ಭಕ್ತರ ಜಯ ಘೋಷದ ಮಧ್ಯೆ ಸರಪಳಿ ಹರಿಯುವ ಕಾರ್ಯಕ್ರಮ : ಸಗರ ನಾಡಿನ ಆರಾಧ್ಯ ದೈವ ಶ್ರೀ ವಗ್ಗರಾಯಣ್ಣ ಮುತ್ಯಾನ ಜಾತ್ರಾ ಸಂಭ್ರಮ

ಶಹಾಪುರ :ಸಗರನಾಡಿನ ಆರಾಧ್ಯ ದೈವನೆನೆಸಿದ ವಗ್ಗರಾಯಣ್ಣ ಮುತ್ಯಾನ ಜಾತ್ರಾ ಸಂಭ್ರಮದಿಂದ ಮುತ್ಯಾನ ಸನ್ನಿಧಾನದಲ್ಲಿ ಜರುಗಿತು. ರವಿವಾರ ಬೆಳಗಿನ ಜಾವ ಹಳೆಪೇಟೆಯಿಂದ ಡೊಳ್ಳು ವಾದ್ಯದೊಂದಿಗೆ ಉತ್ಸವ ಮೂರ್ತಿ ಪಲ್ಲಕ್ಕಿಯು, ರಾಕಂಗೇರಾ ವಗ್ಗರಾಯಣ್ಣ ಮುತ್ಯಾನ ದೇವಸ್ಥಾನದವರೆಗೆ ಹೋಗಿ, ಅಲ್ಲಿ ಗಂಗಾಸ್ನಾನದ ನಂತರ ರಾಯಣ್ಣ ಮುತ್ಯಾನ ಕಟ್ಟೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮ, ಮಾಳಪ್ಪ ಪೂಜಾರಿಯವರ ಸರಪಳಿ ಹರಿಯುತ್ತಾ ಜೈಕಾರ ಹಾಕಿ ದೇವರ ಹೇಳಿಕೆ ಆಗುತ್ತದೆ. ಜಾನಪದ ಸಂಸ್ಕøತಿ ಬಿಂಬಿಸುವ ಡೊಳ್ಳಿನ ಕುಣಿತದ ಹಾಡು, ಪೌರಾಣಿಕ ಕಥೆಗಳನ್ನು ಹಾಡಿನ ರೂಪದಲ್ಲಿ ಪ್ರಸ್ತುತಪಡಿಸುತ್ತಾರೆ, ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಾರೆ, ಸರ್ವರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗುತ್ತದೆ.