ತುಮಕೂರಿನಲ್ಲಿ ಜೆಜೆಎಂ ಕಾಮಗಾರಿ ಕಳಪೆ ಕ್ರಮಕ್ಕೆ ಆಗ್ರಹ

ವಡಗೇರಾ : ತಾಲೂಕಿನ ಹಿರೇತುಮಕೂರು ಗ್ರಾಮದಲ್ಲಿ ಜೆಜೆಎಮ್  ಕಾಮಗಾರಿ ಕಳಪೆಯಿಂದ ಕೂಡಿದ್ದು ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲು ಅಂಬೇಡ್ಕರ್ ಮೂಲ ನಿವಾಸಿ  ಸಂಘಟನೆಯ ವಡಗೇರಾ ತಾಲೂಕು ಅಧ್ಯಕ್ಷ ಪರಶುರಾಮ ಛಲವಾದಿ ಆಗ್ರಹಿಸಿದರು. ಸಂಬಂಧ ಪಟ್ಟ ಗುತ್ತಿಗೆದಾರರ ವಿರುದ್ಧ  ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಒಂದು ಕೋಟಿ ಆರವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಕಾಮಗಾರಿ ಅಧಿಕಾರಿಗಳ ಗುತ್ತಿಗೆದಾರರ ನಿರ್ಲಕ್ಷದಿಂದ ಬೇಕಾಬಿಟ್ಟಿಯಾಗಿ  ನಿರ್ವಹಿಸಿದ್ದಾರೆ.
                   ವಾಹನಗಳು ಮತ್ತು ಎತ್ತಿನ ಬಂಡಿಗಳು  ಗಾಡಿಗಳು ಓಡಾಡಿದರೆ ಹೊಡೆದು ಹೋಗುತ್ತವೆ. ಸರಕಾರದ ನಿಯಮಗಳನ್ನು ಗಾಳಿಗೆ ತೂರಿ  ಕಾಮಗಾರಿಯನ್ನು ಬೇಕಾಬಿಟ್ಟಿಯಾಗಿ ಗೊಳಿಸಿದ್ದಾರೆ. ಚರಂಡಿ ನೀರಿನಲ್ಲಿ ಹಾಗೂ ತಿಪ್ಪೆ ಗುಂಡಿಗಳಲ್ಲಿಯೂ ಕೂಡ ಪೈಪುಗಳನ್ನು ಮೇಲ್ಭಾಗದಲ್ಲಿ ಅಳವಡಿಸಿದ್ದಾರೆ.ಒಂದು ವೇಳೆ ಕಲುಷಿತ ನೀರು ಜಮಾಗೊಂಡು ನೀರಿಗೆ ಸೇರ್ಪಡೆಗೊಂಡಿದೆ ಸಾರ್ಆವಜನಿಕರರು ಆ ನೀರಿನ್ನು ಬಳಸುವುದರಿಂದ ಜನರಿಗೆ ಸಾಂಕ್ರಾಮಿಕ ಕಾಯಿಲೆಗಳು ಬರುತ್ತವೆ.ಸರಕಾರ ಜನರ ಅನುಕೂಲಕ್ಕಾಗಿ ಅಪಾರ ಹಣವನ್ನು ವೆಚ್ಚ ಮಾಡಿ ಜನರಿಗೆ ದಿನದ 24 ಗಂಟೆಗಳ ಕಾಲ ನೀರು ಒದಗಿಸುವ ಜೆಜೆಎಂ ಯೋಜನೆಯನ್ನು ಜಾರಿಗೆ ತಂದಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷದಿಂದ ಕಾಮಗಾರಿ ಹಳ್ಳ ಹಿಡಿದಂತಾಗಿದೆ..ಕೂಡಲೆ ಗುತ್ತಿಗೆದಾರರ ಮತ್ತು  ಪಟ್ಟು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕುಮಾರ ತೇಳಗೆರಿ ಸೈದಪ್ಪ ಹಾದಿಮನಿ ಅಮರೇಶ್ ಜುಲ್ಪಿ ಮರೇಪ್ಪ ಮ್ಯಾಗೇರಿ ಶಾಂತಪ್ಪ ಮ್ಯಾಗೇರಿ ರಂಗಪ್ಪ ಮೂರ್ತೆಪ್ಪ ತಿಮ್ಮಪ್ಪ ಹಾಗೂ ಗ್ರಾಮಸ್ಥರು  ಒತ್ತಾಯಿಸಿದ್ದಾರೆ.

About The Author