ಮಹಾಶೈವ ಧರ್ಮಪೀಠ ವಾರ್ತೆ : ಮಹಾಶೈವ ಧರ್ಮಪೀಠದಲ್ಲಿ ‘ ಆನಂದವನ’ ಕ್ಕೆ ಚಾಲನೆ

ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಅಗಸ್ಟ್ 05 ರಂದು ೧೦೮ಗಿಡಗಳನ್ನು ಬೆಳೆಸುವ ‘ ಆನಂದವನ’ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಆಲದ ಸಸಿ ಒಂದನ್ನು ನೆಡುವ ಮೂಲಕ ‘ ಆನಂದವನ’ ನಿರ್ಮಾಣಕ್ಕೆ ಶುಭಾರಂಭ ಮಾಡಿದರು.

ಆಧ್ಯಾತ್ಮಿಕ ಸಾಧಕರು,ಯೋಗಸಾಧಕರುಗಳ ಸಾಧನೆಗೆ ಅನುಕೂಲವಾಗುವ ದೃಷ್ಟಿಯಲ್ಲಿ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ‘ ಆನಂದವನ’ ವನ್ನು ನಿರ್ಮಿಸಲಾಗುತ್ತಿದೆ.ಆಲ,ಅರಳೆ,ಬಿಲ್ವ,ಬಿದಿರು,ಶಮೀ ವೃಕ್ಷಗಳಂತಹ ಯೋಗಸಾಧನೆಗೆ ಪೂರಕವಾಗುವ ನೂರೆಂಟು ಗಿಡಗಳನ್ನು ಬೆಳೆಸಲಾಗುವುದು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ, ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರಾದ ಉದಯಕುಮಾರ ಪಂಚಾಳ,ಶಿವಯ್ಯಸ್ವಾಮಿ ಮಠಪತಿ,ಗೋಪಾಲ ಮಸೀದಪುರ,ಮಹಾಶೈವ ಧರ್ಮಪೀಠದ ಅರ್ಚಕ ದೇವರಾಜ ಕರಿಗಾರ,ಚಿತ್ರಕಲಾವಿದ ಶರಣಪ್ಪ ಬೂದಿನಾಳ, ಬಾಬುಗೌಡ ಯಾದವ ಸುಲ್ತಾನಪುರ,ಯಲ್ಲಪ್ಪ ಕರಿಗಾರ,ಶ್ರೀಶೈಲ ಕರಿಗಾರ, ಹನುಮೇಶ,ತಿಪ್ಪಯ್ಯ ಭೋವಿ ಮತ್ತು ಮಹಾಶೈವ ಧರ್ಮಪೀಠದ ಪ್ರಸಾರ ವ್ಯವಸ್ಥಾಪಕ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author