ಮದರ್ ತೆರೇಸಾರು ನಮ್ಮೆಲ್ಲರಿಗೂ ಆದರ್ಶಪ್ರಾಯ ಮಹಿಳೆ  ಗಾಯತ್ರಿ ಅಭಿಮತ

ವಡಗೇರಾ :ಮಾನವತಾವಾದಿ ಮದರ್ ತೆರೇಸಾ ನಮ್ಮ ದೇಶದ ಅನಾಥರು ವೃದ್ಧರ ಹಾಗೂ ರೋಗಿಗಳ ಪಾಲಿಗೆ ತಾಯಿ ಸ್ವರೂಪಿಯಾಗಿದ್ದರು ಎಂದು ಕಸ್ತೂರಿ ಬಾಲಕಿಯರ ವಸತಿ ನಿಲಯದ ಮುಖ್ಯ ಶಿಕ್ಷಕಿ ಪಿ. ಬಿ. ಗಾಯತ್ರಿ ಹೇಳಿದರು.
       ಪಟ್ಟಣದ ಕಸ್ತೂರಿ ಬಾ ಬಾಲಕಿಯರ ವಸತಿ ನಿಲಯದಲ್ಲಿ ಮದರ್ ತೆರೇಸಾ  113ನೇ ಜಯಂತಿ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ಮದರ್ ತೆರೇಸಾ ಸಮಾಜ ಸುಧಾರಕರಲ್ಲಿ  ಪ್ರಮುಖರಾಗಿದ್ದರು. ತಮ್ಮ ಇಡೀ ಜೀವನವನ್ನು ಬಡವರು ನಿರ್ಗತಿಕರಿಗೆ ರೋಗಿಗಳ ಸೇವೆಗಾಗಿ ಹಗಲಿರುಳು ಶ್ರಮಿಸಿದ ಮಹಾನ್ ಧೀಮಂತ ಮಹಿಳೆ. ನೀವುಗಳು ಕೂಡ ವಿದ್ಯಾರ್ಥಿ ದಿಸೆಯಿಂದಲೇ ಸಮಾಜ ಸೇವೆ, ಪರೋಪಕಾರಿ ಕೆಲಸಗಳಲ್ಲಿ ತೊಡಗಿಸಿಕೊಂಡು ಅವರ ತತ್ವ ಆದರ್ಶಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಕ್ಕಳಿಗೆ ಹೇಳಿದರು.
ಈ ಸಂದರ್ಭದಲ್ಲಿ ವಸತಿ ನಿಲಯ ಪಾಲಕಿ ಚಂದ್ರಕಲಾ ಸಂಗೀತಾ ಶಾಂತಾ ಎನ್ ಜಡಿ ದಿಲ್ ಶಾದ್ ಪವಿತ್ರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

About The Author