ಮಹಾಶೈವ ಧರ್ಮಪೀಠ ವಾರ್ತೆ : ಫಲಿಸಿತು ವಿಶ್ವೇಶ್ವರ ಶಿವನ ಅನುಗ್ರಹ; ಗಂಡು ಮಗುವಿನ ತಂದೆಯಾದ  ಗಂಗಪ್ಪ ಹಿಂದುಪುರ

ಗಬ್ಬೂರು : ಜಗದೋದ್ಧಾರದ ಸಂಕಲ್ಪದಿಂದ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಲೀಲೆಯನ್ನಾಡುತ್ತಿರುವ ವಿಶ್ವೇಶ್ವರ ಶಿವನು ಅನುದಿನವೂ ತನ್ನ ಭಕ್ತೋದ್ಧಾರದ ಮಹಿಮೆ ಮೆರೆಯುತ್ತಿದ್ದಾನೆ.ಒಂದು ವರ್ಷದ ಹಿಂದೆ ಮಹಾಶೈವ ಧರ್ಮಪೀಠದಲ್ಲಿ ಆರಂಭಗೊಂಡ ‘ ಶಿವೋಪಶಮನ ಕಾರ್ಯ’ ದಲ್ಲಿ ಸಂತಾನಾಪೇಕ್ಷಗಳಾಗಿ ಬಂದು ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರಿಂದ ಶಿವಾಭಯ ಪಡೆದ ದಂಪತಿಗಳನೇಕರುಗಳು ಸಂತಾನಪಡೆದು ಹರ್ಷಿತರಾಗಿ ಮಹಾಶೈವ ಧರ್ಮಪೀಠಕ್ಕೆ ಸಂತಸದ ಸಿಹಿಸುದ್ದಿಯನ್ನು ಕಳುಸುತ್ತಿದ್ದಾರೆ.ಅಂತಹದೆ ಒಂದು ಸಂತಸದ ಸಿಹಿಸುದ್ದಿಯನ್ನು ಕಳಿಸಿದ್ದಾರೆ ಇಂದು ಮಸೀದಪುರದ ಭಕ್ತ ಗಂಗಪ್ಪ ಹಿಂದುಪುರ.
       ಮದುವೆಯಾಗಿ ಐದುವರ್ಷಗಳಾಗಿ ಮಕ್ಕಳಾಗದೆ ಅಲ್ಲಲ್ಲಿ ತೋರಿಸಿಕೊಂಡು ಇಷ್ಟಾರ್ಥವು ಫಲಿಸದೆ ಕೊರಗಿನಲ್ಲಿದ್ದ ಗಂಗಪ್ಪ ಹಿಂದುಪುರ ಮಹಾಶೈವ ಧರ್ಮಪೀಠದ‌ ಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ ಮತ್ತು ಈರಪ್ಪ ಹಿಂದುಪುರ ಅವರಿಬ್ಬರ ಸಲಹೆಯಂತೆ ಮಹಾಶೈವ ಧರ್ಮಪೀಠದಲ್ಲಿ ಪ್ರತಿ ರವಿವಾರ ನಡೆಯುತ್ತಿರುವ ಶಿವೋಪಶಮನಕ್ಕೆ ಒಂದೆರಡು ಸಾರಿ ಬಂದು ಸಂತಾನಾಪೇಕ್ಷೆಯನ್ನು ವ್ಯಕ್ತಪಡಿಸಿದ್ದರು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಈ ದಂಪತಿಗಳಿಗೆ ವಿಳಂಬಸಂತಾನವೆಂದರಿತು ಮುರ್ನಾಲ್ಕು ಶಿವೋಪಶಮನಗಳ ನಂತರ ಗಂಗಪ್ಪ ರಾಜೇಶ್ವರಿ ಹಿಂದುಪುರ ದಂಪತಿಗಳಿಗೆ   09.10.2022   ರಂದು ‌‌‌‌‌‌ಶಿವಾನುಗ್ರಹ ಕರುಣಿಸಿದ್ದರು.
        ಇಂದು ಬೆಳಿಗ್ಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದಾರೆ ಶ್ರೀಮತಿ ರಾಜೇಶ್ವರಿ ಗಂಗಪ್ಪ ಹಿಂದುಪುರ.ಇನ್ನೂ ಹತ್ತಾರು ಜನ ಭಕ್ತಮಹಿಳೆಯರು ತಾವು ಗರ್ಭಿಣಿಯರಾಗಿರುವುದಾಗಿಯೂ ಐದು ತಿಂಗಳು,ಆರು ತಿಂಗಳು,ಏಳು ತಿಂಗಳ ಗರ್ಭವತಿಯರು ಎನ್ನುವ ಸಂಗತಿಯನ್ನು ಮಹಾಶೈವ ಧರ್ಮಪೀಠಕ್ಕೆ ದೂರವಾಣಿಯ ಮೂಲಕ ತಿಳಿಸುತ್ತಿದ್ದಾರೆ.

About The Author