ಮಹಾಶೈವ ಧರ್ಮಪೀಠ ವಾರ್ತೆ : ಮಹಾಶೈವ ಧರ್ಮಪೀಠದಲ್ಲಿ 55 ನೆಯ ಶಿವೋಪನ ಕಾರ್ಯ

ಮಹಾಶೈವ ಧರ್ಮಪೀಠದಲ್ಲಿ ಜುಲೈ 30 ರ ರವಿವಾರದಂದು 55 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಶ್ರೀಕ್ಷೇತ್ರ ಕೈಲಾಸವನ್ನರಸಿ ಬಂದಿದ್ದ ಭಕ್ತರುಗಳಿಗೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.

ಮಹಾಶೈವ ಧರ್ಮಪೀಠದ ಮೂಲ‌ ಕಾರ್ಯಕರ್ತರಾದ ಗೋಪಾಲ ಮಸೀದಪುರ ಅವರ ಮಗನಿಗೆ ಮಗುವಾಗಿದ್ದುದು ಇಂದಿನ ಶಿವೋಪಶಮನದ ವಿಶೇಷವಾಗಿತ್ತು.ಗೋಪಾಲ ಅವರ‌ ಮಗ ಕಾಳಿದಾಸ ಮತ್ತು ಸೊಸೆ ಗೀತಾ ಅವರಿಬ್ಬರು ಸಂತಾನಾರ್ಥಿಗಳಾಗಿ 02.09.2022 ರಂದು ನಡೆದ ಶಿವೋಪಶಮನಕ್ಕೆ ಬಂದಿದ್ದರು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಕ್ಷೇತ್ರೇಶ್ವರ ವಿಶ್ವೇಶ್ವರನನ್ನು ಪ್ರಾರ್ಥಿಸಿ ಕಾಳಿದಾಸ ಗೀತಾ ದಂಪತಿಗಳಿಗೆ ಸಂತಾನನೀಡಲು ಪ್ರಾರ್ಥಿಸಿ,ಕಾಯಿ ಮಂತ್ರಿಸಿ ಕೊಟ್ಟಿದ್ದರು.ಮೊನ್ನೆ ಜುಲೈ 14 ರ ಶುಕ್ರವಾರದಂದು ಶ್ರೀಮತಿ ಗೀತಾ ಅವರು ಹೆಣ್ಣುಮಗುವಿನ‌ ತಾಯಿಯಾಗಿದ್ದಾರೆ.ಆ ಸಂತಸಕ್ಕಾಗಿ ಗೋಪಾಲ ಮಸೀದಪುರ ಅವರು ಇಂದಿನ ದಾಸೋಹದಲ್ಲಿ ಸಿಹಿಹಂಚಿ,ಸಂಭ್ರಮಿಸಿದರು .ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಕಾಳಿದಾಸನನ್ನು ಸನ್ಮಾನಿಸಿ,ಶಿವಾನುಗ್ರಹ ಕರುಣಿಸಿದರು.ಮಹಾಶೈವ ಧರ್ಮಪೀಠದಲ್ಲಿ ಶಿವೋಪಶಮನ ಕಾರ್ಯ ಪ್ರಾರಂಭವಾಗಿ ಒಂದು ವರ್ಷವಾಗಿದ್ದು ಈ ಅವಧಿಯಲ್ಲಿ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು 25 ಕ್ಕೂ ಹೆಚ್ಚುಜನ ಸಂತಾನಾರ್ಥಿಗಳಾಗಿ ವಿಶ್ವೇಶ್ವರನ ಸನ್ನಿಧಿಯನ್ನರಸಿ ಬಂದಿದ್ದ ದಂಪತಿಗಳಿಗೆ ಶಿವಾನುಗ್ರಹ ಸಂತಾನ ಕಾಯಿ ಮಂತ್ರಿಸಿ ಕೊಟ್ಟಿದ್ದು ಅವರಲ್ಲಿ ಹನ್ನೆರಡು ಜನರಿಗೆ ಮಕ್ಕಳಾಗಿದ್ದು ಆರುಜನ ಮಹಿಳೆಯರು ಗರ್ಭಿಣಿಯರಾಗಿದ್ದಾರೆ.ಮದುವೆಯಾಗಿ ಹತ್ತು ಹದಿನೈದು ವರ್ಷಗಳಾಗಿಯೂ ಮಕ್ಕಳಾಗದೆ ಇದ್ದವರು ವಿಶ್ವೇಶ್ವರ ಶಿವನ ಅನುಗ್ರಹದಿಂದ ಮಕ್ಕಳನ್ನು ಪಡೆದಿದ್ದಾರೆ.ವಿಶ್ವೇಶ್ವರ ಶಿವನು ನಿಶ್ಚಿತವಾಗಿ ಸಂತಾನ ಭಾಗ್ಯ ಕರುಣಿಸುತ್ತ ‘ ಸಂತಾನೇಶ್ವರ ಶಿವ’ ನೆಂದು ಪ್ರಸಿದ್ಧಿಗೊಂಡಿದ್ದಾನೆ.ಸಂತಾನಾರ್ಥಿಗಳು ಮೂರುವಾರಗಳ ಕಾಲ ಮದ್ಯ ಮಾಂಸ ಸೇವನೆಯನ್ನು ತ್ಯಜಿಸಿ,ಶಿವ ವಿಶ್ವೇಶ್ವರನ ಪೂಜೆಯನ್ನು ಮಾಡಬೇಕು ಎನ್ನುವ ನಿಯಮ ಒಂದನ್ನು ಮಾತ್ರ ಪಾಲಿಸಲು ಪೀಠಾಧ್ಯಕ್ಷರು ಸೂಚಿಸುತ್ತಾರೆ.ಇದರ ಹೊರತು ಯಾವ ಕಠಿಣ ನಿಯಮಗಳನ್ನಾಗಲಿ,ವ್ರತಗಳನ್ನಾಗಲಿ ಆಚರಿಸಲು ಹೇಳುವುದಿಲ್ಲ ಎನ್ನುವುದು ಗಮನಾರ್ಹ ಸಂಗತಿ.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳು ಪದಾಧಿಕಾರಿಗಳಾದ ಗೋಪಾಲ ಮಸೀದಪುರ,ಶಿವಾನಂದ ಹಿಂದುಪುರ,ಗುರುಬಸವ ಹುರಕಡ್ಲಿ,ಶಿವಯ್ಯಸ್ವಾಮಿ ಮಠಪತಿ,ಸಿದ್ರಾಮಯ್ಯ ಸ್ವಾಮಿ ಹಳ್ಳಿ, ಪೋಲೀಸ್ ಇಲಾಖೆಯ ಎ ಎಸ್ ಐ ದಿಡ್ಡಿ ಬಸವ ಅತ್ತನೂರು, ಬೊಮ್ಮನಾಳ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾರೂ ಹಾಗೂ ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರೂ ಶಕ್ತಿ ಉಪಾಸಕರೂ ಆಗಿರುವ ಉದಯಕುಮಾರ ಪಾಂಚಾಳ,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ, ಬಸವರಾಜ ಹದ್ದಿನಾಳ,ಯಲ್ಲಪ್ಪ ಕರಿಗಾರ ಮತ್ತು‌ ಮಹಾಶೈವ ಧರ್ಮಪೀಠದ ಪ್ರಸಾರ ವ್ಯವಸ್ಥಾಪಕ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಕಾರ್ಯಕರ್ತರುಗಳು ಹಾಗೂ ಭಕ್ತರುಗಳು ಉಪಸ್ಥಿತರಿದ್ದರು.

About The Author