ಮಹಾಶೈವ ಧರ್ಮಪೀಠ ವಾರ್ತೆ : ವಿಶ್ವೇಶ್ವರ ಶಿವನ ಅನುಗ್ರಹ,ಚೆನ್ನಪ್ಪ ಗೌಡರಿಗೆ ಬಂದನು ಮೊಮ್ಮಗ !

ಶ್ರೀ ವಿಶ್ವೇಶ್ವರ ಶಿವ,  ಶ್ರೀ ವಿಶ್ವೇಶ್ವರಿ ಮಾತೆ

********

ಪೂಜ್ಯ ಶ್ರೀ ಮುಕ್ಕಣ್ಣ ಕರಿಗಾರ
ಪೀಠಾಧ್ಯಕ್ಷರು ಮಹಾಶೈವ ಧರ್ಮಪೀಠ ಗಬ್ಬೂರು ತಾ.ದೇವದುರ್ಗ

********

ವಿಶ್ವೇಶ್ವರ ಶಿವನ ಅನುಗ್ರಹ,ಚೆನ್ನಪ್ಪ ಗೌಡರಿಗೆ ಬಂದನು ಮೊಮ್ಮಗ !

ಚೆನ್ನಪ್ಪ ಗೌಡ ಮಾಲಿಪಾಟೀಲ ಗಬ್ಬೂರು 

*********

         ಮಹಾಶೈವ ಧರ್ಮಪೀಠದ ನಿಷ್ಠಾವಂತ ಭಕ್ತರಲ್ಲೊಬ್ಬರಾಗಿರುವ ಗಬ್ಬೂರಿನ ಚೆನ್ನಪ್ಪಗೌಡ ಮಾಲಿಪಾಟೀಲ್ ಅವರಿಗೆ ಕೈಲಾಸನಾಥ ವಿಶ್ವೇಶ್ವರನು ಮೊಮ್ಮಗನನ್ನು ಕರುಣಿಸಿ,ತನ್ನ ಭಕ್ತವತ್ಸಲ ಲೀಲೆಯನ್ನು ಮೆರೆದಿದ್ದಾನೆ.ಚೆನ್ನಪ್ಪಗೌಡ ಮಾಲಿಪಾಟೀಲ್ ಅವರು ಮಹಾಶೈವ ಧರ್ಮಪೀಠದ ಅತ್ಯಂತ ನಿಷ್ಠಾವಂತ ಭಕ್ತರಾಗಿದ್ದು ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರನ್ನು ಕೇಳದೆ ಯಾವುದೇ ಕೆಲಸ ಕಾರ್ಯ ಮಾಡುವುದಿಲ್ಲ.

ಚೆನ್ನಪ್ಪಗೌಡರ ಏಕ ಮಾತ್ರ ಪುತ್ರಿ ಶ್ರೀಮತಿ ಐಶ್ವರ್ಯ ಅವರಿಗೆ ಮಕ್ಕಳಾಗಿರಲಿಲ್ಲವಾಗಿದ್ದರಿಂದ 18.09.2022 ರಂದು ವಿಶ್ವೇಶ್ವರನ ಸನ್ನಿಧಿಗೆ ಬಂದು ಪ್ರಾರ್ಥಿಸಿದ್ದರು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಚೆನ್ನಪ್ಪಗೌಡ ಪ್ರೇಮಾ ದಂಪತಿಗಳ ನಿವೇದನೆಯನ್ನು ವಿಶ್ವೇಶ್ವರ ಶಿವನಲ್ಲಿ ಸಮರ್ಪಿಸಿ’ ಚಿಂತಿಸಬೇಡಿ,ವಿಶ್ವೇಶ್ವರ ಶಿವನು ಗಂಡು ಸಂತಾನವನ್ನು ಅನುಗ್ರಹಿಸುವನು’ ಎಂದು ಶಿವಾಭಯ ನೀಡಿದ್ದರು.

ಇಂದು ಅಂದರೆ 03.08.2023 ರ ಗುರುವಾರದಂದು ಶ್ರೀಮತಿ ಐಶ್ವರ್ಯ ಅವರು ರಾಯಚೂರಿನ ಚೇತನ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಚೆನ್ನಪ್ಪಗೌಡ ಮಾಲಿಪಾಟೀಲ್ ಅವರು ರಾಯಚೂರಿನಿಂದ ಪೀಠಾಧ್ಯಕ್ಷರಿಗೆ ದೂರವಾಣಿ ಕರೆಮಾಡಿ ಸಂತಸವನ್ನು ಹಂಚಿಕೊಂಡು ವಿಶ್ವೇಶ್ವರ ಶಿವನಿಗೆ ಕೃತಜ್ಞತಾಪೂರ್ವಕ ನಮನಗಳನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *