ಸ್ಪಂದನಾ ವಿಜಯ್ ರಾಘವೇಂದ್ರ ನಿಧನ  ಅಯ್ಯಪ್ಪಗೌಡ ಗಬ್ಬೂರು ಸಂತಾಪ

ರಾಯಚೂರು : ಖ್ಯಾತ  ನಟ ವಿಜಯ ರಾಘವೇಂದ್ರ ಅವರ ಪತ್ನಿ  ಸ್ಪಂದನಾ  ಅವರ ನಿಧನಕ್ಕೆ ಕಾಂಗ್ರೆಸ್ ಮುಖಂಡರಾದ ಅಯ್ಯಪ್ಪಗೌಡ ಗಬ್ಬೂರು ಸಂತಾಪ ವ್ಯಕ್ತಪಡಿಸಿದ್ದಾರೆ. ಸ್ಪಂದನ ರವರು ಐಎಎಸ್ ನಿವೃತ್ತ ಅಧಿಕಾರಿಯಾದ ಬಿಕೆ.ಶಿವರಾಂ ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡರು.ಸ್ಪಂದನಾ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಇದು ಸಾಯುವ ವಯಸ್ಸಲ್ಲ. ಮನುಷ್ಯನ ಜೀವನ ಎಷ್ಟು ಅನಿಶ್ಚಿತ ಎಂಬುದಕ್ಕೆ ಈ ಅಗಲಿಕೆಯೇ ಸಾಕ್ಷಿ. ಕನ್ನಡದ ಕುವರ ಡಾ. ರಾಜಕುಮಾರ ಅವರ ಕುಟುಂಬದಲ್ಲಿ ಪದೇ ಪದೇ ಇದೇ ರೀತಿಯ ಸಾವುಗಳು ಸಂಭವಿಸುತ್ತಿರುವುದು ದುರದೃಷ್ಟಕರ.ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆ ನೋವು ಭರಿಸುವ ಶಕ್ತಿ ಅವರ ಕುಟುಂಬದ ಸದಸ್ಯರಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

Leave a Reply

Your email address will not be published. Required fields are marked *