ಸರ್ಕಾರಿ ಇಲಾಖೆಗಳಲ್ಲಿ  ರಾಯಣ್ಣ ಪೋಟೋ ಕಡ್ಡಾಯ  ಶೀಘ್ರ ಆದೇಶ ಸಿಎಮ್ ಭರವಸೆ ಅಯ್ಯಪ್ಪಗೌಡ ಸಂತಸ

ಬೆಂಗಳೂರು :-  ಬಹು ದಿನಗಳ ಬೇಡಿಕೆ ಇದ್ದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣನ ಹೆಸರಿಡಲು ಕೇಂದ್ರ ಸರ್ಕಾರ ಜೊತೆ ಮಾತನಾಡಲು ನಿರ್ಧರಿಸಲಾಗಿದೆ ಹಾಗೂ ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ಸಂಗೊಳ್ಳಿ ರಾಯಣ್ಣ ಫೋಟೊ ಇಡಲು ಶೀಘ್ರವೆ ಆದೇಶಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ನಿರ್ಧರಿಸುವುದು ಸಂತಸ ತಂದಿದೆ ಎಂದು ಕೆಪಿಸಿಸಿ ರಾಜ್ಯ ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಅಯ್ಯಪ್ಪಗೌಡ ಗಬ್ಬೂರು ಮುಖ್ಯಮಂತ್ರಿಗಳಿಗೆ
ಕೃತಜ್ಞತೆ ಸಲ್ಲಿಸಿದ್ದಾರೆ.ರಾಜ್ಯದಲ್ಲಿ ಶಾಲೆ-ಕಾಲೇಜು ಸಂಘ-ಸಂಸ್ಥೆ ಸರ್ಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ ರಾಯಣ್ಣನ ಭಾವಚಿತ್ರ ಅಳವಡಿಸಬೇಕು. ಸರ್ಕಾರಕ್ಕೆ ಕರ್ನಾಟಕ ರಾಜ್ಯದ ಸಮಸ್ತ ಹಾಲುಮತ ಸಮುದಾಯದ ವತಿಯಿಂದ ಅಭಿನಂದನೆಗಳು ಎಂದು  ತಿಳಿಸಿದ್ದಾರೆ.

Leave a Reply

Your email address will not be published. Required fields are marked *