ವಿಶೇಷ ಮಕ್ಕಳ ಸೇವಾ ಕಾರ್ಯಕ್ಕೆ ಸರ್ವರ ಪ್ರೋತ್ಸಾಹ : ಬುದ್ಧಿಮಾಂದ್ಯ ಮಕ್ಕಳನ್ನು ಪ್ರೀತಿ, ವಿಶ್ವಾಸದಿಂದ ಕಾಣಿರಿ: ಸಚಿವ ದರ್ಶನಾಪುರ 

 ಮೋಕ್ಷ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ವತಿಯಿಂದ ಮೋಕ್ಷ ವಿಶೇಷ ಮಕ್ಕಳ ಶಾಲೆಯ ಉದ್ಘಾಟನೆಯನ್ನು ಭೀ.ಗುಡಿ ವೀರಶೈವ ಕಲ್ಯಾಣ ಮಂಟಪದಲ್ಲಿ ಸಣ್ಣ ಕೈಗಾರಿಕೆ ಸಾರ್ವಜನಿಕ ಉದ್ಯಮ ಸಚಿವ ಶರಣಬಸಪ್ಪಗೌಡ ದರ್ಶನಾಪುರ ನೆರವೇರಿಸಿದರು.
ಶಹಾಪುರ : ಬುದ್ಧಿಮಾಂಧ್ಯ ಮಕ್ಕಳನ್ನು ಪ್ರೀತಿ, ವಿಶ್ವಾಸ ಮತ್ತು ಆತ್ಮಗೌರವದಿಂದ ಕಾಣಬೇಕು, ವಿಶೇಷ ವಿಕಲಚೇತನ ಮಕ್ಕಳನ್ನು ಕಂಡು ಕೇವಲ ಅನುಕಂಪ ತೋರಿಸದೆ, ಅವರೆಲ್ಲರಿಗೂ ಅವಕಾಶಗಳನ್ನು ನೀಡುವ ಮೂಲಕ ವಿಶ್ವಾಸ ತುಂಬುವ ಕಾರ್ಯಕ್ಕೆ ಸರ್ವರ ಸಹಕಾರ   ಅಗತ್ಯವಾಗಿದ್ದು, ಸರ್ಕಾರ ಕೂಡ ಅವರ ಜೊತೆಗಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
      ನಗರದ ಭಿ.ಗುಡಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಮೋಕ್ಷ ಗ್ರಾಮೀಣ ಅಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ಶಖಾಪುರದ ದಿ.ಸಿದ್ದಣ್ಣಗೌಡ ಪಾಟೀಲ್ ಇವರ ಸ್ಮರಣಾರ್ಥ ಮೋಕ್ಷ ವಿಶೇಷ ಮಕ್ಕಳ ಶಾಲೆಯ ಉದ್ಘಾಟನೆ ಸಮಾರಂಭ ನೆರವೇರಿಸಿ ಮಾತನಾಡಿದ ಸಚಿವ ದರ್ಶನಾಪುರ, ಬೇರೆ ಬೇರೆ ಶಾಲೆಗಳನ್ನು ಆರಂಭಿಸುವುದು ಸಹಜ, ಆದರೆ ಹಲವು ನೋವು-ನಲಿವು ಗಳನ್ನು ಅನುಭವಿಸುತ್ತಿರುವ ಮಕ್ಕಳಿಗಾಗಿ ವಿಶೇಷ ಶಾಲೆ ಪ್ರಾರಂಭಿಸುವುದು ಶ್ರೇಷ್ಠ ಕಾರ್ಯ, ಅಂತಹ ಮಕ್ಕಳ ತಾಯಂದಿರಿಗೆ ಸಂಸ್ಥೆಯ ಬಗ್ಗೆ ಅಭಿಮಾನವಿರುತ್ತದೆ, ಸಂಸ್ಥೆಗೆ ಸರ್ಕಾರದ ಯೋಜನೆಗಳು ತಲುಪಿಸುವಲ್ಲಿ ಸಾರ್ಥಕ ಪ್ರಯತ್ನ ಹಾಕುವುದು ನಮ್ಮ ಜವಾಬ್ದಾರಿ ಎಂದರು.
       ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಶರಣಪ್ಪ ಪಾಟೀಲ ಮಾತನಾಡಿ, ವಿಕಲಚೇತನರಿಗೆ ಸೌಲಭ್ಯ ನೀಡುವಲ್ಲಿ ತಾಲೂಕಿನ ಕೊಡುಗೆ ಬಹಳವಿದ್ದು, ಸಚಿವರ ಕಳಕಳಿಗೆ ಸಾಕ್ಷಿಯಾಗಿದೆ. ಬುದ್ಧಿಮಾಂದ್ಯ, ಕಿವುಡ, ಅಂಧ, ಮೂಗ, ಹೀಗೆ ವಿಶೇಷ ಅಂಗವಿಕಲ ಉಳ್ಳವರಿಗೆ ಸಹಾನುಭೂತಿಯ ಜೊತೆಗೆ, ಅವರ ಜೀವನಕ್ಕೆ ಸಹಕಾರಿಯಾಗಲು ಸರ್ಕಾರದ ಇಲಾಖೆ ಹಲವು ಯೋಜನೆ ರೂಪಿಸಿದೆ, ಎಲ್ಲರೂ ಪ್ರಯೋಜನ ಪಡೆಯಬೇಕು, ಪ್ರಸ್ತುತ ಪ್ರಾರಂಭವಾಗಿರುವ ವಿಶೇಷ ಮಕ್ಕಳ ಶಾಲೆಗೆ ಸರ್ಕಾರದ ಎಲ್ಲಾ ಸಹಕಾರದ ಜೊತೆಗೆ ಸಮಸ್ತ ಜನತೆಯ ಸಹಭಾಗಿತ್ವ ಮುಖ್ಯವಾಗಿದೆ ಎಂದರು.
      ರೈತ ಮುಖಂಡ ಕಾಂಗ್ರೆಸ್ ಪಕ್ಷದ ಹಿರಿಯರಾದ ಶರಣಪ್ಪ ಸಲಾದಪುರ ಮಾತನಾಡಿದರು, ಸುವರ್ಣ.ಎಂ.ಪಾಟೀಲ ಪ್ರಾಸ್ತ್ತಾವಿಕವಾಗಿ ಮಾತನಾಡಿದರು.
     ವೇದಿಕೆ ಮೇಲೆ ಮೋಕ್ಷ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಕಳಸಪ್ಪಗೌಡ ಶಖಾಪುರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮರಿಗೌಡ ಹುಲ್ಕಲ್, ಡಾ.ಭೀಮಣ್ಣ ಮೇಟಿ, ತಿಮ್ಮಯ್ಯ ಪುರ್ಲೆ, ಧರ್ಮಣ್ಣ ಹೋತಪೇಟೆ, ಸಂಜೀವರಾವ ಕುಲ್ಕರ್ಣಿ, ಮಲ್ಲಿಕಾರ್ಜುನ ಪೂಜಾರಿ, ಡಾ.ರಮೇಶ ಗುತ್ತೇದಾರ, ಶಿವಮಹಾಂತ ಚಂದಾಪುರ, ಗೋಪಿಚಂದ ಚೌವ್ಹಾಣ, ಹನುಮೇಗೌಡ ಮರ್ಕಲ್, ಬನ್ನಪ್ಪ.ಜೆ.ಗುಡಿಮನಿ,ಡಾ.ಮಹೇಶ ಮಾಲಗತ್ತಿ, ಭೀಮಣ್ಣ ಶಖಾಪುರ, ಬಸವರಾಜ ಪಾಟೀಲ, ಮಲ್ಕಣ್ಣಗೌಡ.ಎಸ್.ಪಾಟೀಲ, ಡಾ.ರವೀಂದ್ರನಾಥ ಹೊಸ್ಮನಿ, ಮುಸ್ತಫಾ ದರ್ಬಾನ, ಇಸ್ಮಾಯಿಲ್ ಚಾಂದ, ಸೈಯದ್ ಜಾಫರಿ, ಬಾಬು ಜಾನಿ, ದೇವು.ಭಿ.ಗುಡಿ,ಸುಭಾಷ ಹೋತಪೇಟ, ಡಾ.ಚಂದ್ರಶೇಖರ ದೊಡ್ಮನಿ, ಸಿದ್ದುಪಟ್ಟೆದಾರ ಇದ್ದರು. ವಿಜಯಲಕ್ಷ್ಮಿ ಶೆಳ್ಳಗಿ ಪ್ರಾರ್ಥಿಸಿದರು, ಮಲ್ಲಯ್ಯ ಸ್ವಾಮಿ ಇಟಗಿ ನಿರ್ವಹಿಸಿದರು.

ಮೋಕ್ಷ ವಿಶೇಷ ಮಕ್ಕಳ ಶಾಲೆ ಭೀಮರಾಯನಗುಡಿ ಈ ಶಾಲೆಗೆ ಕರ್ನಾಟಕ ಸರ್ಕಾರದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 10 ನೇ ತರಗತಿಯ ಪರೀಕ್ಷೆಗೆ ನೇರ ಪ್ರವೇಶ ಪಡೆಯಲು ಅನುಮತಿ ಕೊಟ್ಟಿದ್ದು ಇದರ ಸದುಪಯೋಗವನ್ನು ವಿಧ್ಯಾರ್ಥಿಗಳು, ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟವರು ಮತ್ತು ಯಾರಿಗೆ 10ನೇ ತರಗತಿಯ ಅಂಕಪಟ್ಟಿಯ ಉತ್ತಿರ್ಣದ ಅವಶ್ಯಕತೆ ಇದೆ ಅವರು ಹಾಗೂ ಎಲ್ಲರಿಗು ಇದು ಉಪಯುಕ್ತ. ಶಿಕ್ಷಣ ವಂಚಿತರಿಗಾಗಿ ಶಿಕ್ಷಣ ಕೊಡಿಸುವುದು ಮತ್ತು ಸಾಕ್ಷರತೆಯ ಪ್ರಮಾಣ ಹೆಚ್ಚಿಸುವುದು ನಮ್ಮ ಸಂಸ್ಥೆಯ ಉದ್ದೇಶ.

ಪ್ರವೇಶಗಳು ಪ್ರಾರಂಭ – 07/08/2023 ರಿಂದ
(45 ಸೀಟ್ ಮಾತ್ರ)

ಅರ್ಹತೆ & ದಾಖಲೆಗಳು

1} 7ನೇ ಪಾಸ್/ಫೇಲ್ TC.
2} ಆಧಾರ ಕಾರ್ಡ್.
3} 4 ಪಾಸ್ಪೋರ್ಟ್ ಅಳತೆಯ ಫೋಟೋ.
4} ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
5} ಓದುವ ಬರೆಯುವ ಜ್ಞಾನ ಬೇಕು.

ಸಂಪರ್ಕಿಸಬೇಕಾದ ದೂರವಾಣಿ –
📱 – 9844446962