ತಾಲೂಕು ಕೆಡಿಪಿ ಸಭೆ :  ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು : ಸಚಿವ ಶರಣಬಸಪ್ಪಗೌಡ ದರ್ಶನಾಪುರ 

ಶಹಾಪುರ : ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪುವಂತಾಗಬೇಕು. ಅಂದಾಗ ಮಾತ್ರ ಅಧಿಕಾರಿಗಳ ಮತ್ತು ಸರ್ಕಾರದ ಹೆಸರು ಬರಲು ಸಾಧ್ಯ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವರಾದ ಶರಣಬಸಪ್ಪ ಗೌಡ ದರ್ಶನಪುರ ಅಧಿಕಾರಿಗಳಿಗೆ ಸೂಚಿಸಿದರು.
****
ಇಂದು ನಗರದ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ  ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಅತಿ ಮುಖ್ಯವಾಗಿ ಕೃಷಿ, ಆಹಾರ,
ಕೆಎಸ್ಆರ್ಟಿಸಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಇಲಾಖೆಗಳು ಮಹತ್ವದ್ದಾಗಿವೆ.
****
 ಸಾರ್ವಜನಿಕ ಸಮಸ್ಯೆಗಳು ಅಧಿಕಾರೀಗಳಲ್ಲಿ ಇತ್ಯರ್ಥವಾದರೆ ನಮ್ಮಲ್ಲಿ ಬರುವವರ ಸಂಖ್ಯೆ ಕಡಿಮೆಯಾಗುತ್ತದೆ.ನಗರಸಭೆ ಕಂದಾಯ ಇಲಾಖೆ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಜನರ ಕಾರ್ಯಗಳನ್ನು  ಬೇಗನೆ ವಿಲೇವಾರಿ ಮಾಡಿ ಕೊಡಬೇಕು ಅಂದಾಗ ಮಾತ್ರ ಸರಕಾರದ ಹೆಸರು ಬರಲು ಸಾಧ್ಯ ಎಂದು ಹೇಳಿದರು.
****
ಶಾಲಾ ಕೊಠಡಿಗಳ ನಿರ್ಮಾಣ, ಗ್ರಾಮೀಣ ಪ್ರದೇಶಗಳಲ್ಲಿನ ಸಿಸಿ ರಸ್ತೆ ಚರಂಡಿ ವ್ಯವಸ್ಥೆ,
ಅಂಗನವಾಡಿ ಕೇಂದ್ರಗಳನ್ನು ಆದಷ್ಟು ಬೇಗ ಕಾರ್ಯ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು. ಶಾಲಾ ಕೊಠಡಿಗಳ ಕೊರತೆ ಇತರ ತಾಲೂಕು ಇಲಾಖಾ  ಕಚೇರಿಗಳ ಕೊರತೆ ಇದ್ದರೆ ತಾಲೂಕು ತಹಸಿಲ್ದಾರರ ಜೊತೆ ಚರ್ಚಿಸಿ ನನಗೆ ತಿಳಿಸಬೇಕು ಎಂದು ತಿಳಿಸಿದರು.
****
ಆಗಸ್ಟ್ 27 ರಂದು ಪ್ರತಿ ನಗರ ಮತ್ತು ಗ್ರಾಮ ಪಂಚಾಯಿತಿಯಲ್ಲಿ ಪ್ರತಿ ಕುಟುಂಬದ ಯಜಮಾನಿಗೆ ಎರಡು ಸಾವಿರ ರೂಪಾಯಿ ನೀಡುವ ಗ್ಯಾರಂಟಿ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಅಂದೆ ಹಣವನ್ನು ಅವರ ಬ್ಯಾಂಕ್ ಖಾತೆಗೆ ಬೀಳಲಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಶೇ.100 ರಷ್ಟು ಬಿಪಿಎಲ್ ಕಾರ್ಡ್ಗಳನ್ನು
 ಗುರುತಿಸಿಬೇಕು ಎಂದು ತಾಕೀತು ಮಾಡಿದರು.
****
ಕೆಡಿಪಿ ಸಭೆಯಲ್ಲಿ ಯಾದಗಿರಿ ಕ್ಷೇತ್ರದ ಶಾಸಕರಾದ ಚೆನ್ನರೆಡ್ಡಿ ತುನ್ನೂರು, ತಹಶೀಲ್ದಾರರಾದ ಉಮಾಕಾಂತ್ ಉಳ್ಳಿ ತಾಲೂಕು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸೋಮಶೇಖರ್ ಬಿರಾದರ್ ಭೀಮನಗೌಡ ಬಿರಾದರ್ ಕೃಷಿ ಅಧಿಕಾರಿ ಸುನೀಲಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಪಿಎಂಸಿ ಕಾರ್ಯದರ್ಶಿ ಆಸ್ಪತ್ರೆ ಸಹಾಯಕ ನಿರ್ದೇಶಕರಾದ ಷಣ್ಮುಖ ಗೊಂಗಡಿ  ಸೇರಿದಂತೆ ತಾಲೂಕಿನ ಎಲ್ಲಾ ಇಲಾಖಾವಾರು ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಇಲಾಖೆಯ ವಸತಿ ನಿಲಯಗಳಲ್ಲಿ ಸ್ವಚ್ಛತಾ ಇರದೆ ಇರುವುದು  ನನ್ನ ಗಮನಕ್ಕೆ ಬಂದಿದೆ. ತಾಲೂಕಿನಲ್ಲಿರುವ 12 ವಸತಿ ನಿಲಯಗಳಲ್ಲಿ ಒಂದು ವಾರದೊಳಗೆ ಮಕ್ಕಳಿಗೆ ಒಳ್ಳೆಯ ಆಹಾರದ ಜೊತೆಗೆ ವಸತಿ ನಿಲಯದಲ್ಲಿ ಸ್ವಚ್ಛತೆ ಇರಬೇಕು. ಇಲ್ಲದಿದ್ದರೆ ತಾಲೂಕು ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ನಿಮ್ಮ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು.
ಕೆಡಿಪಿ ಸಭೆಯಲ್ಲಿ ಯಾದಗಿರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಏಳು ಪಂಚಾಯತಿಗಳ ವಿವರಗಳನ್ನು ಅಧಿಕಾರಿಗಳು ಸರಿಯಾಗಿ ನೀಡದ ಕಾರಣ ಯಾದಗಿರಿ ಶಾಸಕರಾದ ಚೆನ್ನಾರೆಡ್ಡಿ ತುನ್ನೂರು ಸಭೆಯ ಅರ್ಧದಲ್ಲಿಯೇ ಹೊರ ನಡೆದರು.
ಕೆಡಿಪಿ ಸಭೆಯ ಮುಖ್ಯಾಂಶಗಳು 
* ತಾಲೂಕಿನಲ್ಲಿ 197 ಶಾಲಾ ಕೊಠಡಿಗಳು ಬೀಳುವ ಹಂತದಲ್ಲಿದೆ.274 ಕೊಠಡಿಗಳು ದುರಸ್ತಿಯಾಗಬೇಕಿದೆ. ಬಿ ಗುಡಿಯಲ್ಲಿನ 20 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸಚಿವರ ಸೂಚನೆ.
* 2022 –23ನೇ ಸಾಲಿನಲ್ಲಿ 73000 ಹೆಕ್ಟೇರ್, ಬಿತ್ತನೆ, 15500 ತೊಗರಿ ಬಿತ್ತನೆ, 32000 ಹೆಕ್ಟರ್ ಹತ್ತಿ ಬಿತ್ತನೆ,3000 ಹೆಕ್ಟರ್ ಚಿಲ್ಲಿ ಬಿತ್ತನೆ ಯಾಗಬಹುದು, 15,000 ಭಕ್ತ ಬಿತ್ತನೆ ಆಗಬಹುದು.
* ತಾಲೂಕಿನಲ್ಲಿ ಈಗಾಗಲೇ ಶೇ. 90ರಷ್ಟು ಜಾನುವಾರುಗಳಿಗೆ ಲಸಿಕೆ ಹಾಕಿಸಲಾಗಿದೆ.
* ತಾಲೂಕಿನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿ ಮಾಡಿ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಲು ಅಧಿಕಾರಿಗಳಿಗೆ ಸೂಚನೆ.
* ಸರ್ಕಾರಿ ಶಾಲಾ ಕೊಠಡಿಗಳಲ್ಲಿ,
 ಪಂಚಾಯಿತಿಯ ಆವರಣಗಳಲ್ಲಿ, ಸರ್ಕಾರ ಶಾಲಾ ಮೈದಾನಗಳಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಗಿಡಗಳನ್ನು ನೆಡುವುದರಿಂದ ಸುರಕ್ಷಿತವಾಗಿರಿಸಬಹುದು.
* ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಯಲ್ಲಿ ಆನೆಕಲ್ಲು ಮಳೆಯಿಂದ 699 ಎಕರೆ ಬೆಳೆ ಹಾನಿ ಉಂಟಾಗಿದ್ದು, ಅಂತಹ ರೈತರಿಗೆ ಅವರ ಖಾತೆಗೆ ನೇರವಾಗಿ  ಪರಿಹಾರ ಧನ ನೀಡಲಾಗಿದೆ. 195 ಮನೆಗಳು ಕುಸಿತ ಕಂಡಿದ್ದು 175 ಮನೆಗಳಿಗೆ ಪರಿಹಾರ ಧನ ವಿತರಿಸಲಾಗಿದೆ ಎಂದು ತಹಶೀಲ್ದಾರರು ತಿಳಿಸಿದರು.

About The Author