ಹೈಯಾಳದಲ್ಲಿ ಹಾಲುಮತ ಧರ್ಮ ಪ್ರಚಾರಕ್ಕೆ ಚಾಲನೆ

ವಡಗೇರಾ : ಶ್ರಾವಣ ಮಾಸದ ಅಂಗವಾಗಿ ಎಂಟು ಜಿಲ್ಲೆಯನ್ನೊಳಗೊಂಡ  ತಿಂತಣಿ ಬ್ರಿಡ್ಜ್ ನ ಕನಕ ಗುರುಪೀಠ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಕನಕ ಜ್ಯೋತಿ ರಥಯಾತ್ರೆ ಹಾಗೂ ಹಾಲುಮತ ಧರ್ಮ ಪ್ರಚಾರ ಕಾರ್ಯಕ್ರಮವನ್ನು ತಾಲೂಕಿನ ಹೈಯಾಳ ಬಿ ಗ್ರಾಮದ  ಹಯ್ಯಾಳಲಿಂಗೇಶ್ವರ ದೇವಸ್ಥಾನದಿಂದ ಚಾಲನ ನೀಡಲಾಯಿತು.
           ಕನಕ ಗುರು ಪೀಠದ ಪೂಜ್ಯರಾದ ಬೀರಲಿಂಗ ದೇವರು ಮಾತನಾಡಿ, ಶ್ರಾವಣ ಮಾಸವು ಅತಿ ಪವಿತ್ರ ಮಾಸವಾಗಿದ್ದು, ಪ್ರತಿಯೊಬ್ಬರು ದುಶ್ಚಟಗಳಿಂದ ದೂರವಿದ್ದು, ಮಾಂಸಹಾರ ತ್ಯಜಿಸುವಂತೆ ಹೇಳಿದರು. ಸಮಾಜದ ಬಂಧುಗಳು ಮೂಢನಂಬಿಕೆಗೆ ಒಳಗಾಗದೆ ದುಂದು ವೆಚ್ಚ ಮಾಡದೆ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ.ಮಕ್ಕಳಿಗೆ ಸಂಸ್ಕಾರ ಸಂಸ್ಕೃತಿಯನ್ನು ಕಲಿಸಿ.
        ಭಂಡಾರ ಕಂಬಳಿಗೆ ತನ್ನದೇ ಆದ ಮಹತ್ವ ಇದೆ. ಅವುಗಳಿಗೆ ಪ್ರತಿಯೊಬ್ಬರು ಗೌರವಿಸಬೇಕು. ನಮ್ಮ ಪೂರ್ವಜರು ಆಗಿನ ಕಾಲದಲ್ಲಿ ಕಂಬಳಿ ಬೀಸಿ ಮಳೆಯನ್ನು ತಂದಿದ್ದಾರೆ. ಕಂಬಳಿ,  ಭಂಡಾರ ಅತಿ ಶ್ರೇಷ್ಠವಾಗಿವೆ.  ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಕಂಬಳಿಯನ್ನು ಇಡಬೇಕು ಪೂಜಿಸಬೇಕು. ಪ್ರತಿಯೊಬ್ಬರು ದಿನನಿತ್ಯ ಪೂಜೆ ಸಲ್ಲಿಸಿದ ನಂತರ ಭಂಡಾರವನ್ನು ಧರಿಸುವಂತೆ ಹೇಳಿದರು.
          ಬಸಯ್ಯ ತಾತ ದೇವಸ್ಥಾನದ ಪೀಠಾದಿಪತಿಗಳಾದ ಲಿಂಗಣ್ಣ ತಾತ ಗೊಂದೆನೂರ, ಕುರುಬ ಸಮಾಜದ ಹಿರಿಯ ಮುಖಂಡರಾದ ಸಿದ್ದಣಗೌಡ ಕಾಡಮ್ಮನೂರ,ಕುರುಬ ಸಮಾಜದ ಯಾದಗಿರಿ ಜಿಲ್ಲಾಧ್ಯಕ್ಷರಾದ ಮಲ್ಲಣ್ಣ ಐಕೂರ, ವಡಗೇರಾ ತಾಲೂಕು ಅಧ್ಯಕ್ಷರಾದ ಸಾಯಿಬಣ್ಣ ಗೊಂದೆನೂರ, ಹೇಮಣ್ಣ ಪೂಜಾರಿ,ಚಂದಪ್ಪ ಪೂಜಾರಿ,ಮಾಜಿ ಮೌನೇಶ್ ಪೂಜಾರಿ, ಶಿವು ಪೂಜಾರಿ ಪದ್ಮಣ್ಣೂರ, ಕಾಮಣ್ಣ ನಾಗರಾಳ,ಶಿವರಾಜ ಹಾಲಗೇರಾ, ಹೈಯಾಳಪ್ಪ ಶಹಾಪೂರ,ಮುಖೇಶ್ ಕಟಿಕಾರ, ನಾಗರಾಜ ಕೊಂಡಾಪುರ,ಅಪ್ಪಣ್ಣ ಪೂಜಾರಿ, ನಿಂಗಣ್ಣ ಪೂಜಾರಿ,ಅಯ್ಯಪ್ಪ ಯಡಿಯಾಪುರ, ನಿಂಗಪ್ಪ ಪದ್ಮಣ್ಣೋರ ಇನ್ನಿತರ ಉಪಸ್ಥಿತರಿದ್ದರು.

About The Author