ವಡಗೇರಾ ತಾಲೂಕು ಅಭಿವೃದ್ಧಿಪಡಿಸುವಂತೆ ಬಸವರಾಜ ಪಡುಕೋಟೆ ಒತ್ತಾಯ

ವಡಗೇರಾ : ವಡಗೇರಾ ತಾಲೂಕಿನಲ್ಲಿ ಹಲವಾರು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ತಾಲೂಕ ಕೇಂದ್ರವಾಗಿ ಸುಮಾರು ವರ್ಷಗಳ ಕಳೆದರೂ ಕೂಡ ಯಾವುದೇ ರೀತಿಯಾದ ಮೂಲಭೂತ ಸೌಕರ್ಯಗಳಿಲ್ಲ. ತಾಲೂಕು ಕಚೇರಿಗಳಿಲ್ಲ.  ತಾಲೂಕು ಕೇಂದ್ರವಾದರೂ ಗ್ರಾಮ  ಪಂಚಾಯತಿಯಾಗಿಯೆ ಉಳಿದಿದೆ. ವಡಗೇರಾವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ ದರ್ಜೆ ಏರಿಸಬೇಕು ಎಂದು ನಮ್ಮ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ ಪಡುಕೋಣೆ ಹೇಳಿದರು.
      ಯಾದಗಿರಿ ಜಿಲ್ಲಾ ಘಟಕ ವತಿಯಿಂದ  ನಮ್ಮ ಕರ್ನಾಟಕ  ಸೇನೆಯ ಕಾರ್ಯಕರ್ತರ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಮಾತನಾಡಿದ ಅವರು,ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಶಿಕ್ಷಕರ ಕೊರತೆ ನೀಗಿಸಬಹುದು. ಗ್ರಾಮೀಣ ಭಾಗದಲ್ಲಿ ಶುದ್ಧ ನೀರಿನ ಘಟಕಗಳು ಸಂಪೂರ್ಣವಾಗಿ ಕೆಟ್ಟು ನಿಂತಿವೆ.  ಶಾಸಕರು ಕಳೆದ ಕೆಲ  ದಿನಗಳ ಹಿಂದೆ ಗ್ರಾಮೀಣ ಭಾಗಕ್ಕೆ ಭೇಟಿ ನೀಡಿದ ಸಮಯದಲ್ಲಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ  ಸೂಚನೆ ನೀಡಿದ್ದರು. ಆದರೆ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ರೀತಿಯ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಕೂಡಲೇ ಶಾಸಕರು ಅಧಿಕಾರಿಗಳು  ವಡಗೇರಾ ಪಟ್ಟಣ ಮತ್ತು ಗ್ರಾಮೀಣ ಭಾಗಕ್ಕೆ ಮೂಲಭೂತ ಸೌಕರ್ಯ ಒದಗಿಸಿಕೊಡುವಂತೆ ಬಸವರಾಜ ಪಡುಕೋಟೆ ಒತ್ತಾಯಿಸಿದ್ದಾರೆ.  ಒಂದು ವೇಳೆ ವಿಳಂಬ ಮಾಡಿದ್ದಲ್ಲಿ  ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
       ವಡಗೇರಾ ತಾಲೂಕು ಯುವ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲೂಕು ಉಪಾಧ್ಯಕ್ಷರಾಗಿ ಶಿವ ಗೋನಾಲ, ತಾಲೂಕು ಯುವ ಘಟಕ ಗೌರವ ಅಧ್ಯಕ್ಷರಾಗಿ ತಿಮ್ಮಣ್ಣ ಕಡೆಚೂರ,ತಾಲೂಕು ಸಲಹೆಗಾರರಾಗಿ ಅಯ್ಯಪ್ಪ ನಾಟೇಕಾರ, ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ ಸಿದ್ದಪ್ಪ ಕಡೆಚೂರ, ಸಹ ಕಾರ್ಯದರ್ಶಿಯಾಗಿ ದೇವಪ್ಪ ಜಟ್ಟಿ,ಇವರನ್ನು ನೇಮಕ ಮಾಡಲಾಯಿತು.
         ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಸಂಚಾಲಕರಿದ  ಭೀಮಣ್ಣ ಶಖಾಪುರ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾಧ್ಯಕ್ಷರಾದ ರಂಗಯ್ಯ ಮುಸ್ತಾಜೀರ್,  ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀದೇವಿ ಕಟ್ಟಿಮನಿ,ವಡಗೇರಾ ತಾಲೂಕು ಅಧ್ಯಕ್ಷ, ಸಂತೋಷ್ ಬೂಜ್ಜಿ, ಶ್ರೀಧರ್ ರೆಡ್ಡಿ ಹೊತಪೇಟ, ಹುಲಿಗೆಪ್ಪ ಪಾಳೇಗಾರ,ರಾಜು ಚವಾಣ,ಶ್ರೀಧರ್ ನಾಯಕ, ಸಿದ್ದು ಪಟ್ಟೆದಾರ,ವೆಂಕಟೇಶ, ಮರಿಲಿಂಗ ಗೋನಾಲ,ಜಿಲ್ಲಾ ಪದಾಧಿಕಾರಿಗಳು ಎಲ್ಲಾ ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

About The Author