ರಮೇಶ ಚಕ್ರವರ್ತಿಗೆ ನಿಗಮ ಅಧ್ಯಕ್ಷ ಸ್ಥಾನ ನೀಡಲು ಶಿವಪ್ಪ ಪೊಲೀಸ್ ಆಲ್ದರ್ತಿ ಒತ್ತಾಯ

ದೇವದುರ್ಗ : ಜಾಂಬವ ಯುವ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಎಸ್ ಎಂ ರಮೇಶ ಚಕ್ರವರ್ತಿ ಅವರಿಗೆ ఆది ಜಾಂಬವ ಅಭಿವೃದ್ಧಿ ನಿಗಮ ಅಥವಾ ಡಾ. ಬಾಬು ಜಗಜೀವನ್‌ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ದಲಿತ ಸಂಘಟನೆ ದೇವದುರ್ಗ ತಾಲೂಕು ಉಪಾಧ್ಯಕ್ಷ ಶಿವಪ್ಪ ಪೊಲೀಸ್ ಆಲ್ದರ್ತಿ ಸರ್ಕಾರಕ್ಕೆ ಒತ್ತಾಯಿಸಿದರು.

ನಂತರ ಸುದ್ದಿಗಾರರೊಂದಿಗೆ ದೇವದುರ್ಗ ತಾಲೂಕು ಉಪಾಧ್ಯಕ್ಷ ಶಿವಪ್ಪ ಪೊಲೀಸ್ ಆಲ್ದರ್ತಿ ಮಾತನಾಡಿ ರಾಜ್ಯದ ಪ್ರತಿ ಮೂಲೆಯಲ್ಲಿರುವ ದಲಿತ ಸಮುದಾಯಕ್ಕೆ ಅನ್ಯಾಯ ಆಗಿರುವುದ್ದಕ್ಕೆ ಸಾಕಷ್ಟು ಹೋರಾಟ ಮಾಡಿ ನ್ಯಾಯ ಒದಗಿಸಿ ಕೊಟ್ಟು, ಸರ್ಕಾರದ ಸೌಲಭ್ಯಗಳನ್ನು ಸಿಗುವಂತೆ ಮಾಡಿರುವ ಹಾಗೂ ಇಂತಹ ಸಮಾಜಿಕ ಕಳಕಳಿ ಇರುವ, ದಲಿತರ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಎಸ್ ಎಂ ರಮೇಶ ಚಕ್ರವರ್ತಿ ಅವರಿಗೆ ఆది ಜಾಂಬವ ಅಭಿವೃದ್ಧಿ ನಿಗಮ ಅಥವಾ ಡಾ. ಬಾಬು ಜಗಜೀವನ್‌ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ದಲಿತ ಸಂಘಟನೆ ದೇವದುರ್ಗ ತಾಲೂಕು ಉಪಾಧ್ಯಕ್ಷ ಶಿವಪ್ಪ ಪೊಲೀಸ್ ಆಲ್ದರ್ತಿ ಅವರು ಆಗ್ರಹಿಸುತ್ತೇವೆ.