ಮಹಾಶೈವ ಧರ್ಮಪೀಠ ವಾರ್ತೆ : ಜಗದ ಅನ್ನದಾತ ವಿಶ್ವೇಶ್ವರ ಶಿವ ತಾತಪ್ಪನವರ ಬಾಳಿಗೆ ಆಶ್ರಯ ಕಲ್ಪಿಸಿದ

ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಅಗಸ್ಟ್ 13 ರ ರವಿವಾರದಂದು 57ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಬಂದಿದ್ದ ಭಕ್ತರುಗಳಿಗೆ ಶಿವಾನುಗ್ರಹವನ್ನು ಕರುಣಿಸದರು.

ಬಳ್ಳಾರಿ ಜಿಲ್ಲೆಯ ತಾತಪ್ಪ ಚಿಕ್ಕನಹಳ್ಳಿ ಅವರ ಬದುಕಿನಲ್ಲಿ ವಿಶ್ವೇಶ್ವರ ಶಿವನು ಪವಾಡ ಒಂದನ್ನು ಉಂಟು ಮಾಡಿದ್ದು ಈದಿನದ ಶಿವೋಪಶಮನದ ವಿಶೇಷವಾಗಿತ್ತು.ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಚಿಕ್ಕನಹಳ್ಳಿಯವರಾದ ತಾತಪ್ಪನವರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಾಜಲಬಂಡಾದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಶಿಕ್ಷಕರಾಗಿ 2007-2008 ರಿಂದ 2010 ರ ವರೆಗೆ ಸರ್ಕಾರೇತರ ಸಂಸ್ಥೆಯ ಮೂಲಕ ಸೇವೆ ಸಲ್ಲಿಸುತ್ತಿದ್ದರು.ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಆಡಳಿತವು ಕ್ರೈಸ್ಟ್ ಗೆ ವರ್ಗಾವಣೆಗೊಂಡಿದ್ದರಿಂದ ಕ್ರೈಸ್ಟ್ ಹೊಸನೇಮಕಾತಿಯ ಮೂಲಕ ಶಿಕ್ಷಕರುಗಳು ನೇಮಿಸಿಕೊಂಡಿದ್ದರಿಂದ ರಾಜ್ಯದಾದ್ಯಂತ ಎನ್ ಜಿ ಒ ಗಳ ಮೂಲಕ ನೇಮಕಗೊಂಡಿದ್ದ 10500 ಜನ ಶಿಕ್ಷಕರುಗಳು ಕೆಲಸ ಕಳೆದುಕೊಂಡಿದ್ದರು.ಈ ಶಿಕ್ಷಕರುಗಳು ಹೈಕೋರ್ಟ್,ಸುಪ್ರೀಂಕೋರ್ಟಿನ ಮೆಟ್ಟಲೇರಿ ಸರ್ಕಾರದ ಹಂತದಲ್ಲಿ ಹಿನ್ನೆಡೆ ಅನುಭವಿಸುತ್ತಿದ್ದರು.ತಾತಪ್ಪನವರು ವೈಯಕ್ತಿಕವಾಗಿ 2021ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.ಆದರೂ ಹೈಕೋರ್ಟಿನಲ್ಲಿ ಪ್ರಕರಣವು ಇದುವರೆಗೂ ಇತ್ಯರ್ಥವಾಗದೆ ಇದ್ದುದರಿಂದ ತಾತಪ್ಪನವರು ಸರಕಾರಿ ಸೇವೆಗೆ ಮರುನೇಮಕಗೊಳ್ಳುವ ಬಗ್ಗೆ ಭರವಸೆಯನ್ನೇ ಕಳೆದುಕೊಂಡಿದ್ದರು.ಈ ನಡುವೆ ತಾತಪ್ಪನವರು ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾಗಿರುವ ಶ್ರೀ ಮುಕ್ಕಣ್ಣ ಕರಿಗಾರ ಅವರ ಅಳಿಯ ಅಯ್ಯಾಳಪ್ಪನವರ ಜೊತೆ ಜುಲೈ 9 ರಂದು ನಡೆದಿದ್ದ 53 ನೆಯ ಶಿವೋಪಶಮನ ಕಾರ್ಯಕ್ಕೆ ಬಂದು ಪೀಠಾಧ್ಯಕ್ಷರಲ್ಲಿ ಮನವಿ ಮಾಡಿದ್ದರು.ತಾತಪ್ಪನವರ ಪರವಾಗಿ ಜಗದೊಡೆಯ ವಿಶ್ವೇಶ್ವರ ಶಿವನನ್ನು ಪ್ರಾರ್ಥಿಸಿದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ‘ ಇದು ಮನುಷ್ಯರಿಗೆ ಅಸಾಧ್ಯವಾದ ಕಾರ್ಯವಾದರೂ ಸರ್ವಶಕ್ತನಾದ ಶಿವ ವಿಶ್ವೇಶ್ವರನಿಗೆ ಅಸಾಧ್ಯವಾದ ಕಾರ್ಯವಲ್ಲ’ ಎಂದು ಶಿವಾಭಯವನ್ನು ಕರುಣಿಸಿ,ಆಶೀರ್ವದಿಸಿದ್ದರು.ಮೊನ್ನೆ ಅಗಸ್ಟ್ 11 ನೆಯ ತಾರೀಖಿನಂದು ಕಲ್ಬುರ್ಗಿ ಹೈಕೋರ್ಟ್ ತಾತಪ್ಪ ಚಿಕ್ಕನಹಳ್ಳಿ ಅವರ ಪರವಾಗಿ ಆದೇಶಿಸಿ ವರ್ಷಕ್ಕೆ ಪ್ರತಿಶತ ಐದರ ವೇಟೇಜ್ ನೀಡಿ ತಾತಪ್ಪನವರ ಸೇವೆಯನ್ನು ಸಕ್ರಮಗೊಳಿಸಬೇಕು ಎಂದು ಆದೇಶಿಸಿದೆ.ಬದುಕಿನಲ್ಲಿ ಸರಕಾರಿ ಸೇವೆಯ ಆಸೆಯನ್ನೇ ಕಳೆದುಕೊಂಡಿದ್ದ ತಾತಪ್ಪ ಚಿಕ್ಕನಹಳ್ಳಿಯವರಿಗೆ ಲೋಕಸಮಸ್ತರ ಆಶ್ರಯದಾತನಾದ ವಿಶ್ವೇಶ್ವರ ಶಿವನು ಆಶ್ರಯ ಕಲ್ಪಿಸಿದ್ದಾನೆ. ವಿಶ್ವೇಶ್ವರ ಶಿವನು ತನ್ನನ್ನು ನಂಬಿ ಬರುವ ಭಕ್ತರ ಹೊಣೆಯನ್ನು ತಾನೇ ಹೊತ್ತು ಭಕ್ತರುಗಳಿಗೆ ಸರ್ವವಿಧದ ಕಲ್ಯಾಣವನ್ನುಂಟು ಮಾಡುತ್ತಾನೆ ಎನ್ನುವುದಕ್ಕೆ ತಾತಪ್ಪ ಚಿಕ್ಕನಹಳ್ಳಿಯವರ ಪ್ರಕರಣವು ಉತ್ತಮ ನಿದರ್ಶನವಾಗಿದೆ.

ಮಹಾಶೈವ ಧರ್ಮಪೀಠದ ನಿಷ್ಠಾವಂತ ಭಕ್ತರಲ್ಲೊಬ್ಬರಾದ ಚೆನ್ನಪ್ಪಗೌಡ ಮಾಲೀಪಾಟೀಲರ ಪುತ್ರಿ ಐಶ್ವರ್ಯ ಅವರು ವಿಶ್ವೇಶ್ವರ ಶಿವನ ಅನುಗ್ರಹದಿಂದ ಅಗಸ್ಟ್ ಮೂರರಂದು ಗಂಡು ಮಗುವಿಗೆ ಜನ್ಮನೀಡಿದ್ದರು.ಆ ಸಂಭ್ರಮಕ್ಕಾಗಿ ಚೆನ್ನಪ್ಪಗೌಡರ ಅಳಿಯ ವಿಜಯಪುರದ ಬಸವರಾಜ ಸರ್ದೇಸಾಯಿ,ತಾಯಿ ಶೈಲಜಾ ಸರ್ದೇಸಾಯಿ ಮತ್ತು ಸಹೋದರಿ ಮಾಳವಿಕಾ ಸರ್ದೇಸಾಯಿಯರ ಸಮೇತ ಆಗಮಿಸಿ ವಿಶ್ವೇಶ್ವರ ಶಿವನ ಪೂಜೆ ಸಲ್ಲಿಸಿದ್ದಲ್ಲದೆ ಇಂದಿನ ದಾಸೋಹಸೇವೆಯನ್ನು ನಿರ್ವಹಿಸಿ ಭಕ್ತರುಗಳಿಗೆ ಲಾಡಿನ ಸಿಹಿ ತಿನ್ನಿಸಿ,ಸಂಭ್ರಮಿಸಿದರು. ಚೆನ್ನಪ್ಪ ಗೌಡರ ಕೊರಗನ್ನು ನಿವಾರಿಸಲು ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು 18.09.2022 ರಂದು ಶಿವಾಭಯವನ್ನು ಕರುಣಿಸಿ,’ ಗಂಡು ಮಗುವಾಗುತ್ತದೆ,ಚಿಂತಿಸಬೇಡಿ’ ಎಂದು ಭರವಸೆ ನೀಡಿದ್ದರು.ಅದರಂತೆ ಶ್ರೀಮತಿ ಐಶ್ವರ್ಯ ಅವರು 03.08.2023 ರಂದು ರಾಯಚೂರಿನ ಚೇತನ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮನೀಡಿದ್ದು ವಿಶ್ವೇಶ್ವರ ಶಿವನ ಮಹಿಮೆ ವರ್ಣಿಸಲಸದಳ ಎನ್ನುವ ಮಾತಿಗೆ ಸಾಕ್ಷಿಯಾಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಬಸವರಾಜ ಸರ್ದೇಸಾಯಿಯವರನ್ನು ವಿಶ್ವೇಶ್ವರಾನುಗ್ರಹಪೂರ್ವಕವಾಗಿ ಸನ್ಮಾನಿಸಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪ್ರಮುಖರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಶಿವಯ್ಯಸ್ವಾಮಿ ಮಠಪತಿ,ಗುರುಬಸವ ಹುರಕಡ್ಲಿ,ಉಮೇಶ ಸಾಹುಕಾರ ಅರಷಣಗಿ,ಶರಣಗೌಡ ಹೊನ್ನಟಗಿ,ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರಾದ ಉದಯಕುಮಾರ ಪಂಚಾಳ,ಚೆನ್ನಪ್ಪಗೌಡ ಮಾಲಿಪಾಟೀಲ್,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ,ಮೃತ್ಯುಂಜಯ ಯಾದವ,ಯಲ್ಲಪ್ಪ ಕರಿಗಾರ ,ತಾತಪ್ಪ ಚಿಕ್ಕನಹಳ್ಳಿ ,ಸಿದ್ದಣ್ಣ ಪೂಜಾರಿ ಚಾಗಬಾವಿ,ಪತ್ರಕರ್ತ ಏಳುಬಾವೆಪ್ಪ ಗೌಡ,ಬಸವರಾಜ ಕರಿಗಾರ ಮತ್ತು ಮಹಾಶೈವ ಧರ್ಮಪೀಠದ ಪ್ರಸಾರ ವ್ಯವಸ್ಥಾಪಕ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

About The Author