ ಹದಿನೈದು ವರ್ಷದ ಬಸವರಾಜ ಸ್ವಾಮಿ ಎನ್ನುವ ಬಾಲಕ ಹುಟ್ಟಿನಿಂದಲೂ ಸೊಂಟದಲ್ಲಿ ಬಲವಿಲ್ಲದೆ ನಡೆದಾಡದೆ ಕುಳಿತಲ್ಲೇ ಕುಳಿತುಕೊಳ್ಳುವ ಸ್ಥಿತಿಯಲ್ಲಿದ್ದ.ಪ್ರಸಿದ್ಧ ವೈದ್ಯರುಗಳಲ್ಲಿ ತೋರಿಸಿಯೂ ಗುಣಮುಖನಾಗಿರಲಿಲ್ಲ.ವೈದ್ಯರು ‘ ಇದಕ್ಕೇನು ಮಾಡಲು ಬರುವುದಿಲ್ಲ,ಇರುವಷ್ಟು ದಿನ ಹೀಗೆಯೇ ಇರುತ್ತಾನೆ’ ಎಂದು ಕೈಚೆಲ್ಲಿದ್ದರಿಂದ ನಿರಾಶರಾಗಿದ್ದ ಜಡೆಯ್ಯಸ್ವಾಮಿ ದಂಪತಿಗಳು ತಮ್ಮ ಮಗ ಬಸವರಾಜಯ್ಯ ಸ್ವಾಮಿಯನ್ನು ಕಳೆದವಾರ ನಡೆದ 58 ನೆಯ ‘ಶಿವೋಪಶಮನ ಕಾರ್ಯ’ ಕ್ಕೆ ನಿತ್ಯಸತ್ಯನಾಗಿರುವ ಜಗದೊಡೆಯ ವಿಶ್ವೇಶ್ವರ ಸನ್ನಿಧಿಗೆ ಕರೆದುಕೊಂಡು ಬಂದಿದ್ದರು.ಸೊಂಟದಲ್ಲಿ ನಡೆಯುವ ತ್ರಾಣ ಇಲ್ಲದೆ ಇಲ್ಲದೆ ಮಲ ಮೂತ್ರ ವಿಸರ್ಜನೆಗೂ ಮಗನನ್ನು ಎತ್ತಿಕೊಂಡು ಹೋಗಬೇಕಾದ ಕರುಣಾಜನಕ ಸ್ಥಿತಿಯನ್ನು ಪೀಠಾಧ್ಯಕ್ಷರೆದುರು ನಿವೇದಿಸಿದ್ದರು.

ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಬಾಲಕ ಬಸವರಾಜ ಸ್ವಾಮಿಯ ಸಮಸ್ಯೆಯನ್ನು ಕಂಡು, ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನಲ್ಲಿ ‘ ಈ ಬಾಲಕನನ್ನು ಗುಣಮುಖನನ್ನಾಗಿಸು ತಂದೆ.ಎಲ್ಲರಂತೆ ಆತನೂ ನಡೆದಾಡುವಂತಾಗಲಿ.ನಿನ್ನ ಸನ್ನಿಧಿಯಲ್ಲಿ ಆತ ಮರುಹುಟ್ಟು ಪಡೆದಂತೆ ತಿರುಗಾಡುವಂತಾಗಲಿ’ ಎಂದು ಪ್ರಾರ್ಥಿಸಿ ಶಿವಾಭಯವನ್ನು ಕರುಣಿಸಿ,ಬಸವರಾಜ ಸ್ವಾಮಿಯ ಸೊಂಟ,ಕೈಕಾಲುಗಳಿಗೆ ಸವರಲು ಎಣ್ಣೆ ಮಂತ್ರಿಸಿಕೊಟ್ಟಿದ್ದರು.ಶಿವಲೀಲೆಯ ಪ್ರಭಾವದಿಂದ ಇಂದು ಬಾಲಕ ಬಸವರಾಜ ಸ್ವಾಮಿ ಮಹಾಶೈವ ಧರ್ಮಪೀಠದ ಆವರಣದಿಂದ ವಿಶ್ವೇಶ್ವರನ ಸನ್ನಿಧಿಗೆ ಒಂದೊಂದೇ ಹೆಜ್ಜೆಯನ್ನು ಕಿತ್ತಿ ಇಡುತ್ತ ತನ್ನದೆ ಸಮತೋಲನದಲ್ಲಿ ನಡೆದು ಬಂದು ಎಲ್ಲರ ಆಶ್ಚರ್ಯಕ್ಕೆ ಕಾರಣನಾದ.

ಮಹಾಶೈವ ಧರ್ಮಪೀಠದಿಂದ ಮನೆಗೆ ಹೋಗುವಾಗಲೂ ಶ್ರೀಕ್ಷೇತ್ರದ ಹೊರವಲಯದವರೆಗೂ ನಡೆದೇ ಹೋದ.ಸೊಂಟದಲ್ಲಿ ಬಲವಿಲ್ಲದ ಬಾಲಕನನ್ನು ನಡೆದಾಡುವಂತೆ ಮಾಡಿ ವಿಶ್ವೇಶ್ವರ ಶಿವನು ತನ್ನ ‘ ಅಸಾಧ್ಯರೋಗ ಗುಣಪಡಿಸುವ’ ಮಹಾವೈದ್ಯನ ಲೀಲೆಯನ್ನು ಮೆರೆದ ಘಟನೆಗೆ ಭಕ್ತಗಣ ಸಾಕ್ಷಿಯಾಯಿತು.

ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದ ಅತ್ತನೂರಿನ ಶ್ರೀಮತಿ ಪರಮ್ಮ ದಿಡ್ಡಿಬಸವ ಅವರು ರೋಗಮುಕ್ತರಾಗಿದ್ದರಿಂದ ಮಹಾಶೈವ ಧರ್ಮಪೀಠದ ಇಂದಿನ ದಾಸೋಹ ಸೇವೆಯನ್ನು ಸಲ್ಲಿಸಿದರು.ಮಹಾಶೈವ ಧರ್ಮಪೀಠದ ಪರವಾಗಿ ಖಾಜಯ್ಯಗೌಡ ಅಬ್ಕಾರಿ ಅವರು ಶ್ರೀಮತಿ ಪರಮ್ಮ,ದಿಡ್ಡಿಬಸವ ಎ ಎಸ್ ಐ ದಂಪತಿಗಳನ್ನು ಸನ್ಮಾನಿಸಿದರು.ಪೀಠಾಧ್ಯಕ್ಷರು ಶಿವಾನುಗ್ರಹಪೂರ್ವಕವಾಗಿ ದಂಪತಿಗಳನ್ನು ಆಶೀರ್ವದಿಸಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮಹಾಶೈವ ಧರ್ಮಪೀಠದ ಮೂಲ ಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಮಹಾಶೈವ ಧರ್ಮಪೀಠದ ದಾಸೋಹ ಸಮಿತಿಯ ಮುಖ್ಯಸ್ಥರಾದ ಗುರುಬಸವ ಹುರಕಡ್ಲಿ,ಪುರಪ್ರಮುಖರಾದ ಖಾಜಯ್ಯಗೌಡ ಅಬ್ಕಾರಿ,ಶಕ್ತಿನಗರದ ಸಿದ್ಧನಗೌಡ ಪಾಟೀಲ್ ಮತ್ತು ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಯ್ಯಸ್ವಾಮಿ ಮಠಪತಿ, ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರಾದ ಉದಯಕುಮಾರ ಪಂಚಾಳ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಯಲ್ಲಪ್ಪ ಕರಿಗಾರ, ವೀರೇಶ ಯಾದವ,ಪರಶುರಾಮ.

ಖಾನಾಪುರ,ಹನುಮೇಶ,ಸೂಗುರಯ್ಯ ಸ್ವಾಮಿ ಮಲದಕಲ್, ಜಗದೀಶರಾವ್ ಕಲ್ಬುರ್ಗಿ,ಮಲ್ಲಯ್ಯ ಸ್ವಾಮಿ ಹಿರೇಮಠ,ತಾತಪ್ಪ ಚಿಕ್ಕನಳ್ಳಿ,ಶಿವಕುಮಾರ ವಸ್ತಾರ, ಪತ್ರಕರ್ತ ಏಳುಬಾವೆಪ್ಪ ಗೌಡ,ಅಮರೇಶ ಚೆಲುವಾದಿ ಹಾಗೂ ಮಹಾಶೈವ ಧರ್ಮಪೀಠದ ಪ್ರಸಾರ ವ್ಯವಸ್ಥಾಪಕ ಉದಯಕುಮಾರ ಮಡಿವಾಳ ಸೇರಿದಂತೆ ಭಕ್ತರುಗಳು ಉಪಸ್ಥಿತರಿದ್ದರು.

 

About The Author