ವಕೀಲರ ಸಂಘದಿಂದ ಸಚಿವ ದರ್ಶನಾಪುರರಿಗೆ ಸನ್ಮಾನ : ವಕೀಲರ ಭವನ ನಿರ್ಮಾಣಕ್ಕೆ ನಿವೇಶನದ ಭರವಸೆ

ಶಹಾಪುರ : ಶಾಸಕನಾಗಿ ಆಯ್ಕೆಯಾದಾಗಿನಿಂದಲೂ ನನ್ನನು ವಕೀಲರ ಸಂಘ ಆತ್ಮೀಯವಾಗಿ ಗೌರವಿಸುತ್ತಾ ಬಂದಿದೆ. ಸಂಘದ ಯಾವುದೇ ಬೇಡಿಕೆಗೂ ನಾನು ಸಹ ಸ್ಪಂಧಿಸಿರುವೆ. ತಮ್ಮ ಪ್ರೀತಿ ವಿಶ್ವಾಸಕ್ಕೆ ನಾನೆಂದಿಗೂ ಚಿರರುಣಿಯಾಗಿರುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
         ನಗರದ ನ್ಯಾಯಾಲಯದಲ್ಲಿ ವಕೀಲರ ಸಭಾಂಗಣದಲ್ಲಿ ವಕೀಲರ ಸಂಘ ಆಯೋಜಿಸಿದ್ದ ಸಮಾರಂಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ  ಮಾತನಾಡಿದ ಅವರು.ಸಂಘದ ಬೇಡಿಕೆಯಂತೆ ಶಹಾಪುರಕ್ಕೆ ಜಿಲ್ಲಾ ಉಪ ವಿಭಾಗ ಕೇಂದ್ರದ ಘೋಷಣೆಗೆ ನಾನು ಪ್ರಯತ್ನಿಸುತ್ತರುವೆ. ಸರ್ಕಾರಿ ನಿಯಮಾನುಸಾರ ಆ ಕೆಲಸವನ್ನು ಮಾಡಲು ಎಲ್ಲರೂ ಶ್ರಮಿಸೋಣ.  ವಕೀಲರ ಭವನ ನಿರ್ಮಾಣಕ್ಕೆ ಬೇಕಿರುವ ನಿವೇಶನವನ್ನು ತಾವೇ ಖುದ್ದಾಗೆ ನಗರ ವ್ಯಾಪ್ತಿ ಸಿಎ ಸೈಟ್ ಗುರುತಿಸಿದಲ್ಲಿ ಶೀಘ್ರದಲ್ಲಿ ನಿಯಮನುಸಾರ ಅದನ್ನು ಸಂಘಕ್ಕೆ ಕಲ್ಪಿಸುವ ಕಾರ್ಯ ಮಾಡುತ್ತೇನೆ. ಇನ್ನೂ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ನನ್ನ ಅಧಿಕಾವಧಿ ಅನುದಾನ ಕಲ್ಪಿಸಲಾಗಿತ್ತು. ನ್ಯಾಯಾಧೀಶರ ವಸತಿ ಕಟ್ಟಡಕ್ಕೂ ಅನುದಾನ ಕಲ್ಪಿಸುವ ಕಾರ್ಯ ಮಾಡಿದ್ದೇನೆ ಎಂದರು.
                       ವೇದಿಕೆ ಮೇಲೆ ಸಂಘದ ಅಧ್ಯಕ್ಷ ಸಂತೋಷ ದೇಶಮುಖ, ಉಪಾಧ್ಯಕ್ಷ ಶರಣಪ್ಪ ಪ್ಯಾಟಿ, ಕಾರ್ಯದರ್ಶಿ ಭೀಮನಗೌಡ ಮಾಲಿಪಾಟೀಲ್ ಉಪಸ್ಥಿತರಿದ್ದರು. ಖಜಾಂಚಿ ಚೇತನಕುಮಾರ ಹಿರೇಮಠ, ಮಹಿಳಾ ಪ್ರತಿನಿಧಿ ಸತ್ಯೆಮ್ಮ ಹೊಸಮನಿ, ಜಂಟಿ ಕಾರ್ಯದರ್ಶಿ ಭೀಮರಾಜ ಮೂಲಿಮನಿ, ವಿನಯರಡ್ಡಿ ಗೂಗಲ್ ಸೇರಿದಂತೆ ಹಿರಿಯ, ಕಿರಿಯ ವಕೀಲರು ಭಾಗವಹಿಸಿದ್ದರು.
****
ನಗರಕ್ಕೆ ಶಾಶ್ವತ ಕುಡಿಯುವ ನೀರು ನಗರಕ್ಕೆ ಕುಡಿಯುವ ನೀರಿನ ತೊಂದರೆ ಇದ್ದು ಬೇಸಿಗೆ ಕಾಲದಲ್ಲಿ ನಗರದ ಜನರು ನೀರಿಗಾಗಿ ಪರಿತಪಿಸುವ ಸ್ಥಿತಿ ಇದೆ. ಇನ್ನೆರೆಡು ತಿಂಗಳಲ್ಲಿ ಭೀಮಾ ನದಿ ಮೂಲಕ ನಗರಕ್ಕೆ ಪೈಪ್ ಲೈನ್ ಮೂಲಕ ಕುಡಿಯುವ ನೀರಿನ ಸೌಕರ್ಯ ಕಲ್ಪಿಸುವ ಯೋಜನೆ ಸಾಕಾರಗೊಳ್ಳಲಿದೆ. ಇಷ್ಟರಲ್ಲಿಯೇ ನಗರದ ಪ್ರತಿ ಮನೆಗೆ ಕುಡಿಯವ ನೀರು ಬರಲಿದ್ದು, ಶಾಶ್ವತವಾಗಿ ನೀರು ಸೌಲಭ್ಯ ದೊರೆಯಲಿದೆ. ಬಡವರಿಗಾಗಿ ನಿವೇಶನ ಹಂಚಿಕೆ ನ್ಯಾಯಾಲಯದ ಮೆಟ್ಟಿಲೇರಿರುವ ಕುರಿತು ತಮಗೆಲ್ಲರಿಗೂ ಗೊತ್ತಿದೆ. ಇಷ್ಟರಲ್ಲಿ ಅದು ಅರ್ಹ ಬಡವರಿಗೆ ನಿವೇಶನ ಹಂಚುವ ಕೆಲಸ ಮಾಡಲಾಗುತ್ತದೆ. ನಗರ ಸೌಂದರ್ಯಕ್ಕೂ ಇನ್ನೂ ಹಲವಾರು ನನ್ನ ಕನಸಿನ ಯೋಜನೆಗಳಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅವುಗಳನ್ನು ಕೈಗೊಳ್ಳಲಾಗುವದು ಎಂದು ಸಚಿವ ದರ್ಶನಾಪುರ ತಿಳಿಸಿದರು.

About The Author