ಕುಂಬಾರ ಸಮಾಜದ ವತಿಯಿಂದ ಅಭಿನಂದನೆ :  ಗೌರವ ಸ್ವೀಕರಿಸಿದ ಸಚಿವ ದರ್ಶನಾಪುರ :  ಕುಂಬಾರರ ಕರಕುಶಲತೆ ವರ್ಣಿಸಿದ ದರ್ಶನಾಪುರ : ಜನಜೀವನದ ಅವಿಭಾಜ್ಯ ಅಂಗವಾದ ಕುಂಬಾರಿಕೆ ವೃತ್ತಿ :ಸಚಿವ ದರ್ಶನಾಪುರ 

ಶಹಾಪುರ : ನಾಗರಿಕತೆಯ ಬೆಳವಣಿಗೆಯಲ್ಲಿ ಕುಂಬಾರ ಸಮುದಾಯದ ಪ್ರಮುಖ ಪಾತ್ರ ಯಾರು ಮರೆಯುವಂತಿಲ್ಲ, ಕುಂಬಾರರ ಕರಕುಶಲತೆ ಜೀವನದ ಅವಿಭಾಜ್ಯ ಅಂಗವಾಗಿದೆ, ಕುಂಬಾರರ ಸಮಾಜದ ಅಭಿವೃದ್ಧಿಗೆ ಸದಾಕಾಲ ಬದ್ಧನಾಗಿದ್ದು, ಪ್ರತಿಯೊಂದು ರಂಗದಲ್ಲಿಯೂ ಸಮುದಾಯದವರು ಮುಂದೆಬರಬೇಕು ಎಂದು ಸಣ್ಣಕೈಗಾರಿಗೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವರಾದ ಶರಣಬಸ್ಸಪ್ಪಗೌಡ ದರ್ಶನಾಪುರ ತಿಳಿಸಿದರು.
        ನಗರದ ಕುಂಬಾರಓಣಿ ಹಿರೇಮಠದಲ್ಲಿ ಕುಂಬಾರ ಸಮಾಜದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮೂಲ ಕಸುಬಿನ ಜೊತೆಗೆ ಕುಂಬಾರಿಕೆ ವೃತ್ತಿಯನ್ನು ಮುಂದುವರೆಸಿ ಹೋಗುತ್ತಿರುವ ಸಮಾಜ ಬಾಂಧವರು, ಆರ್ಥಿಕವಾಗಿ ಸಬಲರಾಗಬೇಕು, ಪ್ರಸ್ತುತ ಆಧುನಿಕತೆಯ ವ್ಯವಸ್ಥೆಗೂ ಹೊಂದಿಕೊಳ್ಳಬೇಕು ಎಂದ ಅವರು, ಈಗಾಗಲೇ ಕುಂಬಾರ ಸಮಾಜಕ್ಕೆ ಒಂದೂವರೆ ಎಕರೆ ಭೂಮಿಯಲ್ಲಿ ಸಮಾಜದಲ್ಲಿನ ವಸತಿರಹಿತರಿಗೆ ಸುಮಾರು 70 ನಿವೇಶನ ವ್ಯವಸ್ಥೆ ಮಾಡಿದ್ದು, ಸಮಾಜದವರು ಅನುಕೂಲ ಪಡೆಯಬೇಕು, ಬರುವ ದಿನದಲ್ಲಿ ಒಂದೇ ಕಡೆ ಕುಂಬಾರಿಕೆ ವೃತ್ತಿ ಮಾಡಲು ದೊಡ್ಡ ಶೆಡ್ ನಿರ್ಮಾಣದ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸೂಕ್ತ ಅವಕಾಶ ಕಲ್ಪಿಸಲಾಗುವುದು, ಅಧಿಕಾರವಿದ್ದಾಗ ಕ್ಷೇತ್ರದ ಪ್ರತಿಯೊಂದು ಸಮಸ್ಯೆಗಳಿಗೂ ಸ್ಪಂದಿಸುತ್ತಾ, ತಾಲೂಕಿನ ಅಭಿವೃದ್ಧಿಗೆ ನನ್ನ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿರುತ್ತದೆ. ಸಚಿವರಾಗುವ ಅವಕಾಶ ನೀಡಿದ ಜನತೆಯ ಋಣ ನಾನೆಂದು ಮರೆಯುವುದಿಲ್ಲವೆಂದರು.
     ಇದೇ ಸಂದರ್ಭದಲ್ಲಿ ಮುಖಂಡ ಸಣ್ಣನಿಂಗಣ್ಣ ನಾಯ್ಕೋಡಿ ಮಾತನಾಡಿದರು.
     ಹಿರೇಮಠದ ಪೂಜ್ಯರಾದ ಶ್ರೀ ಸೂಗುರೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಅತ್ಯಂತ ಸರಳ ಸಜ್ಜನಿಕೆಗೆ ಹೆಸರಾದ ಸಚಿವ ದರ್ಶನಾಪುರ ಅವರು ಜನರ ಮೇಲಿಟ್ಟಿರುವ ಅವರ ಪ್ರೀತಿ,ವಿಶ್ವಾಸ ಮೆಚ್ಚುವಂತದ್ದು ಎಂದರು.
   ಈ ಸಂದರ್ಭದಲ್ಲಿ ಸಾಹಿತಿ  ದೇವೇಂದ್ರಪ್ಪ.ಎಸ್.ಕರಡಕಲ್ ಸಚಿವರಿಗಾಗಿ ಬರೆದ ಕವಿತೆಯನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಬಸವರಾಜ ಹೇರುಂಡಿ, ಸಿದ್ರಾಮಪ್ಪ ಕೆರವಟಿಗಿ, ಬಸವರಾಜ ಕೆರವಟಿಗಿ, ಶಿವಣ್ಣ ಇಜೇರಿ, ಸಿದ್ದರಾಮಪ್ಪ ಯಾಳಗಿ,ಬಸವರಾಜ, ಅಯ್ಯಪ್ಪ, ನಾಗಭೂಷಣ, ಚಂದ್ರು ಯಾಳಗಿ, ಉಮೇಶ, ನಾಗಣ್ಣ, ದೇವಿಂದ್ರಪ್ಪ, ಡಾ.ಬಿ.ಎಸ್.ಹಾದಿಮನಿ, ಸೋಮಶೇಖರಯ್ಯ ಹಿರೇಮಠ ಈಶಣ್ಣ, ಮಲ್ಲಣ್ಣ ನಾಡಗೌಡ, ವಿಶ್ವನಾಥ ಸೇರಿದಂತೆ ಅನೇಕ ಪ್ರಮುಖರು, ಯುವಕರು, ಸಮಾಜದ ಮಹಿಳಾ ಬಂಧುಗಳು ಇದ್ದರು. ಬಸವರಾಜ ಹಯ್ಯಾಳ ಪ್ರಾರ್ಥಿಸಿದರು, ಡಾ.ಬಸವರಾಜ ಇಜೇರಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

About The Author