ಅಯ್ಯಪ್ಪಗೌಡ ಗಬ್ಬೂರ ಅವರಿಗೆ ಕುರಿ ಮತ್ತು ಉಣ್ಣೆ ನಿಗಮ ಮಂಡಳಿ ಅಧ್ಯಕ್ಷರು ಸ್ಥಾನ ನೀಡುವಂತೆ ಮಹಾಸಿದ್ಧೇಶ್ವರ ಶ್ರೀಗಳು ಆಗ್ರಹ

ಬೆಂಗಳೂರು: ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಕುರುಬ ಸಮುದಾಯದ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿ ಸಮುದಾಯಕ್ಕೆ ಹಾಗೂ ಸಮಾಜ ಸೇವಕರಾಗಿ ಸೇವೆ ಮಾಡಿದ ಅಯ್ಯಪ್ಪಗೌಡ ಗಬ್ಬೂರು ರಾಜ್ಯ ಉಪಾಧ್ಯಕ್ಷರು ಕರ್ನಾಟಕ ಪ್ರದೇಶ ಕುರುಬರ ಸಂಘದ ಯುವ ಘಟಕ ಗಾಂಧಿನಗರ ಬೆಂಗಳೂರು ಹಾಗೂ ಕೆಪಿಸಿಸಿ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿಯಾಗಿದ್ದು ಅವರನ್ನು ಬೆಂಗಳೂರು ಕರ್ನಾಟಕ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕೆಂದು ಶ್ರೀ ಮಹಾಸಿದ್ಧೇಶ್ವರ ಕರ್ಮಯೋಗಿ ಮಠ ಸುಕ್ಷೇತ್ರ ಜಂಬಗಿ ಪೂಜ್ಯರು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಪಕ್ಷದ ಹಿರಿಯ ನಾಯಕರು ವಹಿಸಿದ ಜವಾಬ್ದಾರಿಗಳನ್ನು ಶಿಸ್ತಿನ ಸಿಪಾಯಿಯಂತೆ ನಿರ್ವಹಿಸಿದ್ದು, ಪಕ್ಷ ಸಂಘಟನೆಗೆ ಹಗಲಿರುಳು ಶ್ರಮಿಸುವುದರೊಂದಿಗೆ ಹಾಲುಮತ ಸಮಾಜದ ಕಾರ್ಯಕ್ಕೂ ಹೆಗಲುಗೊಟ್ಟು ಕೆಲಸ ಮಾಡಿದ್ದಾರೆ.ಸಾಮಾಜಿಕ ಕಾರ್ಯಗಳನ್ನು ತಮ್ಮ ಕೈಲಾದಷ್ಟುಮಟ್ಟಿಗೆ ಮಾಡುವ ಮೂಲಕ ಕುರಿಗಳು ಸಾವನ್ನಪ್ಪಿದ ಸಂದರ್ಭದಲ್ಲಿ ಹಲವಾರು ಹೋರಾಟ ಮಾಡಿ ಕುರಿಗಾರರಿಗೆ ನ್ಯಾಯ ಒದಗಿಸಿದ್ದಾರೆ. ರಾಜ್ಯದಲ್ಲಿ ಕುರಿಗಾಹಿಗಳು ಸಂಕಷ್ಟದಲ್ಲಿದ್ದಾರೆ. ಸಂಬಂಧಿಸಿದ ಸಚಿವರು ಅಧಿಕಾರಿಗಳ ಜೊತೆ ತಕ್ಷಣವೇ ಮಾತನಾಡಿ ಸಮಸ್ಯೆ ಬಗೆಹರಿಸುತ್ತಾರೆ.ಇಂತಹ ಯುವಕರಿಗೆ ಸರಕಾರದಲ್ಲಿ ಸೂಕ್ತ ಸ್ಥಾನ ಮಾನ ದೊರೆತರೆ ಅದರಿಂದ ಸಕಲರಿಗೂ ಒಳಿತಾಗುತ್ತದೆ.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಯ್ಯಪ್ಪಗೌಡ ಗಬ್ಬೂರು ಅವರಿಗೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕೆಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *