ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಪದಾಧಿಕಾರಿಗಳ ಆಯ್ಕೆ

ಕೊಪ್ಪಳ : ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ವತಿಯಿಂದ ಇಂದು ಕೊಪ್ಪಳ ಜಿಲ್ಲಾ ಮಹಿಳಾ ಅಧ್ಯಕ್ಷರನ್ನಾಗಿ ಕುಮಾರಿ ಶಿಲ್ಪಾ ಗುಡ್ಲಾನರು, ಉಪಾಧ್ಯಕ್ಷರಾಗಿ ಉಮಾಪತಿ ಹುಚ್ಚನಗೌಡ, ಕಾರ್ಯದರ್ಶಿಯಾಗಿ ಯಶೋಧ ಶಿವಶಂಕ್ರಪ್ಪ ಮರಡಿ,ಸಂಘಟನೆ ಕಾರ್ಯದರ್ಶಿಯಾಗಿ ಹನುಮಂತಮ್ಮ ಇದ್ದಿಲಗಿ,
 ಶಿಲ್ಪ ಶ್ರೀಶೈಲಪ್ಪ ಯತ್ನಟ್ಟಿ,ಸಹ ಕಾರ್ಯದರ್ಶಿಯಾಗಿ ರೂಪ ಬಂಗಾರಿ ಹಾಗೂ ಲಲಿತಾ ಆಂಜನೇಯ ಬಸಿರಾಳು,ಪದ್ಮಾವತಿ ಅಬ್ಬಿಗೇರಿ ದೇವರನ್ನು ಆಯ್ಕೆ ಮಾಡಿ ರಾಜ್ಯ ಮಹಿಳಾ ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾರಾಯಣರವರು ಆದೇಶ ಪತ್ರ ನೀಡಿದರು.
ಶ್ರೀಮತಿ ಮಂಜುಳಾರವರು ಮಾತನಾಡಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘಟನೆ  ಸಮುದಾಯಕ್ಕೆ ದಕ್ಕೆ ಬಂದಾಗೆಲ್ಲ ಹೋರಾಟ, ಪ್ರತಿಭಟನೆ, ಮುಷ್ಕರ ಮಾಡುತ್ತಾ ಬಂದಿದ್ದೇವೆ.ಹಾಗೆ ನಾನು ಈ ಮಟ್ಟಕ್ಕೆ ಸಮುದಾಯದಲ್ಲಿ ಬೇಳೆಯಬೇಕಾದರೆ ಅದಕ್ಕೆ ಕಾರಣ ನಮ್ಮ ಸಂಘಟನೆ ರಾಜ್ಯಾಧ್ಯಕ್ಷರಾದ ಬಿ. ಎಂ. ಪಾಟೀಲ್ ರವರು. ಈ ಕೂಡಲೇ ಸಮುದಾಯದ ಬಗ್ಗೆ ಕಾಳಜಿವಹಿಸಿ ಸಮುದಾಯಕ್ಕೆ ದುಡಿಯಬೇಕು.ಸಮುದಾಯದ ಏಳಿಗೆಗಾಗಿ ಒಳ್ಳೆಯ ಕಾರ್ಯಗಳನ್ನು ಮಾಡಿ ಎಂದು ಕರೆ ನೀಡಿದರು.ಕಾರ್ಯಕ್ರಮಕ್ಕೆ ಮುಂಚೆ ಕೊಪ್ಪಳ ನಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಿ ಆಶೀರ್ವಾದ ಪಡೆದರು.
 ಈ ಸಂದರ್ಭದಲ್ಲಿ ಹೇಮಾವತಿ ಶಿಕ್ಷಕರು ಗವಿಸಿದ್ದಪ್ಪ ಮರಿಡಿ, ಆಂಜಿನೇಯ, ಹುಚ್ಚನ ಗೌಡರ್, ಶ್ರೀಶೈಲ ಯತ್ನಾಟ್ಟಿ ಸೇರಿದಂತೆ ಇತರರು ಇದ್ದರು.