ಸಗರ ಸಾಹಿತ್ಯ ಸಮ್ಮೇಳನ :  ಭೀಮಕವಿಯ ಸ್ವಾಗತ ಮಹಾದ್ವಾರ ಮಾಡಲು ಒಪ್ಪಿಗೆ, ಪ್ರತಿಭಟನೆ ಕೈಬಿಟ್ಟ ಸಂಘಟನೆಗಳು

ಶಹಾಪೂರ : ಸಗರದಲ್ಲಿ ನಡೆಯುತ್ತಿರುವ ಶಹಾಪುರ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಹೆಸರಾಂತ ರಸ್ತಾಪುರದ ಭೀಮಕವಿಗಳ ಹೆಸರನ್ನು ಸಾಹಿತ್ಯ ಸಮ್ಮೇಳನದಲ್ಲಿ ಉಲ್ಲೇಖಿಸದ ಕಾರಣ ಸಾಹಿತ್ಯ ಅಭಿಮಾನಿಗಳು ಮತ್ತು ಇತರ ಪ್ರಗತಿಪರ ಸಂಘಟನೆಗಳು ಸಗರದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದವು.ಅದಕ್ಕಾಗಿ ಇಂದು ಪ್ರಗತಿಪರರೆಲ್ಲರು  ತಾಲೂಕು ಸಾಹಿತ್ಯ ಸಮ್ಮೇಳನ ತಾಲೂಕು ಅಧ್ಯಕ್ಷರಾದ ರವೀಂದ್ರ ಹೊಸಮನಿ ಯವರನ್ನು ಭೇಟಿ ಸಮಸ್ಯೆಗಳನ್ನು ತಿಳಿಗೊಳಿಸಿದರು.
 ತಾಲೂಕು ಸಾಹಿತ್ಯ ಸಮ್ಮೇಳನದ ಆಯೋಜಕರು  ಭೀಮಕವಿಯ ಸ್ವಾಗತ ಮಹಾದ್ವಾರ ನಿರ್ಮಾಣದ ಜೊತೆಗೆ ಅಂದಿನ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಅಜೆಂಡಾದಲ್ಲಿ ರಸ್ತಾಪುರದಲ್ಲಿ ಭೀಮಕವಿಯ ಸ್ಮಾರಕ ಮತ್ತು ಸಮುದಾಯ ಭವನ ನಿರ್ಮಿಸಲು ಉಸ್ತುವಾರಿ ಸಚಿವರ ಜೊತೆಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಶಹಾಪುರದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುವುದರಿಂದ ಮುಖ್ಯ ವೇದಿಕೆಗೆ ಭೀಮಕವಿಯ ಹೆಸರಿಡಲು ಜಿಲ್ಲಾ ಸಾಹಿತ್ಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸುವುದಾಗಿ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರು ಭರವಸೆ ನೀಡಿದರು.ಆದ್ದರಿಂದ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು ಎಂದು ಶರಬಣ್ಣ ರಸ್ತಾಪುರ ತಿಳಿಸಿದರು.

ಈ ಸಂದರ್ಭದಲ್ಲಿ ಗೌಡಪ್ಪಗೌಡ ಹುಲ್ಕಲ್, ಶಖಾಪುರ, ಶಿವರೆಡ್ಡಿ ಹುಲ್ಕಲ್,ದೇವೆಂದ್ರಪ್ಪ ಮೇಟಿ, ಅಶೋಕ ದಿನ್ನಿ, ಮಲ್ಲಿಕಾರ್ಜುನ ಕಂದುಕುರ, ಶೇಖರ ದೊರಿ, ಗೌಡಪ್ಪ ಶಾಖಾಪುರ, ಶಂಕರ ಹುಲ್ಕಲ, ನಿಂಗಣ್ಣ ಹಬ್ಬಳ್ಳಿ ಶ್ರೀಶೈಲ ನಾಗನಟಗಿ, ಮರಿಯಪ್ಪ ಶಿಕ್ಷಕರು ಸೇರಿದಂತೆ ಇತರ ಪ್ರಗತಿಪರ ಇದ್ದರು.

About The Author