ಬದುಕಿಗೆ ಪೂರಕವಾಗುವ ಸಾಹಿತ್ಯ ರಚನೆಯಾಗಬೇಕು – ಮುಡಬಿ ಗುಂಡೇರಾವ್ 

ಶಹಪುರ : ಪ್ರತಿಯೊಬ್ಬರ ಬದುಕಿಗೆ ಪೂರಕವಾಗಿ,ಅವರ ಬಾಳಿಗೆ ಬೆಳಕು ನೀಡಿ ಯಶಸ್ವಿಗೆ ದಾರಿ ದೀಪವಾಗುವಂತ ಸಾಹಿತ್ಯ ರಚನೆಯಾಬೇಕು ಎಂದು ಸಾಹಿತಿ ಸಂಶೋಧಕರಾದ ಮುಡಬಿ ಗುಂಡೇರಾವ್ ಹೇಳಿದರು.
ತಾಲೂಕಿನ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿರುವ ಸೈನಿಕರೊಂದಿಗೆ ಸ್ವಾತಂತ್ರ್ಯ,ಶ್ರಾವಣ, ಸಂಭ್ರಮದ ನಿಮಿತ್ಯ ಕವಿಗೋಷ್ಠಿ ಹಾಗೂ ನಾಡಿನ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಇಂತಹ ಕಾರ್ಯಕ್ರಮಗಳು ಆಯೋಜಿಸುವುದಕ್ಕೆ ಸಂಘ ಸಂಸ್ಥೆಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಲ್ಬುರ್ಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ  ಮಾತನಾಡಿ,ಈ ಕೃತಿಯಲ್ಲಿ ಆಡಂಬರವಿಲ್ಲದೆ ಸ್ಪಷ್ಟ ಹಾಗೂ ನಿಖರತೆ ಅರ್ಥ ನೀಡುವ ಕನ್ನಡ ನುಡಿಮುತ್ತುಗಳು ಇದರಲ್ಲಡಗಿವೆ,ಮನುಷ್ಯ ಮಾನವೀಯತೆಯಿಂದ ಬದುಕಬೇಕು ಎಂಬುದು ಕನ್ನಡ ನುಡಿಮುತ್ತುಗಳ ಸಾರಾಂಶ ಹೊಂದಿದೆ ಎಂದು ನುಡಿದರು.
ಇನ್ನೋರ್ವ ಮುಖ್ಯ ಅತಿಥಿಗಳು ಹಾಗೂ ಹಿರಿಯ ಸಾಹಿತಿಗಳಾದ ಡಾ: ಅಬ್ದುಲ್ ಕರೀಂ ಕನ್ಯಾಕೋಳೂರು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮನದಲ್ಲಿ ಇದ್ದರೆ ಸಾಲದು,ಅದು ಮನೆಯಲ್ಲಿ ಹಾಗೂ ಮನದಲ್ಲಿ ವಿಸ್ತಾರವಾಗಿ ಬೆಳೆಯಬೇಕು,ಅಲ್ಲದೆ ಡಾ:ದೇವೇಂದ್ರಪ್ಪ ಹಡಪದ ಅವರು ಸಾಮಾನ್ಯ ಭಾಷೆಯಲ್ಲಿ ಗ್ರಾಮೀಣ ಭಾಷೆಯ ಸೊಗಡನ್ನು ತಮ್ಮ ಸಾಹಿತ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ, ಸಾಹಿತ್ಯ ಹಾಗೂ ಜೀವನಾಭಿರುಚಿ ಒಂದಕ್ಕೊಂದು ಬೆರೆತಿರುವಂತೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ ಎಂದು ಮಾರ್ಮಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಯೋಧರಾದ ದುರ್ಗಪ್ಪ ನಾಯಕ,ಅಮರಪ್ಪ ಸಿದ್ರಾ,ದೇವೇಂದ್ರ ಮರ್ಸ್,ರಮೇಶ್ ಮಾನು,ಮಲ್ಲಿನಾಥ್ ಮರ್ಸ,ವೀರಯೋಧ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿದರೆ,ನಾಡಿನ ಸಾಧಕರಾದ ಬಸಮ್ಮ ಕಲ್ಯಾಣಕರ್,ದೇವೇಂದ್ರ ನಾಟೇಕರ್ ಮಹಾದೇವಿ ಹಿರೇಮಠ್,ಮಾನಪ್ಪ  ವಿಶ್ವಕರ್ಮ ಸೇರಿದಂತೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು,
ಸಮಾರಂಭದ ಅಧ್ಯಕ್ಷತೆಯನ್ನು ಕೃತಿಯ ಲೇಖಕರಾದ ಡಾ. ದೇವೇಂದ್ರಪ್ಪ ಹಡಪದ ವಹಿಸಿಕೊಂಡಿದ್ದರು,ವೇದಿಕೆಯ ಮೇಲೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ: ರವೀಂದ್ರನಾಥ್ ಹೊಸಮನಿ ಸಾಮಾಜಿಕ ಹೋರಾಟಗಾರರಾದ ಮಾನಪ್ಪ ಸಿ,ಹಡಪದ ಹಾಗೂ ಇನ್ನಿತರರು ಉಪಸ್ಥಿತರಿದ್ದರು,ಹಿರಿಯ ಸಾಹಿತಿಗಳಾದ ಶಿವಣ್ಣ ಇಜೇರಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು,ನಂತರ ಜರುಗಿದ ಕವಿಗೋಷ್ಠಿಯಲ್ಲಿ ಸುಮಾರು 30 ಕ್ಕೂ ಹೆಚ್ಚು ಯುವಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿದರು ಬಸವರಾಜ್ ಶಿಣ್ಣೂರು ಪ್ರಾಸ್ತಾವಿಕ ನುಡಿಗಳಾಡಿದರು ಮಡಿವಾಳಪ್ಪ ಪಾಟೀಲ ಕಾರ್ಯಕ್ರಮ ನಿರೂಪಿಸಿದರು,ಚಂದ್ರಕಲಾ  ಕಲಬುರ್ಗಿ ಪ್ರಾರ್ಥಿಸಿದರು,ಸೌಮ್ಯಾ ದೇಸಾಯಿ ಸ್ವಾಗತಿಸಿದರು, ಎಂ.ಡಿ.ಮುಕ್ರಂ ವಂದಿಸಿದರು,

About The Author