ಕೆಸರು ಗದ್ದೆಯಂತಾದ ಕನ್ಯೆಕೋಳೂರು ರಸ್ತೆಗಳು ಪ್ರತಿಭಟನೆಯ ಎಚ್ಚರಿಕೆ

ಶಹಾಪುರ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕನ್ಯೆಕೋಳೂರು ಗ್ರಾಮದಲ್ಲಿನ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ಸಾರ್ವಜನಿಕರು ಓಡಾಡಲು ಬಾರದ ಹಾಗಾಗಿವೆ ಎಂದು ಗ್ರಾಮಸ್ಥ ರಾಜಪ್ಪ ತಿಮ್ಮನ್ನೂರ್ ಆರೋಪಿಸಿದ್ದಾರೆ.ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಗ್ರಾಮದ ಮೂರನೇ ವಾರ್ಡ್ನ ರಸ್ತೆಗಳು ಹಾಳಾಗಿದ್ದು, ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗಮನಹರಿಸುತ್ತಿಲ್ಲ. ರಸ್ತೆಯಲ್ಲಿ ನೀರು ನಿಂತಿದ್ದು, ಕನಿಷ್ಠ ಪಕ್ಷ ಮರಂ ಹಾಗದೇ ಇದ್ದ ಕಾರಣ ಸಾರ್ವಜನಿಕರು ಓಡಾಡದಂತಾಗಿದೆ ಎಂದು ತಿಳಿಸಿದ್ದಾರೆ. ರಸ್ತೆಗಳನ್ನು ದುರಸ್ತಿ ಮಾಡದಿದ್ದರೆ ಪಂಚಾಯಿತಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *