ಕ್ರೀಡೆಯಿಂದ ಆರೋಗ್ಯ ವೃದ್ಧಿ ಶರಣಪ್ಪ ಪಾಟೀಲ 

ವಡಗೇರಾ : ತಾಲೂಕಿನ ಬೆಂಡೆಬೆಂಬಳಿಯಲ್ಲಿ 2023-24 ನೇ ಸಾಲಿನ  ವಡಗೇರಾ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ಸರ್ಕಾರಿ ಪ್ರೌಢಶಾಲೆ ಬೆಂಡೆಬೆಂಬಳಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು  ಶಹಾಪುರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶರಣಪ್ಪ ಪಾಟೀಲ ಉದ್ಘಾಟಿಸಿ ಮಾತನಾಡಿದರು.
        ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಸದೃಢ ಆರೋಗ್ಯಕ್ಕೆ ದೈಹಿಕ ಕ್ರೀಡೆ ಅತಿ ಮುಖ್ಯ. ಪ್ರತಿಯೊಬ್ಬರೂ ಕೂಡ  ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಯಲ್ಲಿ ಗ್ರಾಮೀಣ ಭಾಗದ ಯುವ ಪ್ರತಿಭೆಗಳ ಪಾತ್ರ ಮುಖ್ಯ.ನಮ್ಮ ರಾಜ್ಯ ದೇಶದ ಕೀರ್ತಿ ತಂದಿದ್ದಾರೆ ಎಂದರು.
        ಬೆಂಡೆಬೆಂಬಳಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ  ಮೊಹಮ್ಮದ್ ರಫೀ  ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಸಂಗಾರೆಡ್ಡಿ ಗೌಡ ಬೂದೆಣ್ಣಗೌಡ ಬೆಳಿಕಟ್ಟಿ ರಘುನಾಥ್ ರೆಡ್ಡಿ ಸೂಗರೆಡ್ಡಿ ಬಿಜೆಪಿ ಯುವ ಮುಖಂಡ ಪರ್ವತರೆಡ್ಡಿಗೌಡ ಮಲ್ಹಾರ ಅನಿಲ್ ಸ್ವಾಮಿ ಕೊಡಲಾ ಬಸನಗೌಡ ಬೆಳಿಕಟ್ಟಿ ಮಲ್ಲಿಕಾರ್ಜುನ್ ಪಾಟೀಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಹನುಮಂತಪ್ಪ ಸಾಗರ ಚಂದ್ರಶೇಖರ್ ವೈದ್ಯ ಷರೀಫ್ ಕೊಡಾಲ ಸಾಹೇಬ್ ರೆಡ್ಡಿ ಇಟಗಿ ಜಗದೀಶ ಮಹಾದೇವಪ್ಪ ಗೌಡ ಜಟ್ಟೆಪ್ಪ ಪೂಜಾರಿ ಕುಮಾರ ಚಾಮರಾಜನಗರ ವಾಸಿಮ್ ವರಕೂರ ಫೆಡ್ರಿಕ್ ಸ್ಮಿತ್ ಹಫಿಜ್ ಪಾಶಾ ಸಮಗಂಗಾ ಪಾರ್ವತಿ ಸಿದ್ದರಾಮಪ್ಪ ದಯಾನಂದ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಮತ್ತು ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕರಾದ ಪರ್ವತರೆಡ್ಡಿ ಬೆಳ್ಳಿಕಟ್ಟಿ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *