ಸಗರ ಗ್ರಾಮದ ದೇಸಾಯಿ ಮಠದಲ್ಲಿ : ಆಗಸ್ಟ್ 28 ರಂದು ಸಗರದಲ್ಲಿ ರುದ್ರಾಭಿಷೇಕ

ಶಹಪುರ: ತಾಲೂಕಿನ ಸಗರ ಗ್ರಾಮದ ದೇಸಾಯಿ ಮಠದಲ್ಲಿ ಶ್ರೀ ಮಹಾತ್ಮ ಸಿದ್ದರಾಮೇಶ್ವರ ಸ್ವಾಮಿ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪಂಚಾಭಿಷೇಕ, ಕಾರ್ಯಕ್ರಮ ಬೆಳಗ್ಗೆ 8 ಗಂಟೆಗೆ ಜರುಗುವುದು ಮತ್ತು  ಧರ್ಮ ಸಭೆಯನ್ನು  ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಠದ ವಿಶ್ವಾರಾಧ್ಯಸ್ವಾಮಿ ದೇಸಾಯಿ ಮಠ  ಪ್ರಕಟಣೆಗೆ ತಿಳಿಸಿದ್ದಾರೆ.
ಕಡಕೋಳ ಮಡಿವಾಳೇಶ್ವರ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಮಹಾ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು,ಒಕ್ಕಲಿಗರ ಹಿರೇಮಠದ ಮರುಳ ಮಹಾಂತ ಶಿವಾಚಾರ್ಯರು ಅಧ್ಯಕ್ಷತೆ ವಹಿಸಲಿದ್ದಾರೆ. ಕುಂಬಾರಗೇರಿ ಹಿರೇಮಠದ ಪೂಜ್ಯರಾದ ಸೂಗುರೇಶ್ವರ  ಶಿವಾಚಾರ್ಯ ಮಹಾಸ್ವಾಮಿಗಳು ಉಪದೇಶ ನೀಡುವರು,ನಾಗಠಾಣ  ಹಿರೇಮಠದ ಪೂಜ್ಯರಾದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಮ್ಮುಖದಲ್ಲಿ ಈ ಕಾರ್ಯಕ್ರಮಗಳು ನೆರವೇರಿವು.
ಅಕ್ಕನ ಬಳಗದ ಮಾತೊಶ್ರೀ ಶರಣಮ್ಮತಾಯಿ,ನಿಲೋಗಲ್ ಗುರುಲಿಂಗಯ್ಯ ತಾತ ಗದ್ದಿಗೆಯ ಪೂಜ್ಯರಾದ ವೇದಮೂರ್ತಿ ಬಸಯ್ಯ ಸ್ವಾಮಿಗಳು,ಪ್ರಧಾನ ಅರ್ಚಕರಾದ ಅಂಬರೀಶ್ ಭಟ್,ಸೋಮಲಾಪುರದ ಅಂಬಾದೇವಿ ಮಠದ ಸಿದ್ಧ ಪರ್ವತದ ಶ್ರೀಗಳು,ಶಿಕ್ಷಕರಾದ ರಾಜಶೇಖರ್ ದೇಸಾಯಿ,ಚನ್ನೂರು ರೇವಣಸಿದ್ದೇಶ್ವರ ಮಠದ ಗುರುಪಾದಯ್ಯ ಸ್ವಾಮಿಗಳು,ಕಡಗುಡ ಮಠದ  ಗುರುಸ್ವಾಮಿ ಶಾಸ್ತಿಗಳು,ಬಂಟನೂರು ಹಿರೇಮಠದ ಅಮರೇಶ ಸ್ವಾಮಿ ಶಾಸ್ತ್ರಿಗಳು ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

Leave a Reply

Your email address will not be published. Required fields are marked *