ಹಿಂದುಳಿದ ವರ್ಗಗಳ ನಾಯಕ ಅಯ್ಯಪ್ಪಗೌಡ ಗಬ್ಬೂರಿಗೆ ಕುರಿ ಮತ್ತು ಉಣ್ಣೆ ನಿಗಮ ಮಂಡಳಿ ಅಧ್ಯಕ್ಷ ಕೊಡಿ ಶಂಕರ್ ಘೊ.ವಡ್ರೆಯವರಿಂದ ಸರಕಾರಕ್ಕೆ ಒತ್ತಾಯ

 

ಬೆಂಗಳೂರು: ನಿರಂತರವಾಗಿ ಕುರಿಗಾರರು ಹೋರಾಟಗಳಲ್ಲಿ ಭಾಗಿಯಾಗಿ ಜನರ ಪ್ರೀತಿಗೆ ಪಾತ್ರರಾಗಿರುವ ಯುವಕರ ಕಣ್ಮಣಿ,ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಉಪಾಧ್ಯಕ್ಷರು ಕರ್ನಾಟಕ ಪ್ರದೇಶ ಕುರುಬರ ಸಂಘ ಯುವ ಘಟಕ ಕನಕದಾಸ ವೃತ್ತ ಗಾಂಧಿನಗರ ಬೆಂಗಳೂರು ರವರೆಗೆ ಕಾಂಗ್ರೆಸ್ ಪಕ್ಷದಲ್ಲಿ ಹಾಗೂ ಕುರುಬ ಸಮುದಾಯದ ನಿರಂತರ ಹೋರಾಟದಲ್ಲಿ ಭಾಗಿಯಾಗಿ ಜನ ಸೇವೆ ಮಾಡುತ್ತಿರುವ ಅಯ್ಯಪ್ಪಗೌಡ ಗಬ್ಬೂರು ಅವರನ್ನು ಬೆಂಗಳೂರು ಕರ್ನಾಟಕ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕೆಂದು ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರಲ್ಲಿ ಶಂಕರ್ ಘೊ.ವಡ್ರೆ ಸೇವಕರು  ಮನವಿ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷದ ಕಾರ್ಯಕರ್ತರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದು ರಾಜ್ಯ ಮಟ್ಟದಲ್ಲಿ ಮೇಕೆದಾಟು,ಭಾರತ್ ಜೋಡೋ ಯಾತ್ರೆಗಳಲ್ಲಿ ಪ್ರಾರಂಭದಿಂದ
ಮುಕ್ತಾಯವಾಗುವವರೆಗೂ ಸಕ್ರಿಯವಾಗಿ ಪಾಲ್ಗೊಂಡು ಹಿರಿಯರ ಮಾರ್ಗದರ್ಶನದಲ್ಲಿ ವಹಿಸಿದ ರಾಜ್ಯದಾದ್ಯಂತ ಜನರು ಮಧ್ಯೆ ಸದಾಕಾಲ ಸಹಾಯ ಸಹಕಾರದೊಂದಿಗೆ ರಾಜ್ಯದಲ್ಲಿ ಗ್ರಾಮೀಣ ಭಾಗದಲ್ಲೂ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಯುವಕರಿಗೆ ಸ್ಥಾನ ನೀಡಿದರೆ ಪಕ್ಷಕ್ಕೆ ಸಹಕಾರ ಆಗಲಿದೆ ಹೀಗಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳು ಡಿ.ಕೆ.ಶಿವಕುಮಾರ್ ಅವರು ಪಕ್ಷಕ್ಕಾಗಿ ದುಡಿದ ಸೇವೆಯನ್ನು ಪರಿಗಣಿಸಿ ಅಯ್ಯಪ್ಪಗೌಡ ಗಬ್ಬೂರು ಅವರಿಗೆ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ಸ್ಥಾನಮಾನ ಕಲ್ಪಿಸಬೇಕೆಂದು ಸಿಎಂ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದರು.

About The Author