ಬೊಮ್ಮನಹಳ್ಳಿ ಕೆಸರು ಗದ್ದೆಯಂತಾದ ರಸ್ತೆ, ಕ್ಯಾರೆ ಎನ್ನದ ಗ್ರಾಮ ಪಂಚಾಯಿತಿ ಅಧಿಕಾರಿಗಳು

Yadagiri ವಡಗೇರಾ : ತಾಲೂಕಿನ ಗುಂಡಗುರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೊಮ್ಮನಹಳ್ಳಿ ಗ್ರಾಮದೊಳಗಿನ ರಸ್ತೆ ಮಳೆಯಿಂದಾಗಿ ಕೆಸರು ಗದ್ದೆಯಂತಾಗಿ ಮಾರ್ಪಟ್ಟಿದೆ.ಈ ಮೊದಲು ಗ್ರಾಮ ಪಂಚಾಯಿತಿಯವರಿಗೆ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಲವು ಬಾರಿ ಗಮನಕ್ಕೆ ತಂದರು ಅವರ ನಿಷ್ಕಾಳಜಿಯಿಂದ ಇಂದು ಮನೆಗಳಿಗೆ ಸಾರ್ವಜನಿಕರು ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

        ಗ್ರಾಮೀಣ ಅಭಿವೃದ್ಧಿಗಾಗಿ ಸರಕಾರ ಸಿಸಿ ರಸ್ತೆ ಸೇರಿದಂತೆ ಗ್ರಾಮದೊಳಗಿನ ಕುಡಿಯುವ ನೀರು ರಸ್ತೆಗಳಿಗೆ ಲಕ್ಷಾನುಗಟ್ಟಲೆ ಅನುದಾನ ಒದಗಿಸಿಕೊಡುತ್ತದೆ. ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ಸಾರ್ವಜನಿಕರು ಇಂದು ಪರದಾಡುವಂತಹ ಪರಿಸ್ಥಿತಿ ಬಂದಿದೆ.

   ಗ್ರಾಮದಲ್ಲಿನ ಸುಮಾರು 100 ಮನೆಗಳಿಗೆ ಮತ್ತು ಅಂಗನವಾಡಿ ಕೇಂದ್ರಕ್ಕೆ ಹೋಗುವ ರಸ್ತೆ ಇದಾಗಿದ್ದು, ಈ ದಾರಿ ಇಂದು ಮಳೆಯಿಂದಾಗಿ ಮನೆಯಿಂದ ಹೊರಗೆ ಬಾರದೆ ನಡೆದಾಡದ ಪರಿಸ್ಥಿತಿ ಉಂಟಾಗಿದೆ. ಈ ರಸ್ತೆಗೆ ಮಳೆ ಬಾರದಕ್ಕಿಂತ ಮುಂಚೆ ಕೆಂಪು ಮಣ್ಣು ಹಾಕಿದರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ.ಸಿಸಿ ರಸ್ತೆಯನ್ನಾದರೂ ಮಾಡಬಹುದಿತ್ತು.ಆದರೆ ಗ್ರಾಮ ಪಂಚಾಯಿತಿ ನಿರ್ಲಕ್ಷದಿಂದ ಈ ಸ್ಥಿತಿ ಉಂಟಾಗಿದೆ. ಕೂಡಲೇ ಪಿಡಿಒ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕೋರ್ಟ್ನಲ್ಲಿ ಪ್ರಕರಣ ದಾಖಲಿಸಲಾಗುವುದು.

ಮಲ್ಲರಾಯ ನಾಟೇಕಾರ ವಕೀಲರು ಶಹಾಪುರ

Leave a Reply

Your email address will not be published. Required fields are marked *